Just In
Don't Miss!
- News
ಉದ್ಯಮಿ ಅಜೀಂ ಪ್ರೇಮ್ಜಿ ವಿರುದ್ಧದ ಪ್ರಕರಣ ರದ್ದು
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಭುದೇವ, ಸಲ್ಮಾನ್ ಖಾನ್ ಜೊತೆಗೆ ಸುದೀಪ್ ಡ್ಯಾನ್ಸ್
ನಟ ಸುದೀಪ್ ಡ್ಯಾನ್ಸ್ ಮಾಡುವುದು ತೀರ ಕಡಿಮೆ. ಅವರೇ ಅನೇಕ ಬಾರಿ ತಾವು ಡ್ಯಾನ್ಸ್ ನಲ್ಲಿ ವೀಕ್ ಅಂತ ಹೇಳುತ್ತಾರೆ. ಡ್ಯಾನ್ಸ್ ಬಗ್ಗೆ ಹೆಚ್ಚು ಆಸಕ್ತಿ ತೋರದ ಸುದೀಪ್ ಈಗ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.
ಡ್ಯಾನ್ಸ್ ಕಿಂಗ್ ಪ್ರಭುದೇವ ಇದ್ದ ಮೇಲೆ ಡ್ಯಾನ್ಸ್ ಮಾಡಲು ಇನ್ನೆನ್ನು ಬೇಕು ಹೇಳಿ. ಸುದೀಪ್ ರನ್ನು ಈ ರೀತಿ ಕುಣಿಸಿರುವುದು ಪ್ರಭುದೇವ. ಜೊತೆಗೆ ಸಲ್ಮಾನ್ ಖಾನ್ ಸಹ ಸುದೀಪ್ ಗೆ ಸಾಥ್ ನೀಡಿದ್ದಾರೆ. ಸಲ್ಮಾನ್ ಜೊತೆಗೂಡಿ ಪ್ರಭುದೇವ ಸ್ಟೈಲ್ ನಲ್ಲಿ ಕಿಚ್ಚ ಡ್ಯಾನ್ಸ್ ಮಾಡಿದ್ದಾರೆ.
ಸಲ್ಮಾನ್ ಖಾನ್ ಬೇರ್ ಬಾಡಿ ನೋಡಿ ಸುದೀಪ್ ಹೇಳಿದ್ದೇನು?
ಪ್ರಭುದೇವ ಡ್ಯಾನ್ಸ್ ಶೈಲಿ ಸಖತ್ ಡಿಫರೆಂಟ್ ಆಗಿರುತ್ತದೆ. ತಮ್ಮ ಶೈಲಿಯನ್ನು ಸಲ್ಮಾನ್ ಹಾಗೂ ಸುದೀಪ್ ಗೆ ಪ್ರಭುದೇವ ಹೇಳಿ ಕೊಟ್ಟಿದ್ದಾರೆ. ಈ ವಿಡಿಯೋವನ್ನು ಸಲ್ಮಾನ್ ಖಾನ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಲ್ಮಾನ್ ಖಾನ್ ನಟನೆಯ 'ದಬಾಂಗ್ 3' ಸಿನಿಮಾದಲ್ಲಿ ಸುದೀಪ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಒಂದು ಬಹು ಮುಖ್ಯ ಪಾತ್ರದಲ್ಲಿ ಕಿಚ್ಚ ಅಭಿನಯಿಸುತ್ತಿದ್ದಾರೆ. ಪ್ರಭುದೇವ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.
ಈಗಾಗಲೇ, ಬಾಲಿವುಡ್ ನಲ್ಲಿ ಸಿನಿಮಾ ಮಾಡಿರುವ ಕಿಚ್ಚ ಇದೇ ಮೊದಲ ಬಾರಿಗೆ ಸಲ್ಮಾನ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 'ದಬಾಂಗ್ 3' ಸಿನಿಮಾದ ಚಿತ್ರೀಕರಣ ಸದ್ಯ ನಡೆಯುತ್ತಿದೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