»   » ಅರಮನೆಯಿಂದ ಸೆರೆಮನೆ ಯಾನಕೆ ಕಿಚ್ಚನೇ ಸಾರಥಿ

ಅರಮನೆಯಿಂದ ಸೆರೆಮನೆ ಯಾನಕೆ ಕಿಚ್ಚನೇ ಸಾರಥಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಹಾಡೊಂದಕ್ಕೆ ಧ್ವನಿಯಾಗೋದು ಇದೇ ಮೊದಲ ಬಾರಿ ಏನೂ ಅಲ್ಲ ಅಲ್ವಾ. 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದಿಂದ ಹಿಡಿದು 'ರಾಟೆ' ಚಿತ್ರದ 'ಜೋಡಕ್ಕಿ ಗೂಡಲ್ಲಿ' ಹಾಡಿಗೂ ನಮ್ಮ ಪ್ರೀತಿಯ 'ನಲ್ಲ' ಧ್ವನಿಯಾಗಿದ್ದಾರೆ.

ಇದೀಗ ಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 3' ಸರದಿ. ಈ ರಿಯಾಲಿಟಿ ಶೋ ನ ಹೊಚ್ಚ ಹೊಸ ಪ್ರೋಮೋ ರಿಲೀಸ್ ಆಗಿದ್ದು, ಅದರ ಟೈಟಲ್ ಹಾಡಿಗೆ ನಮ್ಮ ಕನ್ನಡದ 'ಮಾಣಿಕ್ಯ' ಕಿಚ್ಚ ಸುದೀಪ್ ಅವರು ಧ್ವನಿಯಾಗಿದ್ದಾರೆ. ಪ್ರೋಮೋ ಇಲ್ಲಿದೆ ನೋಡಿ..[ಎಕ್ಸ್ ಕ್ಲೂಸಿವ್ : 'ಬಿಗ್ ಬಾಸ್-3'ನಲ್ಲಿ 'ಇವರೆಲ್ಲಾ' ಇರ್ತಾರೆ ಸ್ವಾಮಿ.!]

Sudeep sings the Title Track of 'Bigg Boss-3'

ಬಿಗ್ ಬಾಸ್ ಸೀಸನ್ 1, 2 ಕಾರ್ಯಕ್ರಮ ನಡೆಸಿ ಕೊಟ್ಟ ಕಿಚ್ಚ ಸುದೀಪ್ ಅವರೇ ಸೀಸನ್ 3 ನಡೆಸಿಕೊಡಲಿದ್ದಾರೆ. 'ಬಿಗ್ ಬಾಸ್' ಫಸ್ಟ್ ಸೀಸನ್ ಕಲರ್ಸ್ ಕನ್ನಡದಲ್ಲಿ ನಡೆದಿದ್ದು, ಇದೀಗ ಸೀಸನ್ 3 ಕೂಡ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

ಅಂತೂ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಖ್ಯಾತ ರಿಯಾಲಿಟಿ ಶೋ ಇನ್ನೇನು ಸದ್ಯದಲ್ಲೇ ಆರಂಭವಾಗಲಿದೆ. ಈಗಾಗಲೇ ಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್-3ರ ಸ್ಪರ್ಧಿಗಳ ಲಿಸ್ಟ್‌ ಕೂಡ ನಿಮಗೆ ನಾವು ಕನ್ನಡ ಫಿಲ್ಮಿಬೀಟಲ್ಲಿ ಹೇಳಿದ್ದೀವಿ ಅಲ್ವಾ.[ಶುರುವಾಗಲಿದೆ 'ಬಿಗ್ ಬಾಸ್' ಕನ್ನಡ ಸೀಸನ್ 3]

ಅಂದಹಾಗೆ ನಿರ್ದೇಶಕ ಹಾಗೂ ಖ್ಯಾತ ಸಾಹಿತ್ಯ ಬರಹಗಾರ ಯೋಗರಾಜ್ ಭಟ್ ಅವರು ಬರೆದಿರುವ ಸಾಹಿತ್ಯಕ್ಕೆ ಕಿಚ್ಚ ಸುದೀಪ್ ಅವರು ಧ್ವನಿಯಾಗಿದ್ದು, ಬಿಗ್ ಬಾಸ್ ಸೀಸನ್ 1 ರಲ್ಲಿ ಇದ್ದ ಹಾಡೇ ಸೀಸನ್ 3 ರಲ್ಲೂ ಮುಂದುವರಿದಿದೆ.

ಇನ್ನೇನು ಅಕ್ಟೋಬರ್ ತಿಂಗಳಿನಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಈ ಖ್ಯಾತ ರಿಯಾಲಿಟಿ ಶೋ ನೋಡಲು ಸುದೀಪ್ ಅಭಿಮಾನಿಗಳು ಸೇರಿದಂತೆ ಪ್ರೇಕ್ಷಕರು ಕೂಡ ಕಾತರರಾಗಿದ್ದಾರೆ ಅಂತಾನೇ ಹೇಳಬಹುದು. ಒಟ್ನಲ್ಲಿ ಮತ್ತೊಮ್ಮೆ ಸೆಲೆಬ್ರಿಟಿಗಳ ಸೆರೆಮನೆ ವಾಸದಿಂದ ಪ್ರೇಕ್ಷಕರಿಗೆ ಸಖತ್ ಮನೋರಂಜನೆ ಗ್ಯಾರಂಟಿ.

English summary
'Bigg Boss' is back in Kannada. 'Bigg Boss-3' will be aired in 'Colours Kannada Channel' and Sudeep has sung the title song of the third season of the hugely popular reality show 'Big Boss'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada