Just In
Don't Miss!
- Automobiles
ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ
- News
ರೈತರ ಹೋರಾಟ ಬೆಂಬಲಿಸಿ ಜ.20ರಂದು ರಾಜ್ ಭವನ ಚಲೋ
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯಶ್-ರಾಧಿಕಾ ಮಗಳಿಗೆ ಹೆಸರು ಸೂಚಿಸಿದ ನಿರ್ದೇಶಕ ಸುನಿ
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮುದ್ದು ಮಗಳ ಮೊದಲ ಫೋಟೋವನ್ನ ಅಧಿಕೃತವಾಗಿ ಇಂದು ಹಂಚಿಕೊಂಡಿದ್ದಾರೆ. ಪ್ರೀತಿಯ ಮಗಳ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದ ಲೈಕ್ಸ್, ಕಾಮೆಂಟ್ ಶೇರ್ ಮಾಡುತ್ತಿದ್ದಾರೆ.
ಮಗಳ ಫೋಟೋಗೆ ''ನೀವು ಹೇಳಿದ್ದೇ ಸರಿ.... ಇವಳು ಬರೋವರ್ಗು ಮಾತ್ರ ನನ್ನ ಹವಾ.. ಇವಳು ಬಂದಾಗಲಿಂದ ಬರೀ ಇವಳದ್ದೇ ಹವಾ.. ಇನ್ನೂ ಹೆಸರಿಟ್ಟಿಲ್ಲ ಸದ್ಯಕ್ಕೆ Baby YR ಅಂತಾನೇ ಕರೆಯೋಣ.. ಎಂದಿನಂತೆ ನಿಮ್ಮ ಆಶೀರ್ವಾದ ಇವಳ ಮೇಲೂ ಇರಲಿ'' ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಮುದ್ದು ಮಗಳ ಮೊದಲ ಫೋಟೋ ಹಂಚಿಕೊಂಡ ರಾಕಿಂಗ್ ಸ್ಟಾರ್
ಸದ್ಯಕ್ಕೆ ರಾಕಿಂಗ್ ದಂಪತಿಯ ಮಗಳಿಗೆ ಹೆಸರಿಟ್ಟಿಲ್ಲ. ಆದ್ರೆ, ಅಭಿಮಾನಿಗಳು ಪ್ರೀತಿಯಿಂದ ಅವರದ್ದೇ ಆದ ಹೆಸರುಗಳನ್ನ ಹೇಳುತ್ತಿದ್ದಾರೆ. ಯಶ್ ಮತ್ತು ರಾಧಿಕಾ ಅವರ ಹೆಸರನ್ನ ಒಟ್ಟಿಗೆ ಸೇರಿಸಿ 'ಯಶಿಕಾ' ಎಂದು ಅನೇಕರು ಸೂಚಿಸುತ್ತಿದ್ದಾರೆ.
ಇದೀಗ, ನಿರ್ದೇಶಕ ಸುನಿ ಅವರು ಯಶ್-ರಾಧಿಕಾ ಮಗಳಿಗೆ ಹೆಸರೊಂದು ಸೂಚಿಸಿದ್ದಾರೆ. ಸ್ಟಾರ್ ದಂಪತಿಯ ಹೆಸರನ್ನ ಬಳಸಿರುವ ಸುನಿ 'ಯಶೋಧಿಕಾ' ಎಂದು ಕರೆದಿದ್ದಾರೆ.
ಇದಕ್ಕೆ ಹಲವು ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಯಶೋಧಿಕಾ, ಯಶಿಕಾ ಹೆಸರುಗಳು ಚರ್ಚೆಯಲ್ಲಿದೆ. ಅಂತಿಮವಾಗಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ತಮ್ಮ ಮಗಳಿಗೆ ಯಾವ ಹೆಸರಿಡುತ್ತಾರೆ ಎಂಬುದು ಸದ್ಯದ ಕುತೂಹಲ.