For Quick Alerts
  ALLOW NOTIFICATIONS  
  For Daily Alerts

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ 40

  By ನಾಗರತ್ನ ಅಂದಾನಪ್ಪ
  |

  ಚಂದನವನದ ಅಂಗಳದಲ್ಲಿ ಬೆಳಗುತ್ತಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಇಂದು 40ನೇ ಹುಟ್ಟುಹಬ್ಬದ ಸಂಭ್ರಮ. Life begins at 40ಎಂಬ ಮಾತಿದೆ. ಕಿಚ್ಚ ಸುದೀಪ್ ಅವರು ತಮ್ಮ ಬಹುಮುಖಪ್ರತಿಭೆ ಮೂಲಕ ಕನ್ನಡಿಗರಷ್ಟೇ ಅಲ್ಲದೆ ಇಡೀ ದೇಶದ ಸಿನಿರಸಿಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಿರೂಪಕರಾಗಿ ಕಿಚ್ಚ ಸುದೀಪ್ ಗೆದ್ದಿದ್ದಾರೆ. ಸುದೀಪ್ ಬೆನ್ನ ಹಿಂದೆ 'ಈಗ' , ಬಚ್ಚನ್ ಗೆಲುವಿದೆ. ಅಪಾರ ಅಭಿಮಾನಿ ಸಮೂಹವಿದೆ. ಮುಂದೇನು?

  ಕನ್ನಡ, ಹಿಂದಿ ಹಾಗೂ ತೆಲುಗು ಸೇರಿದಂತೆ ಸುಮಾರು 55ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಸುದೀಪ್ ಇಂದು ಬಹುಬೇಡಿಕೆಯ ನಟ. ಸುದೀಪ್ ಈಗ ಬರೀ ನಾಯಕ ನಟರಾಗಿ ಉಳಿದಿಲ್ಲ. ನಿರ್ದೇಶಕ, ಗಾಯಕ, ಖಳನಟ, ನಿರೂಪಕ, ಉತ್ತಮ ಸಂಘಟಕರಾಗಿ ಎಲ್ಲರ ಗಮನ ಸೆಳೆದಿದ್ದಾರೆ.

  ಕಳೆದ ರಾತ್ರಿಯಿಂದಲೇ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಸುದೀಪ್ ಅವರ ಜೆಪಿ ನಗರ ನಿವಾಸಕ್ಕೆ ಆಗಮಿಸಿ ಕೇಕ್ ಕತ್ತರಿಸಿ ಶುಭ ಹಾರೈಸಿದ್ದಾರೆ. ಸುದೀಪ್ ಅವರ ಆಪ್ತ ಮಿತ್ರರಾದ ಅರುಣ್ ಸಾಗರ್, ದರ್ಶನ್ ತೂಗುದೀಪ ಸೇರಿದಂತೆ ಚಿತ್ರರಂಗದ ಗಣ್ಯರು ಶುಭಕೋರಿದ್ದಾರೆ.

  ಸುದೀಪ್ ಅವರ ಫಿಲ್ಮಿ ಜರ್ನಿ, ವೈಯಕ್ತಿಕ ಬದುಕು ಹಾಗೂ ಸಿನಿಮಾ ರಂಗದ ವಿವಿಧ ವಿಭಾಗದಲ್ಲಿ ಕಲಿಕೆ ಬಗ್ಗೆ ಅವರಿಗಿರುವ ಆಸಕ್ತಿ, ಉದ್ಯಮಕ್ಕಾಗಿ ಅವರು ಕಂಡಿರುವ ಕನಸು, ಅಭಿಮಾನಿಗಳ ಪಾಲಿನ ಕಿಚ್ಚ ಬೆಳೆದು ಬಂದ ಹಾದಿಯ ಹಿನ್ನೋಟ ಇಲ್ಲಿದೆ ತಪ್ಪದೇ ಓದಿ...

  ಶಿವಮೊಗ್ಗದ ಹುಡುಗ

  ಶಿವಮೊಗ್ಗದ ಹುಡುಗ

  ಶಿವಮೊಗ್ಗದ ಮೂಲದ ಸುದೀಪ್ ಅವರ ತಂದೆ ಸಂಜೀವ್(ಸರೋವರ್ ಹೋಟೆಲ್ ಗಳ ಮಾಲೀಕ) ತಾಯಿ ಸರೋಜಾ ಉಡುಪಿ ಮೂಲದವರು. ಸುದೀಪ್ ಬೆಳೆದಿದ್ದು ಚಿಕ್ಕಮಗಳೂರಿನ ಎನ್ ಆರ್ ಪುರದಲ್ಲಿ, ಓದಿದ್ದು ಶಿವಮೊಗ್ಗದ ವಾಸವಿ ವಿದ್ಯಾಲಯ ಸ್ಕೂಲ್, ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಓದಿದ ಸುದೀಪ್ ಅವರು ಪ್ರಿಯಾರನ್ನು ಮೆಚ್ಚಿ ಮದುವೆಯಾದರು ದಂಪತಿಗೆ ಸಾನ್ವಿ ಎಂಬ ಮುದ್ದಾದ ಮಗುವಿದೆ. ಅಕ್ಕಂದಿರ ಮುದ್ದಿನ ತಮ್ಮ ಸುದೀಪ ಈಗ ಚಿತ್ರರಂಗದ ಆಸ್ತಿ

  ಆರಂಭದ ಸಂಕಷ್ಟ

  ಆರಂಭದ ಸಂಕಷ್ಟ

  ಪ್ರೇಮದ ಕಾದಂಬರಿ ಸಿರೀಯಲ್ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ತಾಯವ್ವ ಚಿತ್ರದಲ್ಲಿ ಪ್ರಮುಖ ಪಾತ್ರ. ಸ್ಪರ್ಶ ಚಿತ್ರದಲ್ಲಿ ನಾಯಕನ ಪಾತ್ರ. ಮುಂದೆ ನಿರ್ದೇಶನ, ಪ್ರೊಡಕ್ಷನ್, ಚಿತ್ರ ನಿರ್ಮಾಣ, ಚಿತ್ರಕಥೆ, ಹಿನ್ನೆಲೆ ಗಾಯನ, ಹಿನ್ನೆಲೆ ಧ್ವನಿ ವಿಭಾಗಗಳಲ್ಲೂ ಯಶಸ್ಸು.

  ಪ್ಯಾಟೆ ಹುಡ್ಗೀರ್ ಹಳ್ಳಿ ಲೈಪು ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡ ಸುದೀಪ್ ಇತ್ತೀಚೆಗೆ ಬಿಗ್ ಬಾಸ್ ರಿಯಾಲಿಟಿ ಶೋನ ನಿರೂಪಕನಾಗಿ ಯಶಸ್ಸು ಗಳಿಸಿದರು.

  ಜನಪ್ರಿಯತೆಯ ಉತ್ತುಂಗದಲ್ಲಿ

  ಜನಪ್ರಿಯತೆಯ ಉತ್ತುಂಗದಲ್ಲಿ

  ಸ್ಯಾಂಡಲ್ ವುಡ್ ನಲ್ಲಷ್ಟೇ ಅಲ್ಲದೆ ಟಾಲಿವುಡ್ ನಲ್ಲೂ ಸುದೀಪ್ ಜನಪ್ರಿಯ ನಟ.ರಾಜಮೌಳಿ ನಿರ್ದೇಶನದ ಈಗ ಚಿತ್ರದ ಮೂಲಕ ಮನೆ ಮಾತಾದ ಸುದೀಪ್ ಅವರಿಗೆ ಮುಂದೆ ಬಾಹುಬಲಿ ಚಿತ್ರಕ್ಕೂ ಆಫರ್ ಸಿಕ್ಕಿತು. 'ಈಗ' ಚಿತ್ರ ತಮಿಳಿನಲ್ಲೂ ಡಬ್ ಆಗಿ ಸುದೀಪ್ ಜನಪ್ರಿಯತೆ ಹೆಚ್ಚಿಸಿತು. ಹಿಂದಿಯಲ್ಲಿ ರಣ್, ರಕ್ತಚರಿತ್ರ ಚಿತ್ರಗಳಲ್ಲದೆ ಅನೇಕ ಕನ್ನಡ ಚಿತ್ರಗಳು ಡಬ್ ಆಗಿ ಉತ್ತರ ಭಾರತದಲ್ಲೂ ಜನಪ್ರಿಯರಾಗಿದ್ದಾರೆ. ಟೈಮ್ಸ್ ನಡೆಸಿದ Most Desirable Man 2012 ಪಟ್ಟಿಯಲ್ಲೂ ಸುದೀಪ್ ಗೆ ಉತ್ತಮ ಸ್ಥಾನ ದೊರೆತಿದೆ.

  ಪ್ರಶಸ್ತಿಗಳ ಸುರಿಮಳೆ

  ಪ್ರಶಸ್ತಿಗಳ ಸುರಿಮಳೆ

  ನಾಲ್ಕು ಬಾರಿ ಫಿಲಂ ಫೇರ್ ಪ್ರಶಸ್ತಿ ಗಳಿಸಿರುವ ಸುದೀಪ್ ಅವರು ಇತ್ತೀಚಿನ ವಿಷ್ಣುವರ್ಧನ ಚಿತ್ರಕ್ಕೆ ವರ್ಷದ ಅತ್ಯುತ್ತಮ ನಟ ಹಾಗೂ ಚಿತ್ರ ಪ್ರಶಸ್ತಿ ಗಳಿಸಿದ್ದಾರೆ. ವಿಡಿಯೋ ಕಾನ್ ಸುಪ್ರಭಾತ ಪ್ರಶಸ್ತಿ, ಏಷ್ಯಾನೆಟ್ ಪ್ರಶಸ್ತಿ, ಕರ್ನಾಟಕ ರಾಜ್ಯ ಶ್ರೇಷ್ಠ ನಟ ಪ್ರಶಸ್ತಿ, ವಿಜಯ್ ಅವಾರ್ಡ್, ಎಡಿಸನ್ ಅವಾರ್ಡ್, ಟೈಮ್ಸ್ ಫಿಲಂ ಅವಾರ್ಡ್, ದಕ್ಷಿಣ ಭಾರತ ಅಂತಾರಾಷ್ಟ್ರೀಯ ಪ್ರಶಸ್ತಿಗೆ ನಾಮಾಂಕಣಗೊಂಡಿದ್ದಾರೆ.

  ನಿರ್ದೇಶಕನಾಗಿ

  ನಿರ್ದೇಶಕನಾಗಿ

  ತಮಿಳಿನ ಚೇರನ್ ಅವರ ಮೈ ಆಟೋಗ್ರಾಫ್ ಚಿತ್ರವನ್ನು ಸಮರ್ಥವಾಗಿ ಕನ್ನಡಕ್ಕೆ ತಂದ ಸುದೀಪ್ ಮುಂದೆ ನಂ.73, ಶಾಂತಿ ನಿವಾಸ, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ ಚಿತ್ರವನ್ನು ನಿರ್ದೇಶಿಸಿದರು. ಈ ಪೈಕಿ ಜಸ್ಟ್ ಮಾತ್ ಮಾತಲ್ಲಿ ಮಾತ್ರ ಸ್ವಮೇಕ್ ಚಿತ್ರ. ಈಗ ಸುದೀಪ್ ತೆಲುಗಿನ ಮಿರ್ಚಿ ಚಿತ್ರವನ್ನು ಕನ್ನಡ ತರುತ್ತಿದ್ದಾರೆ. ರವಿಚಂದ್ರನ್-ರಮ್ಯಾಕೃಷ್ಣ ಜತೆ ಸುದೀಪ್ ಹಾಗೂ ಹೊಸ ನಾಯಕಿಯೊಬ್ಬರು ಚಿತ್ರದಲ್ಲಿ ನಟಿಸಲಿದ್ದಾರೆ.

  ಚಿತ್ರ ನಿರ್ಮಾಣ

  ಚಿತ್ರ ನಿರ್ಮಾಣ

  ಮೈ ಆಟೋಗ್ರಾಫ್ ಚಿತ್ರ ನಿರ್ಮಿಸಿ ಗೆದ್ದ ಸುದೀಪ್ ಅವರು ಮತ್ತೊಮ್ಮೆ ಹೊಸ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ ಎಂಬ ಸುದ್ದಿಯಿದೆ. ಸುದೀಪ್ ಅವರು ತಮ್ಮ ಬ್ಯಾನರ್ ಅಲ್ಲದೆ ಸ್ನೇಹಿತರಾದ ಶಂಕರೇಗೌಡ ಮುಂತಾದವರನ್ನು ಚಿತ್ರ ನಿರ್ಮಾಣಕ್ಕೆ ಪ್ರೋತ್ಸಾಹಿಸಿದ್ದಾರೆ.

  ಗಾಯಕನಾಗಿ ಸುದೀಪ್

  ಗಾಯಕನಾಗಿ ಸುದೀಪ್

  ನಟನೆ, ನಿರ್ದೇಶನ, ಚಿತ್ರ ನಿರ್ಮಾಣದ ಜತೆಗೆ ಗಾಯಕರಾಗಿ ಕೂಡಾ ಸುದೀಪ್ ಅಭಿಮಾನಿಗಳಿಗೆ ಮೆಚ್ಚುಗೆಯಾಗಿದ್ದಾರೆ. ವಾಲಿ ಚಿತ್ರದ ಓ ಸೋನಾ ಸೋನಾ.. ವಸಂತ ಮಾಸದಲ್ಲಿ. ಚಂದು ಚಿತ್ರದಲ್ಲಿ ಸೊಂಟದ್ ವಿಷ್ಯ, ರಂಗ ಎಸ್ಸೆಸ್ಸೆಲ್ಸಿಯಲ್ಲಿ ಡವ್ ಡವ್ ಡವ್ ದುನಿಯಾ ಕಣೊ

  ನಲ್ಲ ಚಿತ್ರದಲ್ಲಿ ಮಚ್ಚಾ ಡವ್ ಹೊಡೆಯೊದು, ನಂ.73 ಶಾಂತಿ ನಿವಾಸದಲ್ಲಿ ಒಂದು ಒಳ್ಳೆಕಥೆಯ ಹೇಳುವೆ

  ವೀರ ಮದಕರಿಯ ಜಿಂತಾ ತಾ ಚಿತಾ ಚಿತಾ, ಕೆಂಪೇಗೌಡದ ಹಳೆ ರೇಡಿಯೋ ಹಾಗೂ ಬಚ್ಚನ್ ಚಿತ್ರದ ಒಂಚೂದು ಬಗ್ಗಿ ಮಾತಾಡು ಹಾಡುಗಳು ಜನಪ್ರಿಯಗೊಂಡಿವೆ

  ಉತ್ತಮ ಆನ್ ಸ್ಕ್ರೀನ್ ಜೋಡಿ

  ಉತ್ತಮ ಆನ್ ಸ್ಕ್ರೀನ್ ಜೋಡಿ

  ರಮ್ಯಾ ಹಾಗೂ ಸುದೀಪ್ ನಡುವೆ ಏನೇ ಕಿತ್ತಾಟವಿರಲಿ. ಇಬ್ಬರ ಜೋಡಿಯನ್ನು ಹಿಂದಿಯ ಅಮಿತಾಬ್-ಜಯಬಾಧುರಿ ಜೋಡಿಯಂತೆ ಅಭಿಮಾನಿಗಳು ಮೆಚ್ಚಿದ್ದಾರೆ. ಮೀನಾ, ಭಾವನಾ, ರಕ್ಷಿತಾ, ರಾಗಿಣಿ ಮುಂತಾದ ಹೀರೊಯಿನ್ ಗಳ ಜತೆ ನಟಿಸಿದ್ದರೂ ಸುದೀಪ್ ಅವರ ಜತೆ ರಂಗ ಎಸ್ಸೆಸ್ಸೆಲ್ಸಿ, ಕಿಚ್ಚ ಹುಚ್ಚ, ಮುಸ್ಸಾಂಜೆ ಮಾತು ಹಾಗೂ ಜಸ್ಟ್ ಮಾತ್ ಮಾತಲ್ಲಿ ಚಿತ್ರಗಳಲ್ಲಿ ನಟಿಸಿದ ರಮ್ಯಾ ಅವರೇ ಸೂಪರ್ ಜೋಡಿ

  ಮೊದಲ ಸ್ಪರ್ಶ

  ಮೊದಲ ಸ್ಪರ್ಶ

  ತಾಯವ್ವದ ನಂತರ ಪ್ರತ್ಯರ್ಥದಲ್ಲಿ ನಟಿಸಿದ್ದ ಸುದೀಪ್ ಅವರಿಗೆ ಪೂರ್ಣ ಪ್ರಮಾಣದ ನಾಯಕನ ಪಾತ್ರ ಸಿಕ್ಕಿದ್ದು ಸ್ಪರ್ಶ ಚಿತ್ರದ ಮೂಲಕ. ರೇಖಾ ಹಾಗೂ ಸುಧಾರಣಿ ಅವರು ಪ್ರಮುಖ ಪಾತ್ರದಲ್ಲಿದ್ದರು.

