»   » ಸೆನ್ಸಾರ್ ಮಂಡಳಿ ವಿರುದ್ಧ ನಿರ್ಮಾಪಕ ಶೈಲೇಂದ್ರ ಬಾಬು ಗರಂ

ಸೆನ್ಸಾರ್ ಮಂಡಳಿ ವಿರುದ್ಧ ನಿರ್ಮಾಪಕ ಶೈಲೇಂದ್ರ ಬಾಬು ಗರಂ

Posted By:
Subscribe to Filmibeat Kannada

ಸುಮಂತ್ ಶೈಲೇಂದ್ರ ಅಭಿನಯದ, ಸಾಧು ಕೋಕಿಲ ನಿರ್ದೇಶನದ 'ಭಲೇ ಜೋಡಿ' ಸಿನಿಮಾ ಚಿತ್ರೀಕರಣ ಮುಗಿಸಿ ಸೆನ್ಸಾರ್ ಅಂಗಳಕ್ಕೆ ಕಾಲಿಟ್ಟಿದೆ. 'ಭಲೇ ಜೋಡಿ' ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಎರಡು ಕಡೆ ಕತ್ರಿ ಪ್ರಯೋಗ ಮಾಡುವಂತೆ ಸೂಚನೆ ನೀಡಿದೆ.

'ಭಲೇ ಜೋಡಿ' ಚಿತ್ರದಲ್ಲಿ ಸಲಿಂಗಿ ಕುರಿತಾದ ಸನ್ನಿವೇಶದ ಜೊತೆಗೆ 'ಗುಮ್ಮು' ಅನ್ನುವ ಪದವನ್ನ ಮ್ಯೂಟ್ ಮಾಡುವಂತೆ ಹೇಳಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಿರ್ಮಾಪಕ ಶೈಲೇಂದ್ರ ಬಾಬು, ''ಕನ್ನಡದಲ್ಲಿ ''ಗುಮ್ತಾನೆ..ಗುಮ್..ಗುಮ್..ಗುಮ್ತಾನೆ..'' ಅಂತ ಹಾಡಿದೆ. ಅದಕ್ಕೆ ಸೆನ್ಸಾರ್ ಪ್ರಾಬ್ಲಂ ಆಗ್ಲಿಲ್ಲ. ಈಗ್ಯಾಕೆ'' ಅಂತ ಪ್ರಶ್ನೆ ಮಾಡುತ್ತಾರೆ.

Sumanth Shailendra starrer 'Bhale Jodi' is under censor problem

''ಇನ್ನೂ ಸಲಿಂಗಿ ಕುರಿತಾದ ಸನ್ನಿವೇಶದಲ್ಲಿ ಅಶ್ಲೀಲತೆ ಇಲ್ಲ. ಅಸಭ್ಯವಾಗಿ ತೋರಿಸಿಲ್ಲ. ಒಂದ್ವೇಳೆ ಆ ಸನ್ನಿವೇಶ ಕಟ್ ಮಾಡಿದರೆ, ಸೆಕೆಂಡ್ ಹಾಫ್ ಕಥೆಗೆ ಲಿಂಕ್ ಇರೋದಿಲ್ಲ'' ಅಂತ ಹೇಳ್ತಾರೆ ನಿರ್ದೇಶಕ ಸಾಧು ಕೋಕಿಲ. [ಶೈಲೇಂದ್ರ ಬಾಬು ಸುದೀರ್ಘ 'ಆಟ'ಕ್ಕೆ ಕತ್ತರಿ ಪ್ರಯೋಗ]

ಸೆನ್ಸಾರ್ ಮಂಡಳಿ ನಿಲುವಿಗೆ ಬೇಸರ ವ್ಯಕ್ತಪಡಿಸಿರುವ ನಿರ್ಮಾಪಕ ಶೈಲೇಂದ್ರ ಬಾಬು ಮತ್ತು ನಿರ್ದೇಶಕ ಸಾಧು ಕೋಕಿಲ ರಿವೈಸಿಂಗ್ ಕಮಿಟಿ ಮುಂದೆ ಹೋಗಲು ನಿರ್ಧರಿಸಿದ್ದಾರೆ.

ಸೆನ್ಸಾರ್ ನಿಂದ ಕ್ಲೀನ್ ಚಿಟ್ ಪಡೆದಿದ್ದರೆ, 'ಭಲೇ ಜೋಡಿ' ಸಿನಿಮಾ ಈ ತಿಂಗಳಾಂತ್ಯಕ್ಕೆ ಬಿಡುಗಡೆ ಆಗ್ತಿತ್ತು. ಆದ್ರೆ, ಅಲ್ಲಿ ತಕರಾರು ಆಗಿರುವ ಕಾರಣ 'ಭಲೇ ಜೋಡಿ'ಗೆ ಬಿಡುಗಡೆ ಭಾಗ್ಯ ಎಂದೋ..? ಕಾದು ನೋಡ್ಬೇಕು.

English summary
Sumanth Shailendra starrer 'Bhale Jodi' is facing censor issues. Censor Board has given few cuts for the movie, but Producer Shailendra Babu and Director Sadhu Kokila are not happy over Censor Board's decision.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada