For Quick Alerts
  ALLOW NOTIFICATIONS  
  For Daily Alerts

  ಸಲ್ಲು 'ದಬಾಂಗ್' ಬಗ್ಗೆ ಸುದೀಪ್ ಕೊಟ್ಟ ಎಕ್ಸ್ ಕ್ಲೂಸಿವ್ ಮಾಹಿತಿ

  |
  ಸಲ್ಲು 'ದಬಾಂಗ್' ಬಗ್ಗೆ ಸುದೀಪ್ ಕೊಟ್ಟ ಎಕ್ಸ್ ಕ್ಲೂಸಿವ್ ಮಾಹಿತಿ | FILMIBEAT KANNADA

  ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಟೀಸರ್ ಬಿಡುಗಡೆಯಾಗಿತ್ತು. ಈ ಟೀಸರ್ ತಮಿಳು, ತೆಲುಗು, ಹಿಂದಿ ಇಂಡಸ್ಟ್ರಿಯ ಅನೇಕರು ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಒಬ್ಬರು.

  ಬಿಟೌನ್ ನಲ್ಲಿ 'ಸುಲ್ತಾನ್' ಮಾಡಿ ಗೆದ್ದಿದ್ದ ಸಲ್ಮಾನ್, ಕನ್ನಡದ 'ಪೈಲ್ವಾನ್' ನೋಡಿ ಖುಷಿಯಾಗಿದ್ದಾರೆ. ಇದಕ್ಕಿಂತ ವಿಶೇಷವಾದ ಸುದ್ದಿ ಏನಪ್ಪಾ ಅಂದ್ರೆ, ಸಲ್ಮಾನ್ ಖಾನ್ ಜೊತೆಯಲ್ಲಿ ಸುದೀಪ್ ಅಭಿನಯಿಸ್ತಾರಾ ಎಂಬ ಸುದ್ದಿ ಬಹಳ ದಿನಗಳಿಂದ ಕೇಳಿ ಬರ್ತಿದೆ.

  ಸಲ್ಮಾನ್ ಖಾನ್ ಚಿತ್ರದಲ್ಲಿ ಸುದೀಪ್ ವಿಲನ್! ಸಾಕ್ಷಿ ಇಲ್ಲಿದೆ

  'ಟೈಗರ್ ಜಿಂದಾ ಹೈ' ಅದಾದ ಬಳಿಕ 'ದಬಾಂಗ್- 3' ಸಿನಿಮಾದಲ್ಲಿ ಸುದೀಪ್ ಇರಲಿದ್ದಾರೆ ಎಂಬ ಮಾತಿದೆ. ಬಟ್, ಈ ಬಗ್ಗೆ ಯಾರೊಬ್ಬರು ಪಕ್ಕಾ ನ್ಯೂಸ್ ಕೊಟ್ಟಿರಲಿಲ್ಲ. ಇದೀಗ ಸ್ವತಃ ಸುದೀಪ್ ಅವರೇ 'ದಬಾಂಗ್-3' ಮಾಡೋದ್ರ ಕುರಿತು ಎಕ್ಸ್ ಕ್ಲೂಸಿವ್ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಮುಂದೆ ಓದಿ...

  'ದಬಾಂಗ್-3' ಮಾಡೋದು ಪಕ್ಕಾ

  'ದಬಾಂಗ್-3' ಮಾಡೋದು ಪಕ್ಕಾ

  ಸಲ್ಮಾನ್ ಖಾನ್ ಜೊತೆ ಸುದೀಪ್ ಸಿನಿಮಾ ಮಾಡ್ತಾರೆ ಎನ್ನುವುದು ಬಹಳ ವರ್ಷಗಳ ಹಿಂದಿನ ಟಾಕ್. ಆದ್ರೆ, ಯಾವ ಚಿತ್ರದಲ್ಲಿ ಅನ್ನೋದು ಖಚಿತವಾಗಿರಲಿಲ್ಲ. ಎಲ್ಲರು ಅಂದುಕೊಂಡಂತೆ ಸಲ್ಲು ಅಭಿನಯಿಸಿದ್ದ 'ಟೈಗರ್ ಜಿಂದಾ ಹೈ' ಚಿತ್ರದಲ್ಲಿ ಸುದೀಪ್ ಇರಬೇಕಿತ್ತು. ಬಟ್, ಆ ಚಿತ್ರದಲ್ಲಿ ಸುದೀಪ್ ಪಾತ್ರವಿರಲಿಲ್ಲ. ಸುದೀಪ್ ಮಾಡಬೇಕಿರುವುದು 'ದಬಾಂಗ್-3'. ಇದು ಪಕ್ಕಾ ಎಂದು ಸ್ವತಃ ಸುದೀಪ್ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.

