For Quick Alerts
  ALLOW NOTIFICATIONS  
  For Daily Alerts

  ಚಿರು-ಮೇಘನಾ ಕಲ್ಯಾಣದಲ್ಲಿ ಕಾಣಿಸಿಲ್ಲ ಈ ನಟರು: ಎಲ್ಲೋಗಿದ್ದರು?

  By Bharath Kumar
  |
  ಚಿರು-ಮೇಘ ಮದುವೆಗೆ ಬಾರದ ಸ್ಟಾರ್ ನಟರು ಎಲ್ಲಿ ಹೋಗಿದ್ರು ?| Filmibeat Kannada

  ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮದುವೆ ಸಂಭ್ರಮದಲ್ಲಿ ಇಡೀ ಸ್ಯಾಂಡಲ್ ವುಡ್ ಭಾಗಿಯಾಗಿದ್ದು, ನವ ವಧು-ವರರಿಗೆ ಶುಭ ಕೋರಿದ್ದಾರೆ.

  ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಮುಹೂರ್ತ ಮತ್ತು ಆರತಕ್ಷತೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಚಿತಾ ರಾಮ್, ರಾಧಿಕಾ ಕುಮಾರಸ್ವಾಮಿ, ಧನಂಜಯ್ ಹೀಗೆ ಅನೇಕ ಕಲಾವಿದರು ಮದುಗೆ ಹೋಗಿದ್ದರು.

  ಚಿರು-ಮೇಘನಾ ಆರತಕ್ಷತೆಯಲ್ಲಿ ತಾರಾ ಮೆರುಗುಚಿರು-ಮೇಘನಾ ಆರತಕ್ಷತೆಯಲ್ಲಿ ತಾರಾ ಮೆರುಗು

  ಆದ್ರೆ, ಕನ್ನಡದ ಕೆಲ ಖ್ಯಾತ ನಟರು ಚಿರು-ಮೇಘನಾ ಮದುವೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ವಿವಿಧ ಕಾರಣಗಳಿಂದ ಬೇರೆ ಬೇರೆ ಕಡೆ ಹೋಗಿರುವ ಈ ನಟರು ತಾರಾ ಜೋಡಿಯ ಮದುವೆಗೆ ಬಂದಿಲ್ಲ. ಹಾಗಿದ್ರೆ, ಯಾವೆಲ್ಲ ಸ್ಟಾರ್ ಗಳು ಚಿರು-ಮೇಘನಾ ಮದುವೆಯಲ್ಲಿ ಕಾಣಿಸಿಕೊಂಡಿಲ್ಲ ಎನ್ನುವುದು ಮುಂದೆ ನೋಡಿ....

  ಮಲೇಷಿಯಾದಲ್ಲಿ ಸುದೀಪ್

  ಮಲೇಷಿಯಾದಲ್ಲಿ ಸುದೀಪ್

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮದುವೆ ಬರ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಿಗೆ ಇತ್ತು. ಆದ್ರೆ, ಫ್ಯಾಮಿಲಿ ಜೊತೆ ಸಮ್ಮರ್ ಹಾಲಿಡೇಗಾಗಿ ಮಲೇಷಿಯಾಗೆ ಹೋಗಿದ್ದ ಕಾರಣ ಚಿರು-ಮೇಘನಾ ಮದುವೆಯಲ್ಲಿ ಭಾಗವಹಿಸಿಲ್ಲ.

  ಮಲೇಷಿಯಾದಲ್ಲಿ ಕಿಚ್ಚನ ಫ್ಯಾಮಿಲಿ ಟ್ರಿಪ್ಮಲೇಷಿಯಾದಲ್ಲಿ ಕಿಚ್ಚನ ಫ್ಯಾಮಿಲಿ ಟ್ರಿಪ್

  ಶಿವಣ್ಣ ಭಾಗಿಯಾಗಿಲ್ಲ

  ಶಿವಣ್ಣ ಭಾಗಿಯಾಗಿಲ್ಲ

  ದುಬೈ ಮತ್ತು ಮಸ್ಕತ್ ದೇಶಗಳಲ್ಲಿ ಟಗರು ಚಿತ್ರದ ಪ್ರೀಮಿಯರ್ ಪ್ರದರ್ಶನ ನಡೆಯುತ್ತಿದ್ದ ಕಾರಣ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ನಿರ್ಮಾಪಕ ಕೆಪಿ ಶ್ರೀಕಾಂತ್ ಎಲ್ಲರೂ ಹೋಗಿದ್ದರು. ಹೀಗಾಗಿ, ತಾರಾ ಜೋಡಿಯ ಮದುವೆಯನ್ನ ಶಿವಣ್ಣ ಫ್ಯಾಮಿಲಿ ಮಿಸ್ ಮಾಡಿಕೊಂಡಿದೆ.

  ಮಸ್ಕತ್, ದುಬೈನಲ್ಲಿ ಶಿವಣ್ಣನ 'ಟಗರು' ಅಬ್ಬರಮಸ್ಕತ್, ದುಬೈನಲ್ಲಿ ಶಿವಣ್ಣನ 'ಟಗರು' ಅಬ್ಬರ

  ಪ್ರಚಾರದಲ್ಲಿ ಯಶ್ ಬ್ಯುಸಿ

  ಪ್ರಚಾರದಲ್ಲಿ ಯಶ್ ಬ್ಯುಸಿ

  ಇನ್ನು ರಾಕಿಂಗ್ ಸ್ಟಾರ್ ಯಶ್ ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರ ಮಾಡುವುದಾಗಿ ಒಪ್ಪಿಗೆ ನೀಡಿರುವುದರಿಂದ ಮತಯಾಚನೆಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ, ಮೈಸೂರು ಜಿಲ್ಲೆಯಲ್ಲಿ ಪ್ರಚಾರ ಮಾಡುತ್ತಿರುವ ಯಶ್ ದಂಪತಿ ಕೂಡ ಮದುವೆಯಲ್ಲಿ ಭಾಗಿಯಾಗಿಲ್ಲ.

  ಚುನಾವಣೆ ಪ್ರಚಾರಕ್ಕೆ ನಟ ಯಶ್ ಧುಮುಕಿರುವುದರ ಹಿಂದಿನ ಗುಟ್ಟು ರಟ್ಟು.!ಚುನಾವಣೆ ಪ್ರಚಾರಕ್ಕೆ ನಟ ಯಶ್ ಧುಮುಕಿರುವುದರ ಹಿಂದಿನ ಗುಟ್ಟು ರಟ್ಟು.!

  ಸಾಂಗ್ ಶೂಟಿಂಗ್ ನಲ್ಲಿ ಉಪೇಂದ್ರ

  ಸಾಂಗ್ ಶೂಟಿಂಗ್ ನಲ್ಲಿ ಉಪೇಂದ್ರ

  ಇನ್ನು 'ಹೋಮ್ ಮಿನಿಸ್ಟರ್' ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ''ಮಲೇಷಿಯಾದಲ್ಲಿ ಇದ್ದಾರೆ. ಹೀಗಾಗಿ, ಉಪ್ಪಿ ಫ್ಯಾಮಿಲಿ ಕೂಡ ಮದುವೆಯಲ್ಲಿ ಪಾಲ್ಗೊಳ್ಳಲಿಲ್ಲ.

  ದೆಹಲಿಯಲ್ಲಿ ಉಪೇಂದ್ರ : 'ಉತ್ತಮ ಪ್ರಜಾಕೀಯ ಪಾರ್ಟಿ' ನೋಂದಣಿ ಪ್ರಕ್ರಿಯೆದೆಹಲಿಯಲ್ಲಿ ಉಪೇಂದ್ರ : 'ಉತ್ತಮ ಪ್ರಜಾಕೀಯ ಪಾರ್ಟಿ' ನೋಂದಣಿ ಪ್ರಕ್ರಿಯೆ

  English summary
  Kannada actor sudeep, yash, shivarajkumar, upendra did not attend the chiranjeevi sarja and meghana raj marriage at may 2nd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X