»   » 6 ನೇ ಮೈಲಿಯಲ್ಲಿ ಅಭಿನಯ ಚಕ್ರವರ್ತಿ ಪಯಣ

6 ನೇ ಮೈಲಿಯಲ್ಲಿ ಅಭಿನಯ ಚಕ್ರವರ್ತಿ ಪಯಣ

Posted By:
Subscribe to Filmibeat Kannada

ಸಿನಿಮಾ ವೃತ್ತಿ ಬದುಕಿನಲ್ಲಿ ಭಿನ್ನ ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುತ್ತಿರುವ ನಟ ಸಂಚಾರಿ ವಿಜಯ್. ಅಭಿಮಯಿಸಿದ ಮೊದಲ ಸಿನಿಮಾದಲ್ಲೇ ಉತ್ತಮ ಕಲಾವಿದನಾಗಿ ಗುರುತಿಸಿಕೊಂಡ ಸಂಚಾರಿ ವಿಜಿ ಅಭಿನಯದ 6 ನೇ ಮೈಲಿ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಟೈಟಲ್ ನಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ ಚಿತ್ರದ ಹಾಡನ್ನು ಕಿಚ್ಚ ಸುದೀಪ್ ಮೆಚ್ಚಿಕೊಂಡಿದ್ದಾರೆ.

ಹೌದು 6 ನೇ ಮೈಲಿ ಸಿನಿಮಾದ ಹಾಡನ್ನು ಕಿಚ್ಚ ಹೇಳಿ ಆನಂದಿಸುವುದರ ಜೊತೆಯಲ್ಲಿ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನೂ ಹೇಳಿದ್ದಾರೆ. 6 ನೇ ಚಿತ್ರದ ಲಿರಿಕಲ್ ವಿಡಿಯೋ ಇತ್ತಿಚಿಗಷ್ಟೇ ಬಿಡುಗಡೆ ಆಗಿತ್ತು. ಹಾಡನ್ನ ಆಲಿಸಿದ ಸುದೀಪ್ "ಹಾಡು ತುಂಬಾ ಚೆನ್ನಾಗಿದೆ ಸಂಗೀತ ಮೂಡಿ ಬಂದಿರುವ ರೀತಿ ಅದ್ಬುತವಾಗಿದೆ. ಸಿನಿಮಾತಂಡಕ್ಕೆ ಶುಭವಾಗಲಿ" ಎಂದು ಟ್ವಿಟ್ ಮಾಡಿದ್ದಾರೆ.

'ಪಿ ಆರ್ ಕೆ' ಪ್ರೊಡಕ್ಷನ್ಸ್ ನಲ್ಲಿ ಹೊಸಬರ ಸಿನಿಮಾಗಳು

ಅಂದ್ಹಾಗೆ ಕಿಚ್ಚ ಸಾಮಾನ್ಯವಾಗಿ ಎಲ್ಲಾ ಹಾಡುಗಳನ್ನ ಮೆಚ್ಚಿಕೊಳ್ಳುವುದಿಲ್ಲ. ಕಾರಣ ಸುದೀಪ್ ಒಬ್ಬ ನಾಯಕ ಅನ್ನುವುದಕ್ಕಿಂತ ಹೆಚ್ಚಾಗಿ ನಿರ್ದೇಶಕ ಹಾಗೂ ಹಾಡುಗಾರ. ಇತ್ತೀಚಿಗಷ್ಟೆ ಸುದೀಪ್ ಸಂಚಾರಿ ವಿಜಿ ಅವರ 'ಕೃಷ್ಣ ತುಳಸಿ' ಸಿನಿಮಾ ಹಾಡನ್ನು ನೋಡಿ ಮೆಚ್ಚಿಕೊಂಡಿದ್ದರು.

Sudeep liked 6th maili Kannada movie song

6 ನೇ ಮೈ ಚಿತ್ರವನ್ನ ಸೀನಿ ನಿರ್ದೇಶನ ಮಾಡಿದ್ದು ಸಂಚಾರಿ ವಿಜಿ, ಆರ್ ಜೆ ನೇತ್ರಾ, ಹೇಮಂತ್ ಕುಮಾರ್, ಕೃಷ್ಣ ಹೆಬ್ಬಾಳೆ, ಮೈತ್ರಿ ಜಗ್ಗಿ, ಜಾನ್ಹವಿ ಇನ್ನೂ ಅನೇಕರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 6 ನೇ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು ಡಾ ಶೈಲೇಂದ್ರ ಕುಮಾರ್ ಚಿತ್ರವನ್ನ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿದ್ದಾರೆ.

Sudeep liked 6th maili Kannada movie song

ಸಾಯಿ ಕಿರಣ್ ಸಿನಿಮಾಗೆ ಸಂಗೀತ ನಿರ್ದೇಶನ ಹಾಗೂ ಪರಮೇಶ್ ಸಿ ಎಂ ಅವರ ಕ್ಯಾಮೆರಾ ವರ್ಕ್ 6 ನೇ ಮೈಲಿ ಸಿನಿಮಾಗಿದೆ. ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ನಿಂದಲೇ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಕೌತುಕ ಹುಟ್ಟುಹಾಕಿರುವ 6 ನೇ ಮೈಲಿ ಚಿತ್ರ ಆದಷ್ಟು ಬೇಗ ತೆರೆಗೆ ಬರಲಿದೆ.

English summary
Kannada actor Sudeep liked 6th maili Kannada movie song. 6th maili movie directed by seeni, Sanchari viji, RJ Netra and Hemanth acted in the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X