  ಮುಖ್ಯ ಚಿತ್ರಗಳು

  ಮುಖ್ಯ ಚಿತ್ರಗಳು

  ಹುಚ್ಚ, ವಾಲಿ, ಸ್ವಾತಿ ಮುತ್ತು, ನಂದಿ ಎಲ್ಲವೂ ಪ್ರಶಸ್ತಿ ಜತೆಗೆ ಜನ ಮೆಚ್ಚುಗೆ ಗಳಿಸಿದ ಚಿತ್ರ

  ಮುಖ್ಯ ಚಿತ್ರಗಳು

  ಮುಖ್ಯ ಚಿತ್ರಗಳು

  ಮೈ ಆಟೋಗ್ರಾಫ್, ಮುಸ್ಸಂಜೆ ಮಾತು, ಕೆಂಪೇಗೌಡ, ವೀರ ಮದಕರಿ,ಜಸ್ಟ್ ಮಾತ್ ಮಾತಲ್ಲಿ, ಬಚ್ಚನ್

  ಇತರೆ ಚಿತ್ರರಂಗಗಳಲ್ಲಿ

  ಇತರೆ ಚಿತ್ರರಂಗಗಳಲ್ಲಿ

  ರಾಮ್ ಗೋಪಾಲ್ ವರ್ಮಾ ಅವರ ನೆಚ್ಚಿನ ನಟ ಆಗಿರುವ ಸುದೀಪ್ ಅವರು ರಣ್, ಫೂಂಕ್, ಫೂಂಕ್ 2, ರಕ್ತ್ ಚರಿತ್ರಾ 1,2(ತೆಲುಗು, ತಮಿಳಿನಲ್ಲೂ ತೆರೆ ಕಂಡಿದೆ). ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಈಗ ಚಿತ್ರದಲ್ಲಿ ಖಳನಟ ಸುದೀಪ್ ವಿರುದ್ಧ ನೊಣವೊಂದು ಸೇಡು ತೀರಿಸಿಕೊಳ್ಳುವ ಕಥೆ ಇದೆ. ಈ ಚಿತ್ರದಲ್ಲಿ ಸುದೀಪ್ ಅಭಿನಯ ವಿಶ್ವಖ್ಯಾತಿ ಗಳಿಸಿತು. ರಾಜಮೌಳಿ ಅವರ ಬಾಹುಬಲಿ ಚಿತ್ರ ಅಲ್ಲದೆ ಇನ್ನೂ ಕೆಲವು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ವಿಶೇಷ ಪಾತ್ರದಲ್ಲಿ

  ವಿಶೇಷ ಪಾತ್ರದಲ್ಲಿ

  ಗಣೇಶ್ ಅವರ ತುಂಟಾಟ ಚಿತ್ರದಲ್ಲಿ, ಮಯೂರ್ ಪಟೇಲ್ ಅವರ ಗುನ್ನ, ಧ್ಯಾನ್ ಅವರ ಜಾಕ್ ಪಾಟ್, ಮೇಘವೇ ಮೇಘವೇ, ಐತಲಕ್ಕಡಿ, ಪೊಲೀಸ್ ಸ್ಟೋರಿ 3 ಚಿತ್ರದಲ್ಲೂ ನಟಿಸಿದ್ದಾರೆ.

  ಬ್ರ್ಯಾಂಡ್ ಮೌಲ್ಯ

  ಬ್ರ್ಯಾಂಡ್ ಮೌಲ್ಯ

  ಸುದೀಪ್ ಅವರು ಈಗ ಬಹುಬೇಡಿಕೆಯ ನಟ ಹಾಗೂ ಜಾಹೀರಾತು ಪ್ರಪಂಚದಲ್ಲೂ ಬೇಡಿಕೆ ಪಡೆಯುತ್ತಿರುವ ನಟ ಆಗಿದ್ದಾರೆ. ಜಾಯ್ ಅಲುಕ್ಕಾಸ್ ಆಭರಣಗಳ ರಾಯಭಾರಿಯಾಗಿರುವ ಸುದೀಪ್ ಅವರು ಜಾಹೀರಾತುಗಳಲ್ಲಿ ತಮ್ಮನ್ನು ನೋಡಿ ಸಂತಸ ಪಟ್ಟಿದ್ದಾರೆ. ಇದೆಲ್ಲ ನನಗೆ ತುಂಬಾ ಹೊಸತು, ಜಾಯ್ ಅಲುಕ್ಕಾಸ್ ನಂಥ ಉತ್ತಮ ಬ್ರ್ಯಾಂಡ್ ಜತೆ ಕೈಜೋಡಿಸಿದ್ದಕ್ಕೆ ಖುಷಿಯಾಗಿದೆ ಎಂದಿದ್ದಾರೆ.

  ಕ್ರಿಕೆಟರ್ ಸುದೀಪ್

  ಕ್ರಿಕೆಟರ್ ಸುದೀಪ್

  ಕಾಲೇಜು ದಿನಗಳಲ್ಲಿ ವಿವಿ ಮಟ್ಟದ ನಾಯಕರಾಗಿದ್ದ ಸುದೀಪ್ ಅವರು ಅಶೋಕ್ ಖೇಣಿ ಮಾಲೀಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕರಾಗಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಕಪ್ ಗೆಲ್ಲಿಸಿಕೊಟ್ಟರು. ನಂತರ ಇಡೀ ತಂಡವನ್ನು ಬ್ಯಾಂಗ್ ಕಾಕ್ ಪ್ರವಾಸಕ್ಕೆ ಕರೆದೊಯ್ದಿದ್ದರು.

  ಆಪ್ತಮಿತ್ರರು

  ಆಪ್ತಮಿತ್ರರು

  ದರ್ಶನ್ ತೂಗುದೀಪ ಹಾಗೂ ಅರುಣ್ ಸಾಗರ್ ಅವರು ಸುದೀಪ್ ಆಪ್ತ ಮಿತ್ರರು ಎನ್ನಬಹುದು. ದರ್ಶನ್ ಅವರಂತೆ ಸುದೀಪ್ ಕೂಡಾ ಬೈಕ್, ವಾಹನಗಳ ಕ್ರೇಜ್ ಬೆಳೆಸಿಕೊಂಡಿದ್ದಾರೆ. ಹಾರ್ಲೆ ಡೆವಿಡ್ ಸನ್ ಬೈಕ್ ಹೊಂದಿದ್ದಾರೆ. ಆಗಾಗ ಕಿಚ್ಚ ಸುದೀಪ್ ಹಾಗೂ ದರ್ಶನ್ ಜತೆ ಚಿತ್ರರಂಗದ ಇತರೆ ನಟರು ಬೈಕ್ ಏರಿ ರೋಡ್ ಟ್ರಿಪ್ ಹೊರಡುತ್ತಾರೆ.

  ಅರುಣ್ ಸಾಗರ್ ಅವರ ಪ್ರತಿಭೆ ಗುರುತಿಸಿ ಸೂಕ್ತ ಅವಕಾಶ ನೀಡಿದ ಸುದೀಪ್ ಅವರನ್ನು ತುಂಬಾ ಇಷ್ಟಪಡುತ್ತಾರೆ. ಬಿಗ್ ಬಾಸ್ ನಲ್ಲಿ ಅರುಣ್ ಗೆಲುವು ಖಚಿತ ಎನ್ನುವಾಗಲೇ ವಿಜಯ್ ರಾಘವೇಂದ್ರ ಟ್ರೋಫಿ ಎತ್ತಿದ್ದರು. ಸ್ನೇಹ ಪರನಾದರೂ ಸುದೀಪ್ ವೃತ್ತಿಗೆ ಎಂದಿಗೂ ಮೋಸ ಬಗೆದವರಲ್ಲ ಎಂಬುದಕ್ಕೆ ಇದೊಂದು ನಿದರ್ಶನ

  English summary
  The most wanted actor of Sandalwood, Kiccha Sudeep turns 40 birthday today (September 2). The multi-talented actor is always in news be it for his Blockbuster movies Bachchan or Eega, or his recent television reality show Kannada Bigg Boss.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X