»   » ರಶ್ಮಿಕಾ ಹುಟ್ಟುಹಬ್ಬಕ್ಕೆ ಸುದೀಪ್, ಸುನಿ, ಶಾನ್ವಿ ಶುಭಕೋರಿದ ಸ್ಟೈಲ್ ನೋಡಿ

ರಶ್ಮಿಕಾ ಹುಟ್ಟುಹಬ್ಬಕ್ಕೆ ಸುದೀಪ್, ಸುನಿ, ಶಾನ್ವಿ ಶುಭಕೋರಿದ ಸ್ಟೈಲ್ ನೋಡಿ

Posted By:
Subscribe to Filmibeat Kannada
ರಶ್ಮಿಕಾ ಹುಟ್ಟುಹಬ್ಬಕ್ಕೆ ಸುದೀಪ್, ಸುನಿ, ಶಾನ್ವಿ ಶುಭಕೋರಿದ ಸ್ಟೈಲ್ ನೋಡಿ | Filmibeat Kannada

'ಕಿರಿಕ್ ಪಾರ್ಟಿ' ಚೆಲುವೆ ರಶ್ಮಿಕಾ ಮಂದಣ್ಣ ಅವರಿಗೆ ಜನುಮದಿನದ ಸಂಭ್ರಮ. ಮುದ್ದಾದ ಅಭಿನಯ ಮತ್ತು ಮುದ್ದಾದ ನಗುವಿನ ಮೂಲಕ ಕನ್ನಡಿಗರ ಮನಸ್ಸು ಗೆದ್ದು 'ಕರ್ನಾಟಕ ಕ್ರಶ್' ಅಂತಾನೆ ಪ್ರಖ್ಯಾತಿ ಪಡೆದುಕೊಂಡ ನಟಿಗೆ ಶುಭಾಶಯಗಳು ಹರಿದು ಬರುತ್ತಿದೆ.

ರಾತ್ರಿಯಿಂದಲೇ ರಶ್ಮಿಕಾ ಹುಟ್ಟುಹಬ್ಬದ ಆಚರಣೆ ಶುರುವಾಗಿದ್ದು ಕಿರಿಕ್ ಪಾರ್ಟಿ ಚಿತ್ರತಂಡದವರೆಲ್ಲರೂ ಸೇರಿ ರಶ್ಮಿಕಾ ಮನೆಯಲ್ಲಿ ಬರ್ತಡೇ ಸೆಲಬ್ರೆಟ್ ಮಾಡಿದ್ದಾರೆ. ಹುಟ್ಟುಹಬ್ಬದ ಆಚರಣೆಯಲ್ಲಿ ನಿರ್ದೇಶಕ ಕಿರಣ್ ರಾಜ್, ರಿಶಬ್ ಶೆಟ್ಟಿ, ನಿರ್ಮಾಪಕ ಪುಷ್ಕರ್ ಸೇರಿ ರಶ್ಮಿಕಾ ಬರ್ತಡೇ ಸಂಭ್ರಮಿಸಿದ್ದಾರೆ.

ಕಿರಿಕ್ ಬೆಡಗಿಗೆ ಹುಟ್ಟುಹಬ್ಬದ ಸಂಭ್ರಮ

ಹೀಗೆ, ಚಿತ್ರರಂಗಕ್ಕೆ ಬಂದು ಎರಡೇ ವರ್ಷದಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಸತತ ಹಿಟ್ ಸಿನಿಮಾಗಳನ್ನ ನೀಡಿರುವ ರಶ್ಮಿಕಾಗೆ ಕನ್ನಡದ ಕಿಚ್ಚ ಸುದೀಪ್, ನಟಿ ಶಾನ್ವಿ ಶ್ರೀವಾಸ್ತವ, ಹಂಬಲ್ ಪೊಲಿಟಿಶಿಯನ್ ನೊಗರಾಜ್ ಸೇರಿದಂತೆ ಎಲ್ಲರೂ ವಿಶ್ ಮಾಡಿದ್ದಾರೆ. ಮುಂದೆ ಓದಿ......

ಕಿಚ್ಚನ ಶುಭಾಶಯ

ಕನ್ನಡದ ಕ್ಯೂಟ್ ನಟಿ ರಶ್ಮಿಕಾಗೆ ಕಿಚ್ಚ ಸುದೀಪ್ ವಿಶ್ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಬರ್ತಡೇ ಶುಭಾಶಯ ತಿಳಿಸಿರುವ ಕಿಚ್ಚ, ''ರಶ್ಮಿಕಾ ಜೀವನದಲ್ಲಿ ನಗು ಮತ್ತು ಸಂತೋಷದಿಂದ ಕೂಡಿರಲಿ'' ಎಂದು ಹಾರೈಸಿದ್ದಾರೆ. ಸುದೀಪ್ ಅವರ ಬಗ್ಗೆ ಅಪಾರ ಅಭಿಮಾನ ಹೊಂದಿರುವ ರಶ್ಮಿಕಾ, ಕಿಚ್ಚನ ಜೊತೆಯಲ್ಲಿ ನಟಿಸುವ ಆಸೆ ಕೂಡ ಇಟ್ಟುಕೊಂಡಿದ್ದಾರೆ.

ಸಾನ್ವಿಗೆ ಶುಭಕೋರಿದ ಶಾನ್ವಿ

'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಸಾನ್ವಿ ಪಾತ್ರದಿಂದಲೇ ಕನ್ನಡಿಗರ ಮನಗೆದ್ದ ನಟಿ ರಶ್ಮಿಕಾ. ಈ ಮುದ್ದು ಮುಖದ ಸಾನ್ವಿಗೆ, ಸ್ಯಾಂಡಲ್ ವುಡ್ ನ ಮತ್ತೊಬ್ಬ ಚೆಲುವೆ ಶಾನ್ವಿ ಶ್ರೀವಾಸ್ತವ ಪ್ರೀತಿಯಿಂದ ಶುಭಕೋರಿದ್ದಾರೆ. ಟ್ವಿಟ್ಟರ್ ನಲ್ಲಿ ಬರ್ತಡೇ ವಿಶ್ ಮಾಡಿರುವ ಶಾನ್ವಿ ಲವ್ ಎಮೋಜಿ ಜೊತೆಗೆ ಹುಟ್ಟುಹಬ್ಬದ ಶುಭಾಶಯ ಎಂದಿದ್ದಾರೆ.

ಚಮಕ್ ರಾಣಿಗೆ ಡಿಫ್ರೆಂಟ್ ವಿಶ್ ಮಾಡಿದ ಸುನಿ

ಕನ್ನಡದ ಖ್ಯಾತ ನಿರ್ದೇಶಕ ಸಿಂಪಲ್ ಸುನಿ ನಟಿ ರಶ್ಮಿಕಾ ಮಂದಣ್ಣಗೆ ಡಿಫ್ರೆಂಟ್ ಆಗಿ ವಿಶ್ ಮಾಡಿದ್ದಾರೆ. ''ಕಿರಿಕ್ ಕನ್ಯೆ.. ಚಮಕ್ ಚೆಲುವೆ.. ಅಂಜನ ಪುತ್ರಿ.. ಯಜಮಾನನ ಒಡತಿ.. ಶ್ರೀಮನ್ನಾರಾಯಣನ ಗೆಳತಿ ರಶ್ಮಿಕಾ ಮಂದಣ್ಣಗೆ ಹುಟ್ಟು ಹಬ್ಬದ ಶುಭಾಷಯಗಳು ..'' ಎಂದು ಹಾರೈಸಿದ್ದಾರೆ.

ಡ್ಯಾನಿಶ್ ಸೇಠ್

ಹಂಬಲ್ ಪೊಲಿಟಿಶಿಯನ್ ನೊಗರಾಜ್ ಚಿತ್ರದ ಮೂಲಕ ಎಲ್ಲರ ಮನೆಮಾತಾದ ಡ್ಯಾನಿಶ್ ಸೇಠ್ ''ವೈಯಕ್ತಿಕವಾಗಿ ಮತ್ತು ವೃತ್ತಿಯಾಗಿ ಮತ್ತಷ್ಟು ಬೆಳೆಯಿರಿ. ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ ಎಂದು ಶುಭಾಶಯ ಕೋರಿದ್ದಾರೆ.

English summary
Kannada actress Rashmika Mandanna celebrating her 22nd birthday. Kannada actor sudeep, director simple suni, actress shanvi srivastava wishes to rashmika. Currently she is acting as a heroine in Darshan's Yajamana movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X