»   » ಕಿಚ್ಚ ಸುದೀಪ್ ಹೇಳಿದ್ದೊಂದು, ಆಗಿದ್ದು ಇನ್ನೊಂದು, ಈಗ ನಡೀತಾಯಿರೋದು ಮತ್ತೊಂದು.!

ಕಿಚ್ಚ ಸುದೀಪ್ ಹೇಳಿದ್ದೊಂದು, ಆಗಿದ್ದು ಇನ್ನೊಂದು, ಈಗ ನಡೀತಾಯಿರೋದು ಮತ್ತೊಂದು.!

Posted By:
Subscribe to Filmibeat Kannada

ಯಾರ ಬಾಯಲ್ಲಿ ಕೇಳಿದ್ರೂ ಸದ್ಯ ಅಭಿನಯ ಚಕ್ರವರ್ತಿ... ಕೆಚ್ಚೆದೆಯ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಹಾಬಿರುಕಿನದ್ದೇ ಮಾತು.

ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಸಿಡಿದೆದ್ದ ಮೇಲಂತೂ, ಕಿಚ್ಚ ಸುದೀಪ್ ಪ್ರತಿಕ್ರಿಯೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಉರಿಯುವ ಬೆಂಕಿಗೆ ತುಪ್ಪ ಸುರಿಯಬಾರದು ಅಂತ ಕಿಚ್ಚ ಸುದೀಪ್ 'ಹೆಬ್ಬುಲಿ' ಪ್ರಮೋಷನ್ ನಲ್ಲಿ ಕಡೆ ಗಮನ ಹರಿಸಿದ್ದಾರೆ.[ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ]

ಆದರೂ, ಸುದೀಪ್ ಆಡಿರುವ.. ಆಡುತ್ತಿರುವ ಮಾತುಗಳು ಮಾತ್ರ ವಿವಾದ ಸೃಷ್ಟಿಸುತ್ತಿದೆ. ಸುದೀಪ್ ಹೇಳಿದ್ದೇ ಒಂದಾದರೆ, ಅದನ್ನ ಎಲ್ಲರೂ ಅರ್ಥೈಸುತ್ತಿರುವ ರೀತಿಯೇ ಮತ್ತೊಂದು.! ಮುಂದೆ ಓದಿ....

ಮೊದಲು ತುಟಿ ಎರಡು ಮಾಡಲು ನಿರಾಕರಿಸಿದ್ದ ಸುದೀಪ್.!

ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಸುದೀಪ್ ಬಗ್ಗೆ ದರ್ಶನ್ ಮಾಡಿದ ಸರಣಿ ಟ್ವೀಟ್ ಗಳ ನಂತರ ಪ್ರತಿಕ್ರಿಯೆ ನೀಡಲು ಸುದೀಪ್ ನಿರಾಕರಿಸಿದ್ದರು.['ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!]

ತುಮಕೂರಿನಲ್ಲಿ ಮುಖ ತಿರುಗಿಸಿ ನಡೆದುಬಿಟ್ಟ ಸುದೀಪ್

'ಹೆಬ್ಬುಲಿ' ಚಿತ್ರದ ಪ್ರಚಾರ ಸಲುವಾಗಿ ರಾಜ್ಯದ ಮೂಲೆಮೂಲೆಯಲ್ಲೂ ಪ್ರವಾಸ ಕೈಗೊಂಡಿದ್ದ ಸುದೀಪ್, ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳು 'ದರ್ಶನ್' ಕುರಿತು ಪ್ರಶ್ನೆ ಆರಂಭಿಸಿದ ಕೂಡಲೆ ಮುಖ ತಿರುಗಿಸಿ ನಡೆದು ಬಿಟ್ಟರು. ಇದು ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಯ್ತು.[ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು?]

'ಹುಬ್ಬಳ್ಳಿ'ಯಲ್ಲಿ ಆಗಿದ್ದು ಇನ್ನೊಂದು

'ಹೆಬ್ಬುಲಿ' ಚಿತ್ರದ ಪ್ರಚಾರ ನಿಮಿತ್ತ ಹುಬ್ಬಳ್ಳಿಗೆ ತೆರಳಿದ್ದ ಸುದೀಪ್ ರವರಿಗೆ ಮಾಧ್ಯಮ ಪ್ರತಿನಿಧಿಗಳು ಮತ್ತೊಮ್ಮೆ ದರ್ಶನ್ ಕುರಿತು ಪ್ರಶ್ನೆ ಕೇಳಿದರು. ಆಗ ಸುದೀಪ್ ಆಡಿದ ಮಾತು ಮತ್ತೊಂದು ವಿವಾದಕ್ಕೆ ಕಾರಣ ಆಯ್ತು.[ದರ್ಶನ್ 'ಮೆಜೆಸ್ಟಿಕ್' ಬಗ್ಗೆ ಸಂದರ್ಶನದಲ್ಲಿ ಸುದೀಪ್ ಹೇಳಿದ್ದೇನು? ಇಲ್ಲಿದೆ ನೋಡಿ]

ಹುಬ್ಬಳ್ಳಿಯಲ್ಲಿ ಸುದೀಪ್ ಹೇಳಿದ್ದೇನು.?

ದರ್ಶನ್ ಕುರಿತಂತೆ ಮಾಧ್ಯಮದವರು ಕಿಚ್ಚನನ್ನ ಕೇಳಿದಾಗ, ''ಐ ವುಡ್ ರೆಸ್ಪೆಕ್ಟ್, ಇಫ್ ಯೂ ವುಡ್ ರೆಸ್ಪೆಕ್ಟ್ ಮಿ.....'' ಎಂದು ಹೇಳಿದರು. ಈ ಹೇಳಿಕೆಯಿಂದ ಹೊಸ ಕಾಂಟ್ರವರ್ಸಿ ಕ್ರಿಯೇಟ್ ಆಯ್ತು.[ದರ್ಶನ್ ಬಗ್ಗೆ ಸುದೀಪ್ ಹೇಳಿದ್ದು ಸುಳ್ಳಾ.? ಪಿ.ಎನ್.ಸತ್ಯ ಬಾಯ್ಬಿಟ್ಟ ಸತ್ಯ ಏನು.?]

ಸುದೀಪ್ ರವರ ಉತ್ತರ ಮಾಧ್ಯಮದವರಿಗೋ... ದರ್ಶನ್ ಗೋ.?

ದರ್ಶನ್ ಕುರಿತು ಮಾಧ್ಯಮದವರು ಪ್ರಶ್ನೆ ಕೇಳುತ್ತಿದ್ದಂತೆಯೇ, 'ಐ ವುಡ್ ರೆಸ್ಪೆಕ್ಟ್.. ಇಫ್ ಯು ವುಡ್ ರೆಸ್ಪೆಕ್ಟ್ ಮಿ'' (ನೀವು ನನ್ನನ್ನ ಗೌರವಿಸಿದರೆ, ನಿಮ್ಮನ್ನ ನಾನು ಗೌರವಿಸುತ್ತೇನೆ) ಎಂದು ಸುದೀಪ್ ಹೇಳಿದರು. ಈ ಖಾರ ಪ್ರತಿಕ್ರಿಯೆ ಮಾಧ್ಯಮದವರಿಗೋ.. ಅಥವಾ ದರ್ಶನ್ ರವರಿಗೋ.? ಎಂಬ ಚರ್ಚೆ ಆರಂಭವಾಯ್ತು. [ದರ್ಶನ್ ಪ್ರಶ್ನೆಗೆ ಹುಬ್ಬಳಿಯಲ್ಲಿ ಘರ್ಜಿಸಿದ ಸುದೀಪ್!]

ಸುದೀಪ್ ಮಾಡಿದ ಈ ಟ್ವೀಟ್

'ಗೌರವ'ದ ಕುರಿತು ಮಾತನಾಡಿದ ಬೆನ್ನಲ್ಲೇ, ಸುದೀಪ್ ಮಾಡಿದ ಒಂದು ಟ್ವೀಟ್ ಕೂಡ ವಿವಾದಕ್ಕೆ ಗ್ರಾಸವಾಯ್ತು.

ಸುದೀಪ್ ಮಾಡಿದ ಟ್ವೀಟ್ ಏನು.?

''ಗೌರವ ಮತ್ತು ಮೌಲ್ಯಗಳನ್ನು ಹೊಂದಿರುವ ಸಾಮಾನ್ಯ ಮನುಷ್ಯ ನಾನು. ನೀವು ಹೀಗೆ ಹೇಳಲು ಕಾರಣವೇನು ಅಂತ ನನಗೆ ತಿಳಿಸಿ. ನಂತರ ನಾನು ಉತ್ತರಿಸುತ್ತೇನೆ'' ಅಂತ ಸುದೀಪ್ ಟ್ವೀಟ್ ಮಾಡಿದ್ದರು.

ದರ್ಶನ್ ಗೆ ತಳುಕು ಹಾಕಿದ ಈ ಟ್ವೀಟ್.!

ಅಸಲಿಗೆ ಸುದೀಪ್ ಈ ಟ್ವೀಟ್ ಮಾಡಿದ್ದು ಮತ್ತಿನ್ಯಾರಿಗೋ ಉತ್ತರಿಸುವಾಗ.! ಆದ್ರೆ ಆ ವ್ಯಕ್ತಿ ಟ್ವೀಟ್ ನ ಡಿಲೀಟ್ ಮಾಡಿದ್ರಿಂದ... ಸುದೀಪ್ ಹೀಗೆ ಹೇಳಿರುವುದು ದರ್ಶನ್ ಗೆ ಎಂಬ ಊಹಾಪೋಹ ಶುರು ಆಯ್ತು.

ಟ್ವೀಟ್ ಕುರಿತು ಸ್ಪಷ್ಟ ಪಡಿಸಿದ ಸುದೀಪ್

''ನನಗೆ ಪರಿಚಯವಿಲ್ಲದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಮಾಡಿದ ಟ್ವೀಟ್ ಅದು. ಆದ್ರೆ, ನಾನು ಪ್ರತಿಕ್ರಿಯೆ ನೀಡುತ್ತಿದ್ದಂತೆಯೇ, ಆ ವ್ಯಕ್ತಿ ಟ್ವೀಟ್ ನ ಡಿಲೀಟ್ ಮಾಡಿದರು. ಹೀಗಾಗಿ ಯಾವುದಕ್ಕೋ ಇನ್ಯಾವುದನ್ನೋ ಸಂಬಂಧ ಕಲ್ಪಿಸಬೇಡಿ'' ಎಂದು ಸುದೀಪ್ ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ.

ಅಸಲಿಗೆ 'ಪರಿಚಯ'ವಿಲ್ಲದ ವ್ಯಕ್ತಿ ಮಾಡಿದ ಟ್ವೀಟ್ ಏನು.?

''ನಮಗೆಲ್ಲ ಗೊತ್ತು ನೀವು ಶ್ರೀಮಂತ ಕುಟುಂಬದಿಂದ ಬಂದವರು. ಆದ್ರೆ, ಘನತೆಯಲ್ಲಿ ಶ್ರೀಮಂತಿಕೆಯನ್ನು ನೀವು ತೋರಿಸುವುದಿಲ್ಲ. ಸಾಮಾನ್ಯ ಮನುಷ್ಯನಂತೆ ವರ್ತಿಸಿ'' ಎಂದು ಮಹಂತೇಶ್ ಹಿರೇಮಠ್ ಎಂಬುವವರು ಸುದೀಪ್ ಗೆ ಟ್ವೀಟ್ ಮಾಡಿದ್ದರು. ಅದಕ್ಕೆ ಸುದೀಪ್ ಕೊಟ್ಟ ಪ್ರತಿಕ್ರಿಯೆ - ''ಗೌರವ ಮತ್ತು ಮೌಲ್ಯಗಳನ್ನು ಹೊಂದಿರುವ ಸಾಮಾನ್ಯ ಮನುಷ್ಯ ನಾನು. ನೀವು ಹೀಗೆ ಹೇಳಲು ಕಾರಣವೇನು ಅಂತ ನನಗೆ ತಿಳಿಸಿ. ನಂತರ ನಾನು ಉತ್ತರಿಸುತ್ತೇನೆ''

ಸ್ಪಷ್ಟನೆ ಸಿಕ್ತು ಎಂದು ಭಾವಿಸುತ್ತೇನೆ.!

ಮಹಂತೇಶ್ ಹಿರೇಮಠ್ ಎಂಬುವವರು ಮಾಡಿದ ಟ್ವೀಟ್ ನ ಕಿಚ್ಚ ಸುದೀಪ್ ಅಭಿಮಾನಿ ಬಳಗ ಶೇರ್ ಮಾಡುತ್ತಿದ್ದಂತೆಯೇ, ''ನನ್ನ ಟ್ವೀಟ್ ನ ತಪ್ಪಾಗಿ ಅರ್ಥೈಸಿದ ಎಲ್ಲರಿಗೂ ಇದು ಸ್ಪಷ್ಟನೆ ನೀಡ್ತು ಎಂದು ಭಾವಿಸುತ್ತೇನೆ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

English summary
Kannada Actor Kiccha Sudeep's statements are creating controversies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada