»   » ತಮಿಳುನಾಡಿನಲ್ಲಿ ಕನ್ನಡ ಸಿನಿಮಾ ಬ್ಯಾನ್ ! ನಟಿ ಸುಹಾಸಿನಿ ಹೇಳಿದ್ದೇನು ?

ತಮಿಳುನಾಡಿನಲ್ಲಿ ಕನ್ನಡ ಸಿನಿಮಾ ಬ್ಯಾನ್ ! ನಟಿ ಸುಹಾಸಿನಿ ಹೇಳಿದ್ದೇನು ?

By: Bharath kumar
Subscribe to Filmibeat Kannada

ಸದ್ಯ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಎಲ್ಲವೂ ಸರಿಯಿಲ್ಲ ಎನ್ನುತ್ತಿರುವ ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಸುಹಾಸಿನಿ ಕರ್ನಾಟಕದ ಪರ ಬ್ಯಾಟ್ ಬೀಸಿದ್ದಾರೆ. ಕಾವೇರಿ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡದ ಸುಹಾಸಿನಿ ಈಗ ಕನ್ನಡ ಚಿತ್ರಗಳನ್ನ ತಮಿಳುನಾಡಿನಲ್ಲಿ ಬ್ಯಾನ್ ಮಾಡಿದ ವಿಷ್ಯಕ್ಕೆ ತಮಿಳರಿಗೆ ಟಾಂಗ್ ನೀಡಿದ್ದಾರೆ.

ಕಾವೇರಿ ವಿವಾದ ಹಿನ್ನಲೆ ಕರ್ನಾಟಕದಲ್ಲಿ ಯಾವುದೇ ತಮಿಳು ಚಿತ್ರಗಳನ್ನ ಪ್ರದರ್ಶಿಸಬಾರದು ಅಂತ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ದು ಗೊತ್ತಿದೆ. ಇನ್ನು ಇದೇ ವಿಚಾರವಾಗಿ ಕಳೆದ ವಾರ ಡಾ.ವಿಷ್ಣುವರ್ಧನ್ ಅವರ 201ನೇ ಸಿನಿಮಾ 'ನಾಗರಹಾವು' ಚಿತ್ರದ, ತಮಿಳು ಅವತರಣಿಕೆ 'ಶಿವನಾಗಂ' ಚಿತ್ರವನ್ನ ತಮಿಳುನಾಡಿನಲ್ಲಿ ಬಿಡುಗಡೆ ಮಾಡದಂತೆ ಅಲ್ಲಿನ ತಮಿಳು ಸಂಘಟನೆಗಳು ಖಂಡಿಸಿದ್ದರು.[ವಿಷ್ಣುವರ್ಧನ್ ರವರ 'ನಾಗರಹಾವು' ಚಿತ್ರಕ್ಕೆ ತಮಿಳುನಾಡಿನಲ್ಲಿ ಬ್ರೇಕ್ ]

ಈ ವಿಷಯಕ್ಕೆ ಸಂಬಂಧಿಸಿದಂತೆ ಈಗ ಬಹುಭಾಷ ನಟಿ ಸುಹಾಸಿನಿ ಕರ್ನಾಟಕದ ಪರವಾಗಿ ನಿಂತಿದ್ದು, ತಮಿಳರಿಗೆ ಕನ್ನಡ ಚಿತ್ರಗಳ ಹಾಗೂ ಕನ್ನಡ ಚಿತ್ರರಂಗದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗಾದ್ರೆ, ನಟಿ ಸುಹಾಸಿನಿ ಕನ್ನಡದ ಬಗ್ಗೆ ಹೇಳಿದ್ದೇನು ಅಂತ ಇಲ್ಲಿದೆ ನೋಡಿ...

ಹೊಸ ಅಲೆಯನ್ನ ಮೊದಲು ಸೃಷ್ಠಿಸಿದ್ದು ಕನ್ನಡ ಚಿತ್ರರಂಗ

''ದಕ್ಷಿಣ ಭಾರತದಲ್ಲಿ ಹೊಸ ಅಲೆಯನ್ನ ಹುಟ್ಟುಹಾಕಿದ್ದು ಮೊದಲು ಕನ್ನಡ ಚಿತ್ರರಂಗ. ಗಿರೀಶ್ ಕಾರ್ನಾಡ್, ಜಿ.ವಿ. ಅಯ್ಯರ್, ಬಿವಿ ಕಾರಂತ ಅವರ ಸಿನಿಮಾಗಳು ಇದಕ್ಕೆ ಸಾಕ್ಷಿ''.- ಸುಹಾಸಿನಿ ಹೇಳಿದ್ದಾರೆ.

ಮೊದಲ ಅನುಭವ ಕೊಟ್ಟಿದ್ದು ಕನ್ನಡ

''ಬರಿ ಕನ್ನಡ ಮಾತ್ರವಲ್ಲ, ತಮಿಳು, ತೆಲುಗು, ಹಿಂದಿ ಹೀಗೆ ಎಲ್ಲ ಚಿತ್ರರಂಗದಲ್ಲಿರುವ ಕೆಲವರಿಗೆ ಮೊದಲ ಅವಕಾಶ, ಮೊದಲ ಅನುಭವ ಕೊಟ್ಟಿದ್ದು ಕನ್ನಡ ಚಿತ್ರರಂಗ''. ಸುಹಾಸಿನಿ

ಕನ್ನಡದಲ್ಲಿ ಮಣಿರತ್ನಂ ಚೊಚ್ಚಲ ಸಿನಿಮಾ

''ನನ್ನ ಪತಿ ಮಣಿರತ್ನಂ ಅವರು ಮೊದಲು ನಿರ್ದೇಶನ ಮಾಡಿದ್ದು ಕನ್ನಡ ಸಿನಿಮಾವನ್ನ. 'ಪಲ್ಲವಿ ಅನುಪಲ್ಲವಿ' ಮಣಿರತ್ನಂ ಅವರ ಚೊಚ್ಚಲ ನಿರ್ದೇಶನದ ಚಿತ್ರ, 'ಬಾಲು ಮಹೇಂದರ್' ಅವರ ಮೊದಲ ನಿರ್ದೇಶನ ಸಿನಿಮಾ ಕೂಡ ಕನ್ನಡದಲ್ಲಿ. 'ಕಮಲ್ ಹಾಸನ್' ಅವರ ಅಮ್ಮ ಕಮಲ್ ಅಭಿನಯವನ್ನ ಮೊದಲು ನೋಡಿದ್ದು ಕನ್ನಡದ 'ಕೋಕಿಲಾ ಚಿತ್ರದ ಮೂಲಕ''-ಸುಹಾಸಿನಿ

'ನಾಗರಹಾವು' ನೋಡಿದ ಅನುಭವ

''ಒಮ್ಮೆ ಚಿತ್ರದುರ್ಗದಲ್ಲಿ ನಡೆದ ನೃತ್ಯ ಸ್ವರ್ಧೆಯಲ್ಲಿ ಕರ್ನಾಟಕದ ವಿರುದ್ಧ ನಾವು ಸೋತಿದ್ದೇವು. ಆಗ ಕರ್ನಾಟದವರೆ ನಮ್ಮನ್ನ ಸಮಾಧಾನ ಮಾಡಿ, 'ನಾಗರಹಾವು' ಚಿತ್ರಕ್ಕೆ ಕರೆದುಕೊಂಡು ಹೋಗಿದ್ದರು. ಆ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಅಭಿನಯ ಕಂಡು ಆಶ್ಚರ್ಯವಾದೆವು. ಆಗಲೇ ನಮಗೆ ಅನ್ನಿಸಿತ್ತು. ಕೆ ಬಾಲಚಂದಿರ್ ಅವರಂತೆ ನಿಲ್ಲಬಲ್ಲ ಮತ್ತೊಬ್ಬ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅಂತ''-ಸುಹಾಸಿನಿ

'ನನ್ನದು ಕನ್ನಡದಲ್ಲಿ ಹೆಚ್ಚು ಸಿನಿಮಾ'

''ನಾನು ಕೂಡ ತಮಿಳಿಗೆ ಹೋಲಿಸಿಕೊಂಡರೆ ತಮಿಳು ಚಿತ್ರಕ್ಕಿಂತ ಕನ್ನಡದಲ್ಲಿ ಹೆಚ್ಚು ನಟಿಸಿದ್ದೇನೆ. ಕರ್ನಾಟಕದಲ್ಲಿ ಈಗಲೂ ನನ್ನನ್ನ 'ಬಂಧನ' ಚಿತ್ರದ ಮೂಲಕ ಹೆಚ್ಚು ಗುರುತಿಸುತ್ತಾರೆ''. ಸುಹಾಸಿನಿ

ಸ್ಯಾಂಡಲ್ ವುಡ್ ಇತಿಹಾಸ ಹೇಳಿದ ಸುಹಾಸಿನಿ

''ಭೂತಯ್ಯನ ಮಗ ಅಯ್ಯು', 'ನಾಗರಹಾವು', 'ಬೆಂಕಿಯಲ್ಲಿ ಅರಳಿದ ಹೂವು' ಚಿತ್ರಗಳು ಕನ್ನಡದ ದಂತಕಥೆಗಳು. ಕನ್ನಡ ಹಾಗೂ ತಮಿಳಿಗೆ ಅವಿನಾಭಾವ ಸಂಬಂಧವಿದೆ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಕಲ್ಯಾಣ್ ಕುಮಾರ್ ರಂತಹ ದೊಡ್ಡ ನಟರಿಗೆ ತಮಿಳುನಾಡಿನ ಜೊತೆ ಸಂಬಂಧವಿತ್ತು. ತಮಿಳುನಾಡಿನಲ್ಲಿ ಅವರ ಮನೆಯಿತ್ತು'' ಸುಹಾಸಿನಿ

ದಯವಿಟ್ಟು ಕನ್ನಡ ಸಿನಿಮಾ ನೋಡಿ

''ಕಲೆಗೆ ಯಾವುದೆ ಭಾಷೆಯ ವ್ಯತ್ಯಾಸವಿಲ್ಲ. ಸಂತೋಷದಿಂದ ನಾವು ಕನ್ನಡ ಸಿನಿಮಾನ ನೋಡೊಣ.

ಕನ್ನಡ ಸಿನಿಮಾಗಳನ್ನ ನೋಡುವುದಕ್ಕೆ ಇಲ್ಲಿ ಒಳ್ಳೆ ಪ್ರೇಕ್ಷಕರಿದ್ದಾರೆ. ಕನ್ನಡ ಸಿನಿಮಾಗಳನ್ನ ತಮಿಳುನಾಡಿನಲ್ಲಿ ಪ್ರರ್ದಶನವಾಗುವುದಕ್ಕೆ ನಾವೇ ಅವಕಾಶ ಮಾಡಿಕೊಡಬೇಕು''. ಎಂದು ನಟಿ ಸುಹಾಸಿನಿ ಕನ್ನಡ ಹಾಗೂ ಕನ್ನಡ ಚಿತ್ರರಂಗದ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.

English summary
Kannada actress Suhasini speaks about the issue of 'Kannada Movies banned In Tamilnadu' recently' Suhasini shares her memories in Kannada Film Industry, and also requested Tamilians to watch Kannada Films In Tamilnadu.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada