»   » ಅಚ್ಚರಿ : ಸುದೀಪ್ ನಟನೆಯ 'ಕೋಟಿಗೊಬ್ಬ-2' ಚಿತ್ರದಲ್ಲಿ 'ಶಿವಣ್ಣ'.!

ಅಚ್ಚರಿ : ಸುದೀಪ್ ನಟನೆಯ 'ಕೋಟಿಗೊಬ್ಬ-2' ಚಿತ್ರದಲ್ಲಿ 'ಶಿವಣ್ಣ'.!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೂ ಆಗ್ಬರಲ್ಲ ಅಂತ ಗಾಂಧಿನಗರದಲ್ಲಿ ಈ ಹಿಂದೆ ಗುಲ್ಲೆದ್ದಿತ್ತು.

ಎಲ್ಲಾ ಗಾಸಿಪ್ ಗಳಿಗೂ ಬ್ರೇಕ್ ಹಾಕಿ, ತಮ್ಮ ಮಗಳ ಮದುವೆಗೆ ಆಹ್ವಾನ ನೀಡಲು ಶಿವಣ್ಣ, ಸುದೀಪ್ ಮನೆಗೆ ತೆರಳಿದ್ದರು. ಬಿಜಿ ಶೆಡ್ಯೂಲ್ ನಡುವೆಯೂ ಶಿವಣ್ಣ ಪುತ್ರಿಯ ಮದುವೆಗೆ ಆಗಮಿಸಿ ಸುದೀಪ್ ಹರಸಿದ್ರು. ಸುದೀಪ್ ಹೋಸ್ಟ್ ಮಾಡಿದ 'ಬಿಗ್ ಬಾಸ್' ವೇದಿಕೆಗೆ ಶಿವಣ್ಣ ಆಗಮಿಸಿ, ಕಿಚ್ಚನನ್ನ ಹೊಗಳಿದ್ರು. ಇದೆಲ್ಲಾ ಪಾಸ್ಟ್ ಸ್ಟೋರಿ.!


ಈಗ ಶಿವಣ್ಣ ಮತ್ತು ಸುದೀಪ್ ಒಟ್ಟಾಗಿ 'ಜೋಗಿ' ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿರುವುದು ನಿಮಗೆ ಗೊತ್ತೇ ಇದೆ. [ನೀವಂದುಕೊಂಡಂಗಿಲ್ಲ ಸುದೀಪ್-ಶಿವಣ್ಣ!]


ಅದಕ್ಕೂ ಮುನ್ನವೇ 'ಕೋಟಿಗೊಬ್ಬ-2' ಚಿತ್ರದಲ್ಲಿ ಸುದೀಪ್ ಮತ್ತು 'ಶಿವಣ್ಣ' ಒಂದಾಗಿದ್ದಾರೆ. ಅಚ್ಚರಿ ಪಡುವ ಮೊದಲು ಸಂಪೂರ್ಣ ಲೇಖನ ಓದಿ....


'ಕೋಟಿಗೊಬ್ಬ-2' ಚಿತ್ರದಲ್ಲಿ 'ಶಿವಣ್ಣ'.!

'ಕೋಟಿಗೊಬ್ಬ-2' ಚಿತ್ರದಲ್ಲಿ ಶಿವಣ್ಣ ಅಂದಕೂಡಲೆ, ಶಿವರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಂತಲ್ಲ. ಅದಕ್ಕಿಂತ ಒಂದು ಇಂಟ್ರೆಸ್ಟಿಂಗ್ ಸುದ್ದಿ ಇದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....


ಸುದೀಪ್ ಹೆಸರು ಶಿವ.!

'ಕೋಟಿಗೊಬ್ಬ-2' ಚಿತ್ರದಲ್ಲಿ ಸುದೀಪ್ ಎರಡು ವಿಭಿನ್ನ ಶೇಡ್ ಗಳಿರುವ ಪಾತ್ರಗಳಲ್ಲಿ ಮಿಂಚಿದ್ದಾರೆ. ಅದರಲ್ಲಿ ಒಂದು ಪಾತ್ರದ ಹೆಸರು 'ಶಿವ', ಮತ್ತೊಂದು ಪಾತ್ರದ ಹೆಸರು 'ಸತ್ಯ' ಅಂತ.


ಶಿವಣ್ಣ ಅಂತ ಕರೆಯುತ್ತಾರೆ.!

ಸಹಚರರು ಸುದೀಪ್ ರನ್ನ 'ಶಿವಣ್ಣ' ಅಂತ ಕರೆಯುತ್ತಿದ್ದಂತೆ ಚಿತ್ರಮಂದಿರದಲ್ಲಿ ಶಿಳ್ಳೆ ಸುರಿಮಳೆ.


ಇನ್ನೊಬ್ಬ ಸತ್ಯ.!

ಸತ್ಯ ಎಂದ ಕೂಡಲೆ, ಎಲ್ಲರಿಗೂ ತಕ್ಷಣ ನೆನಪಾಗುವುದು ಶಿವಣ್ಣ ಅಭಿನಯದ 'ಓಂ' ಚಿತ್ರದ ಸತ್ಯ ಪಾತ್ರ.


ಇದೇ ಮೊದಲು

ಶಿವ ಹಾಗೂ ಸತ್ಯ ಎಂಬ ಹೆಸರಿನ ಪಾತ್ರಗಳಿಗೆ ಸುದೀಪ್ ಬಣ್ಣ ಹಚ್ಚಿರುವುದು ಇದೇ ಮೊದಲು.


ಸತ್ಯ, ಶಿವ ಇಬ್ಬರೂ ಒಬ್ಬರೇ.!

ಸುದೀಪ್ ಪಾತ್ರಗಳಿಗೆ ಶಿವ ಹಾಗೂ ಸತ್ಯ ಅಂತ ಶಿವಣ್ಣನ ಜನಪ್ರಿಯ ಪಾತ್ರಗಳ ಹೆಸರಿಟ್ಟಿರುವುದು 'ನಾಟ್ಯ ಸಾರ್ವಭೌಮ' ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.


'ಕೋಟಿಗೊಬ್ಬ-2' ವಿಮರ್ಶೆ ಇಲ್ಲಿದೆ

ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಂದು ಬಿಡುಗಡೆ ಆಗಿರುವ 'ಕೋಟಿಗೊಬ್ಬ-2' ಚಿತ್ರದ ವಿಮರ್ಶೆ ಇಲ್ಲಿದೆ ನೋಡಿ.... [ವಿಮರ್ಶೆ: ಆ 'ಕೋಟಿಗೊಬ್ಬ'ನಂತಲ್ಲ ಈ 'ಕೋಟಿಗೊಬ್ಬ'.!]


English summary
Shiva and Satya...both are popular character names of Kannada Actor Shiva Rajkumar. Kiccha Sudeep has also used the same names in the movie 'Kotigobba 2', which made fans go crazy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada