»   » ಅಂಬರೀಶ್ ಸಾಧನೆಗೆ ಕಿಚ್ಚನ ಮೆಚ್ಚುಗೆ

ಅಂಬರೀಶ್ ಸಾಧನೆಗೆ ಕಿಚ್ಚನ ಮೆಚ್ಚುಗೆ

Posted By:
Subscribe to Filmibeat Kannada
ಅಂಬರೀಷ್ ರನ್ನ ಭೇಷ್ ಎಂದ ಕಿಚ್ಚ ಸುದೀಪ್ | FIlmibeat Kannada

ಕಲಾವಿದರಿಗಾಗಿ ಈಗ ಪ್ರತ್ಯೇಕ ಕಟ್ಟಡ ಸಿಕ್ಕಿದೆ. ಡಾ ರಾಜ್ ಕುಮಾರ್ ಅವರ ಬಹುದಿನದ ಕನಸನ್ನು ಕನ್ನಡ ಸಿನಿಮಾರಂಗದ ಇಡೀ ಕಲಾವಿದರು ಒಟ್ಟಿಗೆ ಸೇರಿ ನನಸು ಮಾಡಿದ್ದಾರೆ. ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಕಲಾವಿದರ ಸಂಘದ ನೂತನ ಕಟ್ಟಡ ನಿನ್ನೆಯಷ್ಟೇ ಉದ್ಘಾಟನೆ ಆಗಿದೆ. ಹೊಸ ಕಟ್ಟಡದ ಹಿಂದೆ ಹಲವಾರು ಜನರು ಶ್ರಮಿಸಿದ್ದು ಕಿಚ್ಚ ಸುದೀಪ್ ಈ ಬಗ್ಗೆ ಮಾತನಾಡಿದ್ದಾರೆ.

ಕಲಾವಿದರ ಸಂಘದ ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲಿ ತೆಗೆದಿರುವ ಗ್ರೂಪ್ ಫೋಟೋ ಟ್ವೀಟ್ ಮಾಡಿ ಕಿಚ್ಚ ಸುದೀಪ್ ಹೀಗೆ ಬರೆದಿದ್ದಾರೆ. 'ಅಂಬರೀಶ್ ಅವರಿಂದ ಈ ಕೆಲಸ ಮಾಡಲು ಸಾಧ್ಯವಾಯಿತು. ಹಾಗೂ ಅವರ ಜೊತೆಯಲ್ಲಿ ಸಾಕಷ್ಟು ಜನರು ಕಲಾವಿದರ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ಮುಖ್ಯವಾಗಿ ರಾಕ್ ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ, ಇದೊಂದು ಸಾಧಾರಣವಾದ ಫೋಟೋ ರೀತಿಯಲ್ಲಿ ಕಾಣುತ್ತಿದೆ. ಆದರೆ ಇದರ ಹಿಂದಿನ ಯಶಸ್ಸು ತುಂಬಾ ಇದೆ' ಎಂದಿದ್ದಾರೆ.

ಡಾ ರಾಜ್ ಕುಮಾರ್ ಕನಸು ನನಸು ಮಾಡಿದ ಕಲಾವಿದರು

Sudeep tweeted about the new building of Karnataka Film Artists' Association

ಕಲಾವಿದರ ಕನಸನ್ನು ನನಸು ಮಾಡಿಕೊಳ್ಳಲು ಸಹಕಾರ ಮಾಡಿಕೊಟ್ಟ ಅಂಬರೀಶ್, ರಾಕ್ ಲೈನ್ ಹಾಗೂ ದೊಡ್ಡಣ್ಣ ಅವರಿಗೆ ಪ್ರತಿ ಕಲಾವಿದರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಹೊಸ ಕಟ್ಟಡದಲ್ಲಿ ಹಲವಾರು ಸೌಕರ್ಯಗಳಿದ್ದು ಕೇವಲ ನಟ-ನಟಿಯರು ಮಾತ್ರವಲ್ಲದೆ ನಿರ್ದೇಶಕ ಹಾಗೂ ನಿರ್ಮಾಪಕರಿಗೂ ಸಹಾಯವಾಗಲಿದೆ.

Sudeep tweeted about the new building of Karnataka Film Artists' Association

ಕಲಾವಿದರಿಗಾಗಿ ಸ್ವಂತ ಕಟ್ಟಡ ನಿರ್ಮಾಣ ಆಗಬೇಕು ಎನ್ನುವುದಷ್ಟೇ ರಾಜ್ ಕುಮಾರ್ ಅವರ ಕನಸಾಗಿರಲಿಲ್ಲ. ಕಲಾವಿದರು ತೆರೆ ಮೇಲೆ ಸುಂದರವಾಗಿ ಕಾಣಿಸಿಕೊಳ್ಳಲು ಬೇಕಾಗುವ ಎಲ್ಲಾ ಸೌಲಭ್ಯಗಳು ಅಲ್ಲಿಯೇ ಲಭ್ಯವಾಗಬೇಕು ಎನ್ನುವ ಆಸೆ ಅವರದ್ದಾಗಿತ್ತು. ಇವೆಲ್ಲಾ ಉದ್ದೇಶಗಳನ್ನ ಗಮನದಲ್ಲಿಟ್ಟುಕೊಂಡು ಕಟ್ಟಡವನ್ನ ನಿರ್ಮಾಣ ಮಾಡಲಾಗಿದೆ.

English summary
Kannada actor Kiccha Sudeep tweeted about the new building of Karnataka Film Artists' Association, he said Ambarish's efforts have been able to do all this, At the same time Sudeep have congratulated Rockline Venkatesh and Doddanna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada