»   » ಕ್ರಿಕೆಟ್ ಆಡಲು ಬಂದ ಸುದೀಪ್ ಗೆ ಲಂಡನ್ ನಲ್ಲಿದೆ ಇನ್ನೊಂದು ಕೆಲಸ.! ಏನದು?

ಕ್ರಿಕೆಟ್ ಆಡಲು ಬಂದ ಸುದೀಪ್ ಗೆ ಲಂಡನ್ ನಲ್ಲಿದೆ ಇನ್ನೊಂದು ಕೆಲಸ.! ಏನದು?

Posted By:
Subscribe to Filmibeat Kannada

ಈಗಾಗಲೇ ಗೊತ್ತಿರುವಾಗೆ ಕಿಚ್ಚ ಸುದೀಪ್ 'ಕಾರ್ಪೊರೇಟರ್ ಕ್ರಿಕೆಟ್ ಡೇ' ಟೂರ್ನಿಗಾಗಿ ಲಂಡನ್ ಗೆ ಹೋಗಿದ್ದಾರೆ. 'ಕಾರ್ಪೊರೇಟರ್ ಕ್ರಿಕೆಟ್ ಡೇ' ಟೂರ್ನಿಯಲ್ಲಿ ಸುದೀಪ್ ಭಾಗವಹಿಸುತ್ತಿದ್ದು, ತಂಡವೊಂದನ್ನ ಮುನ್ನಡೆಸಲಿದ್ದಾರೆ.

ಆದ್ರೆ, ಕಿಚ್ಚ ಕೇವಲ ಕ್ರಿಕೆಟ್ ಆಡಲು ಲಂಡನ್ ಗೆ ಹೋಗಿಲ್ಲ. ಕ್ರಿಕೆಟ್ ಜೊತೆಗೆ ಮತ್ತೊಂದು ಕೆಲಸವನ್ನ ಸುದೀಪ್ ಕೈಗೆತ್ತಿಕೊಳ್ಳಲಿದ್ದಾರೆ. ಹೌದು, ಕ್ರಿಕೆಟ್ ಹಿಡಿದು ಮೈದಾನದಲ್ಲಿ ಅಬ್ಬರಿಸಲಿರುವ ಸುದೀಪ್, ತದ ನಂತರ ಲಂಡನ್ ನಲ್ಲೇ ಉಳಿದುಕೊಳ್ಳಲಿದ್ದಾರೆ.['ಕ್ಯಾಪ್ಟನ್' ಆದ ಸುದೀಪ್: ಲಾರ್ಡ್ಸ್ ಮೈದಾನದಲ್ಲಿ ಕಿಚ್ಚ ಮುನ್ನಡೆಸಲಿರುವ ತಂಡ ಯಾವುದು?]

ಅಷ್ಟಕ್ಕೂ, ಸುದೀಪ್ ಗೆ ಕ್ರಿಕೆಟ್ ಆಡುವುದು ಬಿಟ್ಟು ಬೇರೆನೆ ಕೆಲಸವಿದೆ? ಮುಂದೆ ಓದಿ.....

ಕ್ರಿಕೆಟ್ ಮುಗಿದ ಮೇಲೆ ಶೂಟಿಂಗ್!

ಮೇ 11 ರಂದು 'ಕಾರ್ಪೊರೇಟರ್ ಕ್ರಿಕೆಟ್ ಡೇ' ವಿಶೇಷವಾಗಿ ಲಾರ್ಡ್ಸ ಮೈದಾನಲ್ಲಿ ಕ್ರಿಕೆಟ್ ಆಡುವ ಸುದೀಪ್, ಕ್ರಿಕೆಟ್ ಮುಗಿದ ನಂತರ ಚಿತ್ರದ ಶೂಟಿಂಗ್ ನಲ್ಲಿ ಬಾಗಿಯಾಗಲಿದ್ದಾರೆ.['RCB' ಪರ ಬ್ಯಾಟ್ ಬೀಸಿದ 'ಕರ್ನಾಟಕ ಬುಲ್ಡೋಜರ್ಸ್' ನಾಯಕ ಸುದೀಪ್]

ಯಾವ ಚಿತ್ರದ ಶೂಟಿಂಗ್

ಪ್ರೇಮ್ ನಿರ್ದೇಶನ ಮಾಡುತ್ತಿರುವ 'ದಿ ವಿಲನ್' ಚಿತ್ರದ ಶೂಟಿಂಗ್ ಲಂಡನ್ ನಲ್ಲಿ ನಡೆಯಲಿದ್ದು, ಕ್ರಿಕೆಟ್ ಮುಗಿದ ನಂತರ 'ವಿಲನ್' ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.[ಕಿಚ್ಚ ಸುದೀಪ್ ಗೆ ಲಂಡನ್‌ನಿಂದ ಬಂದಿದೆ ಸಿಹಿ ಸುದ್ದಿ; ಏನದು?]

ಶಿವಣ್ಣ ಮತ್ತು ಸುದೀಪ್ ಭಾಗಿ!

ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಲಂಡನ್ ನಲ್ಲಿ ಎರಡನೇ ಹಂತದ ಶೂಟಿಂಗ್ ಮಾಡಲಿದೆ. ಮತ್ತೊಂದೆಡೆ ಶಿವರಾಜ್ ಕುಮಾರ್ ಕೂಡ ಆದಷ್ಟೂ ಬೇಗ ಲಂಡನ್ ಸೇರಿಕೊಳ್ಳಲಿದ್ದಾರೆ.[ನಾಯಕಿಯರಿಗಾಗಿ 'ಚೆನ್ನೈ ಟು ಬಾಂಬೆ' ಹುಡುಕುತ್ತಿರುವ 'ದಿ ವಿಲನ್'!]

ಕನ್ನಡದ ನಿರೀಕ್ಷೆಯ ಸಿನಿಮಾ!

ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದು, ಬಹುಕೋಟಿಯಲ್ಲಿ ತಯಾರಾಗುತ್ತಿದೆ. ಬಾಲಿವುಡ್ ನಟ ಮಿಥುನ್ ಚಕ್ರವರ್ತಿ, ಶ್ರುತಿ ಹರಿಹರನ್, ತೆಲುಗು ನಟ ಶ್ರೀಕಾಂತ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸುತ್ತಿದ್ದಾರೆ.['ವಿಲನ್'ಗಾಗಿ ಕನ್ನಡಕ್ಕೆ ಬಂದ ಬಾಲಿವುಡ್ ದಿಗ್ಗಜ ನಟ]

English summary
Sudeep is away in London for Play Cricket at Lords Cricket Ground.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada