For Quick Alerts
  ALLOW NOTIFICATIONS  
  For Daily Alerts

  'ಕೋಟಿಗೊಬ್ಬ-3' ಟೀಸರ್ ಯೂಟ್ಯೂಬ್ ನಿಂದ ಡಿಲೀಟ್: ಕಾರಣವೇನು?

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೆ ಟೀಸರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದ ಸಿನಿಮಾ ಈಗ ಸಂಕಷ್ಟದಲ್ಲಿ ಸಿಲುಕಿದೆ. ಹೌದು, ಕೋಟಿಗೊಬ್ಬ-3 ಚಿತ್ರದ ಟೀಸರ್ ಯೂಟ್ಯೂಬ್ ನಿಂದ ಡಿಲೀಟ್ ಮಾಡಲಾಗಿದೆ.

  Sudeep starrer Kotigobba-3 teaser deleted on youtube | Sudeep | Kotigobba 3 | Filmibeat Kannada

  ದಿಢೀರನೆ ಚಿತ್ರದ ಟೀಸರ್ ಡಿಲೀಟ್ ಆಗಿರುವುದು ನೋಡಿ ಚಿತ್ರತಂಡ ಮತ್ತು ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಂದ್ಹಾಗೆ ಚಿತ್ರದ ಟೀಸರ್ ದಿಢೀರ್ ಕಣ್ಮರೆಯಾಗಲು ಕಾರಣ ವೈಬ್ರೆಂಟ್ ಲಿಮಿಟೆಡ್ ಕಂಪನಿಯ ಮಾಲಿಕಾ ಮುಂಬೈವಾಲ ಅಜಯ್ ಪಾಲ್ ಎಂದು ಹೇಳಲಾಗುತ್ತಿದೆ. ಮುಂದೆ ಓದಿ..

  ಜಗ್ಗೇಶ್ ಸಹಕಾರದಿಂದ 'ಕೋಟಿಗೊಬ್ಬ-3' ಪೋಲ್ಯಾಂಡ್ ಸಮಸ್ಯೆ ಸುಖಾಂತ್ಯಜಗ್ಗೇಶ್ ಸಹಕಾರದಿಂದ 'ಕೋಟಿಗೊಬ್ಬ-3' ಪೋಲ್ಯಾಂಡ್ ಸಮಸ್ಯೆ ಸುಖಾಂತ್ಯ

  ಭಾಕಿ ಹಣ ಕೊಟ್ಟಿಲ್ಲ ಎಂದು ಟೀಸರ್ ಡಿಲೀಟ್

  ಭಾಕಿ ಹಣ ಕೊಟ್ಟಿಲ್ಲ ಎಂದು ಟೀಸರ್ ಡಿಲೀಟ್

  ಚಿತ್ರತಂಡ ಭಾಕಿ ಹಣಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಅಜಯ್ ಪಾಲ್ ಟೀಸರ್ ಡಿಲೀಟ್ ಮಾಡಿಸಿದ್ದಾರಂತೆ. ಪೋಲೆಂಡ್ ನಲ್ಲಿ ಚಿತ್ರೀಕರಿಸಲಾದ ದೃಶ್ಯಗಳು ಅಜಯ್ ಪಾಲ್ ಮತ್ತು ಸಂಜಯ್ ಪಾಲ್ ಕಂಪೆನಿ ಹೆಸರಿನಲ್ಲಿದೆ. ಭಾಕಿ ಹಣ ನೀಡದೆ ಟೀಸರ್ ರಿಲೀಸ್ ಮಾಡಲಾಗಿದೆ ಎನ್ನುವ ಕಾರಣಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿದ್ದ ಟೀಸರ್ ಅನ್ನು ಡಿಲೀಟ್ ಮಾಡಿಸಲಾಗಿದೆ ಎಂದು ಹೇಳಲಾಗುತ್ತಿದೆ.

  ಹಣ ಕೊಡುವವರೆಗೂ ಚಿತ್ರದ ದೃಶ್ಯ ನೀಡುವುದಿಲ್ಲ

  ಹಣ ಕೊಡುವವರೆಗೂ ಚಿತ್ರದ ದೃಶ್ಯ ನೀಡುವುದಿಲ್ಲ

  ಭಾಕಿ ಹಣ ಕೊಡುವವರೆಗೂ ಪೋಲೆಂಡ್ ನಲ್ಲಿ ಚಿತ್ರೀಕರಿಸಲಾದ ದೃಶ್ಯಗಳನ್ನು ನೀಡುವುದಲಿಲ್ಲ ಎಂದು ಅಜಯ್ ಪಾಲ್ ಎಚ್ಚರಿಕೆ ಕೂಡ ನೀಡಿದ್ದಾರಂತೆ. ಈ ಮೊದಲು, ಪೋಲೆಂಡ್ ನಲ್ಲಿ ಚಿತ್ರೀಕರಣಕ್ಕೆ ಹೋದ ಸಮಯದಲ್ಲೂ ಚಿತ್ರತಂಡಕ್ಕೆ ದೊಡ್ಡ ಸಮಸ್ಯೆ ಎದುರಾಗಿತ್ತು.

  ಬಾಂಬೆವಾಲನಿಂದ 'ಕೋಟಿಗೊಬ್ಬ'ನಿಗೆ ಮೋಸ: ನಿರ್ಮಾಪಕರ ಆರೋಪಬಾಂಬೆವಾಲನಿಂದ 'ಕೋಟಿಗೊಬ್ಬ'ನಿಗೆ ಮೋಸ: ನಿರ್ಮಾಪಕರ ಆರೋಪ

  ಪೋಲೆಂಡ್ ಚಿತ್ರೀಕರಣ ವೇಳೆ ನಡೆದಿದ್ದೇನು?

  ಪೋಲೆಂಡ್ ಚಿತ್ರೀಕರಣ ವೇಳೆ ನಡೆದಿದ್ದೇನು?

  ಚಿತ್ರತಂಡ 50 ಲಕ್ಷ ಹಣಕೊಡಬೇಕು ಎಂದು ಅಜಯ್ ಪಾಲ್ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪದ ಚಿತ್ರತಂಡ ಪೋಲೆಂಡ್ ನಿಂದ ವಾಪಾಸ್ ಆಗಿತ್ತು. ಆದರೆ ಒಬ್ಬ ಅಕೌಂಟೆಂಟ್ ಅನ್ನು ಅಜಯ್ ಪಾಲ್ ಬಳಿ ಒತ್ತೆ ಇಟ್ಟು ವಾಪಾಸ್ ಆಗಿದ್ದರು. ಆ ನಂತರ ಕೇಂದ್ರ ಸಚಿವರ ನೆರವಿಂದ ಒತ್ತೆ ಇಟ್ಟಿದ್ದ ಅಕೌಂಟೆಂಟ್ ಅನ್ನು ವಾಪಾಸ್ ಭಾರತಕ್ಕೆ ಕರೆಸಿಕೊಂಡಿದ್ದರು.

  ಕಾನೂನು ಹೋರಾಟ ಮಾಡುತ್ತೇವೆ

  ಕಾನೂನು ಹೋರಾಟ ಮಾಡುತ್ತೇವೆ

  ಈಗ ಮತ್ತೆ ರಿಲೀಸ್ ಸಮಯದಲ್ಲಿ ತೊಂದರೆ ಕೊಡುತ್ತಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ. ಚಿತ್ರದ ಟೀಸರ್ ಅನ್ನು ಮತ್ತೆ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿ ಕಾನೂನು ಹೋರಾಟ ಮಾಡುವುದಾಗಿ ಚಿತ್ರತಂಡ ಹೇಳಿದೆ. ಈ ಸಮಸ್ಯೆಗಳ ನಡುವೆಯೂ ಚಿತ್ರ ಯಾವಾಗ ತೆರೆಗೆ ಬರುತ್ತೆ ಎನ್ನುವುದು ಅಭಿಮಾನಿಗಳ ಕುತೂಹಲ.

  English summary
  Kannada Actor Sudeep starrer Kotigobba-3 teaser deleted on youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X