  ಅಬ್ಬಾ.. ಸುದೀಪ್ 'ಪೈಲ್ವಾನ್' ಬಗ್ಗೆ 'ಸುಲ್ತಾನ್' ಸಲ್ಮಾನ್ ಟ್ವೀಟ್

  'ಭಾರತ್' ಚಿತ್ರದಿಂದ ಪೋಸ್ಟ್ ಪೋನ್

  'ಭಾರತ್' ಚಿತ್ರದಿಂದ ಪೋಸ್ಟ್ ಪೋನ್

  ಎಲ್ಲ ಅಂದುಕೊಂಡಂತೆ ಆಗಿದ್ದರೇ 'ದಬಾಂಗ್-3' ಸಿನಿಮಾ ಇಷ್ಟೊತ್ತಿಗಾಗಲೇ ಸೆಟ್ಟೇರಬೇಕಿತ್ತು. ಆದ್ರೆ, ಸಲ್ಮಾನ್ ಖಾನ್ ಅವರು 'ಭಾರತ್' ಚಿತ್ರವನ್ನ ಕೈಗೆತ್ತಿಕೊಂಡ ಕಾರಣ 'ದಬಾಂಗ್-3' ಮುಂದಕ್ಕೆ ಹೋಗಿತ್ತು. ಇದೀಗ, ಆ ಸಮಯ ಬಂದಿದೆ. 'ದಬಾಂಗ್-3' ಮಾಡ್ತಿದ್ದೀವಿ ಎಂದು ಅಭಿನಯ ಚಕ್ರವರ್ತಿ ಪ್ರಕಟ ಮಾಡಿದ್ದಾರೆ.

  ಸುದೀಪ್ ಗಾಗಿ ಪಾತ್ರ ಕ್ರಿಯೇಟ್ ಆಗಿದೆ

  ಸುದೀಪ್ ಗಾಗಿ ಪಾತ್ರ ಕ್ರಿಯೇಟ್ ಆಗಿದೆ

  ಅಂದ್ಹಾಗೆ, 'ದಬಾಂಗ್-3' ಚಿತ್ರವನ್ನ ಪ್ರಭುದೇವ ನಿರ್ದೇಶನ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಗಾಗಿಯೇ ಒಂದು ವಿಶೇಷ ಪಾತ್ರವನ್ನ ಕ್ರಿಯೇಟ್ ಮಾಡಿದ್ದು, ಕಥೆ ಕೇಳಿ ಕಿಚ್ಚ ಥ್ರಿಲ್ ಆಗಿದ್ದರಂತೆ. ಸುದೀಪ್ ಅವರೇ ಮಾಡಬೇಕು ಎಂದು ಪ್ರಭುದೇವ ಕಾದು ಸಿನಿಮಾ ಮಾಡ್ತಿದ್ದಾರಂತೆ.

  ಇನ್ನೊಬ್ಬ ಹೀರೋ ಮಾಡಬೇಕಿರುವ ಪಾತ್ರ

  ಇನ್ನೊಬ್ಬ ಹೀರೋ ಮಾಡಬೇಕಿರುವ ಪಾತ್ರ

  'ದಬಾಂಗ್-3' ಚಿತ್ರದಲ್ಲಿ ಸಲ್ಮಾನ್ ಖಾನ್ ಹೀರೋ. ಪ್ರಮುಖ ಪಾತ್ರವೊಂದರಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದು, ಸುದೀಪ್ ಗೆ ಈ ಸಿನಿಮಾದಲ್ಲಿ ಹಾಡು ಕೂಡ ಇದೆಯಂತೆ. ಈ ಪಾತ್ರವನ್ನ ಸಾಮಾನ್ಯ ಕಲಾವಿದ ಮಾಡೋದಕ್ಕೆ ಆಗಲ್ಲ. ಇದನ್ನ ಇನ್ನೊಬ್ಬ ಹೀರೋ ಮಾಡಬೇಕಾದ ಪಾತ್ರ ಎಂದು ಸುದೀಪ್ ಸುಳಿವು ನೀಡಿದ್ದಾರೆ.

  ಮಾರ್ಚ್-ಏಪ್ರಿಲ್ ನಲ್ಲಿ ಆರಂಭ

  ಮಾರ್ಚ್-ಏಪ್ರಿಲ್ ನಲ್ಲಿ ಆರಂಭ

  'ದಬಾಂಗ್-3' ಸಿನಿಮಾ ಏಪ್ರಿಲ್ ಅಥವಾ ಮಾರ್ಚ್ ತಿಂಗಳಲ್ಲಿ ಆರಂಭವಾಗುತ್ತಿದೆ. ಈ ಕಡೆ ಸುದೀಪ್ 'ಪೈಲ್ವಾನ್' ಮುಗಿಸಿ ಜೊತೆಗೆ 'ಕೋಟಿಗೊಬ್ಬ-3' ಚಿತ್ರವನ್ನ ಕೂಡ ಮುಗಿಸುವ ಹಂತದಲ್ಲಿದ್ದಾರೆ. ಕೋಟಿಗೊಬ್ಬ ಮುಗಿದ ತಕ್ಷಣ ದಬಾಂಗ್ ಸೆಟ್ ಗೆ ಸುದೀಪ್ ಹಾಜರಾಗಲಿದ್ದಾರಂತೆ.

  English summary
  Kannada actor kiccha sudeep will be a part of Dabangg 3 which will be produced by Arbaaz Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X