»   » ತಮಿಳುನಾಡಿನಲ್ಲಿ ಟ್ರೆಂಡಿಂಗ್ ನಲ್ಲಿದೆ ಕಿಚ್ಚನ 'ಹೆಬ್ಬುಲಿ'!

ತಮಿಳುನಾಡಿನಲ್ಲಿ ಟ್ರೆಂಡಿಂಗ್ ನಲ್ಲಿದೆ ಕಿಚ್ಚನ 'ಹೆಬ್ಬುಲಿ'!

Posted By:
Subscribe to Filmibeat Kannada

ತಮಿಳುನಾಡಿನಲ್ಲಿ ಟ್ರೆಂಡಿಂಗ್ ಟಾಪಿಕ್ ಅಂದ್ರೆ ಮುಖ್ಯಮಂತ್ರಿ ಸ್ಥಾನಕ್ಕೇರಲು ಸಿದ್ದವಾಗಿರುವ ಶಶಿಕಲಾ. ಆದ್ರೆ, ತಮಿಳುನಾಡಿನ ರಣರಂಗದಂತಹ ರಾಜಕಾರಣದ ಮಧ್ಯೆ ಕಿಚ್ಚ ಸುದೀಪ್ ಕೂಡ ಟ್ರೆಂಡಿಂಗ್ ಟಾಪಿಕ್ ಆಗಿದ್ದಾರೆ ಅಂದ್ರೆ ನಂಬಲೇಬೇಕು.

ಹೌದು, ಚೆನ್ನೈನ ಟಾಪ್ 5 ಟ್ರೆಂಡಿಂಗ್ ವಿಷಯಗಳಲ್ಲಿ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರ ಸ್ಥಾನ ಪಡೆದುಕೊಂಡಿದೆ.[ಕನ್ನಡದಲ್ಲಿ ಹಿಂದೆಂದೂ ಕಂಡಿಲ್ಲದ ಬಿಗ್ ಓಪನ್ನಿಂಗ್ ಪಡೆಯಲಿದೆ ಕಿಚ್ಚನ 'ಹೆಬ್ಬುಲಿ'! ]

Sudeep Hebbuli Is trending in Chennai

ಸದ್ಯ, ತಮಿಳುನಾಡಿನಲ್ಲಿ 'ಶಶಿಕಲಾ', 'ಪ್ರಶ್ನೆಪತ್ರಿಕೆ ಸೋರಿಕೆ', ಅಂತಹ ವಿಷ್ಯಗಳು ಟ್ರೆಂಡಿಂಗ್ ಆಗಿವೆ. ಆದ್ರೆ, ಇಂದು ಬೆಳಿಗ್ಗೆ (ಫೆಬ್ರವರಿ 7) ಚೈನ್ನೈನ ಟಾಪ್ ಟ್ರೆಂಡಿಂಗ್ ಪಟ್ಟಿಯಲ್ಲಿ 'ಹೆಬ್ಬುಲಿ' ಕಾಣಿಸಿಕೊಂಡಿರುವುದು ನಿಜಕ್ಕೂ ವಿಶೇಷವೇ ಸರಿ. ಈ ಮೂಲಕ ಸುದೀಪ್ ಅಭಿನಯದ 'ಹೆಬ್ಬುಲಿ' ಕೇವಲ ಕರ್ನಾಟಕದಲ್ಲಿ ಮಾತ್ರ ನಿರೀಕ್ಷೆ ಹುಟ್ಟುಹಾಕಿಲ್ಲ. ತಮಿಳುನಾಡು, ಆಂಧ್ರದಲ್ಲೂ ಕ್ರೇಜ್ ಹೆಚ್ಚಿಸಿದೆ ಎಂಬುದಕ್ಕೆ ಇದು ಉದಾಹರಣೆ.[ಎಕ್ಸ್ ಕ್ಲೂಸಿವ್: ಕಿಚ್ಚ ಸುದೀಪ್ ರವರ 'ಹೆಬ್ಬುಲಿ' ಚಿತ್ರದ ಕಥೆ ಏನು.?]

Sudeep Hebbuli Is trending in Chennai

'ಹೆಬ್ಬುಲಿ' ಇದೇ ತಿಂಗಳು 23 ರಂದು ದೇಶಾದ್ಯಂತ ತೆರೆಕಾಣುತ್ತಿದ್ದು, ರಾಜ್ಯದಲ್ಲೇ ಸುಮಾರು 400ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಇನ್ನೂ ಚೆನ್ನೈ, ಮುಂಬೈ, ಹೈದರಾಬಾದ್ ಸೇರಿದಂತೆ ಹಲವು ಕಡೆ ಸುಮಾರು 100ಕ್ಕೂ ಅಧಿಕ ಸ್ಕ್ರೀನ್ ನಲ್ಲಿ 'ಹೆಬ್ಬುಲಿ' ಘರ್ಜಿಸಲಿದೆ.['ಹೆಬ್ಬುಲಿ' ಚಿತ್ರ ನೋಡೋಕು ಮುನ್ನ ಈ ವಿಷ್ಯಾ ತಿಳಿದುಕೊಳ್ಳಿ..!]

'ಹೆಬ್ಬುಲಿ' ಚಿತ್ರದಲ್ಲಿ ಕಿಚ್ಚ ಸುದೀಪ್ ಗೆ ಅಮಲಾ ಪೌಲ್ ಜೊತೆಯಾಗಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಸಾಥ್ ಕೊಟ್ಟಿದ್ದಾರೆ. ಇನ್ನೂ ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರಕ್ಕೆ ಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ.

English summary
A Twitter Page Showed Today (February 7) Morning, Sudeep's Most Expected Movie Hebbuli, is in the Top Five Trending Topics In Chennai.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X