For Quick Alerts
  ALLOW NOTIFICATIONS  
  For Daily Alerts

  51ನೇ ಗೋವಾ ಚಿತ್ರೋತ್ಸವಕ್ಕೆ ಚಾಲನೆ: ಕನ್ನಡದಲ್ಲಿ ಮಾತು ಆರಂಭಿಸಿದ ಸುದೀಪ್

  |

  ಗೋವಾದ 51ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಂದಿನಿಂದ ಆರಂಭವಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಗೋವಾ ಚಿತ್ರೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಕೇಂದ್ರ ಸಚಿವರ ಜೊತೆ ಕನ್ನಡ ನಟ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

  ಗೋವಾ ಚಿತ್ರೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸುದೀಪ್ ಅವರನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೂಗುಚ್ಛ ನೀಡಿ ಸ್ವಾಗತ ಕೋರಿದರು. ಈ ವೇಳೆ ಸಿನಿಮಾ ಜಗತ್ತಿನಲ್ಲಿ 25 ವರ್ಷ ಪೂರೈಸಿದ ಸುದೀಪ್ ಸಾಧನೆ ಗೌರವಿಸಿದ ಗೋವಾ ಚಿತ್ರೋತ್ಸವ ಕಿಚ್ಚನಿಗೆ ಶುಭಾಶಯ ತಿಳಿಸಿತು.

  ಪ್ರತಿಷ್ಟಿತ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡದ ಸ್ಟಾರ್ ನಟಪ್ರತಿಷ್ಟಿತ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡದ ಸ್ಟಾರ್ ನಟ

  ''ಪ್ರತಿಯೊಬ್ಬರಿಗೆ ಕನ್ನಡ ಚಿತ್ರರಂಗದ ಪರವಾಗಿ ಕರ್ನಾಟಕದ ಪರವಾಗಿ ಈ ಕಿಚ್ಚನಿಂದ ನಮಸ್ತೆ'' ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಸುದೀಪ್ ಗೋವಾದಲ್ಲಿ ಕನ್ನಡತನ ಸಾರಿದರು.

  ''ಭಾಷೆ, ಗಡಿ ಎಲ್ಲವನ್ನು ಮೀರಿ ಎಲ್ಲರನ್ನೂ ಒಟ್ಟುಗೂಡಿಸುವ ಶಕ್ತಿ ಸಿನಿಮಾ ಹಾಗೂ ಕ್ರೀಡೆಗೆ ಇದೆ. ಆ ಕಾರಣದಿಂದಲೇ ಇಲ್ಲಿ ಇಷ್ಟು ದೊಡ್ಡ ಉತ್ಸವ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ನನ್ನನ್ನು ಭಾಗಿಯಾಗಿಸಿದ್ದಕ್ಕೆ ನಿಮಗೆ ಧನ್ಯವಾದಗಳು'' ಎಂದು ಸುದೀಪ್ ಸಂಸತ ಹಂಚಿಕೊಂಡರು.

  ಅಂದ್ಹಾಗೆ, ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೊದಲ ಕನ್ನಡ ನಟ ಎಂಬ ಹೆಗ್ಗಳಿಕೆಗೆ ಸುದೀಪ್ ಪಾತ್ರರಾಗಿದ್ದಾರೆ. ಈ ಹಿನ್ನೆಲೆ ಕರ್ನಾಟಕದ ಅನೇಕರ ಸುದೀಪ್ ಅವರಿಗೆ ಅಭಿನಂದನೆ ಸಲ್ಲಿಸಿದ್ದರು.

  ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಸಹ ಈ ಕುರಿತು ಟ್ವೀಟ್ ಮಾಡಿ ''ಗೋವಾ ಚಿತ್ರೋತ್ಸವದಲ್ಲಿ ಸುದೀಪ್ ಮುಖ್ಯ ಅತಿಥಿಯಾಗಿರುವುದು ಕರ್ನಾಟಕದ ಹೆಮ್ಮೆ'' ಎಂದಿದ್ದರು.

  ಮತ್ತೊಂದು ದೊಡ್ಡ ಪ್ರಾಜೆಕ್ಟ್ ಅನೌನ್ಸ್ ಮಾಡಿದ Santosh Anandram | Filmibeat Kannada

  ಇನ್ನು 51ನೇ ಗೋವಾ ಅಂತರರಾಷ್ಟ್ರೀಯ ಸಿನಿಮಾ ಉತ್ಸವವು ಜನವರಿ 16 ರಿಂದ ಜನವರಿ 24 ರ ವರೆಗೆ ನಡೆಯಲಿದೆ. ವಿಶ್ವದ ಹಲವು ದೇಶಗಳ ಹಲವಾರು ಸಿನಿಮಾಗಳು ಸಿನಿಮಾ ಉತ್ಸವದಲ್ಲಿ ಪ್ರದರ್ಶನ ಕಾಣಲಿವೆ. ವಿವಿಧ ದೇಶಗಳ 224 ಸಿನಿಮಾಗಳು ಭಾಗವಹಿಸಿವೆ.

  English summary
  Kannada Actor Kiccha Sudeep participated in 51st Goa International Film Festival inauguration function.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X