For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್' ಚಿತ್ರಕ್ಕಾಗಿ ಕಾಯ್ತಿದ್ದಾರಂತೆ ಈ ಬಾಲಿವುಡ್ ನಟ.!

  |
  ಕೆಜಿಎಫ್' ಚಿತ್ರಕ್ಕಾಗಿ ಕಾಯ್ತಿದ್ದಾರಂತೆ ಈ ಬಾಲಿವುಡ್ ನಟ.! | FILMIBEAT KANNADA

  ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಡಿಸೆಂಬರ್ 21ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಯಶ್ ಸಿನಿಮಾ ತೆರೆಕಾಣುತ್ತಿದೆ.

  ಬಹುಶಃ ಕನ್ನಡದ ಸಿನಿಮಾವೊಂದು ಇಷ್ಟೊಂದು ದೊಡ್ಡ ಮಟ್ಟಿಗೆ ರಿಲೀಸ್ ಆಗ್ತಿರುವುದು ಇದೇ ಮೊದಲು. ಕೆಜಿಎಫ್ ಟ್ರೈಲರ್ ಮಾಡಿರುವ ಸದ್ದಿಗೆ ಇಡೀ ಭಾರತವೇ ಸ್ಯಾಂಡಲ್ ವುಡ್ ನತ್ತ ನೋಡುತ್ತಿದೆ.

  'ಪ್ರಭಾಸ್-ರಾಣಾರಂತೆ ನೀವು ಆಗ್ತೀರಾ' ಎಂದಿದ್ದಕ್ಕೆ ಯಶ್ ಏನಂದ್ರು.?

  ಶಾರೂಖ್ ಖಾನ್ ಸಿನಿಮಾ ಜೊತೆ ತೆರೆಕಾಣತ್ತಿರುವ ಕೆಜಿಎಫ್ ಕಂಡು ಬಿ-ಟೌನ್ ಸ್ಟಾರ್ ಗಳು ಥ್ರಿಲ್ ಆಗಿದ್ದಾರೆ. ಇದೀಗ, ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಕೆಜಿಎಫ್ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಸುನೀಲ್ ಶೆಟ್ಟಿ ಹೇಳಿದ್ದೇನು.?

  ಸುನೀಲ್ ಶೆಟ್ಟಿ ಹೇಳಿದ್ದೇನು.?

  'ಕೆಜಿಎಫ್ ಚಿತ್ರವನ್ನ ಎದುರು ನೋಡುತ್ತಿದ್ದೀನಿ. ಕೆಜಿಎಫ್ ಚಿತ್ರಕ್ಕೆ, ಯಶ್, ನಿರ್ದೇಶಕ ಪ್ರಶಾಂತ್ ನೀಲ್, ಶ್ರೀನಿಧಿ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಮಾಡಿರುವ ಒಂದೊಳ್ಳೆ ಕೆಲಸಕ್ಕೆ ಶುಭಾಶಯ. ಆಲ್ ದಿ ಬೆಸ್ಟ್'' ಎಂದು ಸುನೀಲ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

  ಪುನೀತ್ ಕಡೆಯಿಂದ ಬಂದ ಸುದ್ದಿ ಕೇಳಿ ದೀಪಾವಳಿ ಆಚರಿಸ್ತಾರಂತೆ ಸುದೀಪ್

  1 ಕೋಟಿ ದಾಟಿದ ಟ್ರೈಲರ್ ವೀಕ್ಷಕರ ಸಂಖ್ಯೆ

  1 ಕೋಟಿ ದಾಟಿದ ಟ್ರೈಲರ್ ವೀಕ್ಷಕರ ಸಂಖ್ಯೆ

  ಕೆಜಿಎಫ್ ಹಿಂದಿ ಭಾಷೆಯ ಟ್ರೈಲರ್ ಗೆ ಭಾರಿ ಮೆಚ್ಚುಗೆ ಸಿಕ್ಕಿದ್ದು, ಯೂಟ್ಯೂಬ್ ನಲ್ಲೂ ಅತಿ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ನವೆಂಬರ್ 9 ರಂದು ರಿಲೀಸ್ ಆಗಿದ್ದ ಟ್ರೈಲರ್ ಸದ್ಯಕ್ಕೆ, 1 ಕೋಟಿ 41 ಲಕ್ಷ ವೀಕ್ಷಕರ ಸಂಖ್ಯೆಯನ್ನ ಹೊಂದಿದೆ.

  ಕೆಜಿಎಫ್ ಟ್ರೈಲರ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಬಾಲಿವುಡ್ ನಟಿ.!

  ಜೀರೋ ವರ್ಸಸ್ ಕೆಜಿಎಫ್

  ಜೀರೋ ವರ್ಸಸ್ ಕೆಜಿಎಫ್

  ಡಿಸೆಂಬರ್ 21ಕ್ಕೆ ಯಶ್ 'ಕೆಜಿಎಫ್' ಸಿನಿಮಾ ಬರ್ತಿದೆ. ವಿಶೇಷ ಅಂದ್ರೆ ಅದೇ ದಿನ ಶಾರೂಖ್ ಖಾನ್ ಅಭಿನಯದ 'ಜೀರೋ' ಸಿನಿಮಾ ಎಂಟ್ರಿಯಾಗ್ತಿದೆ. ಹೀಗಾಗಿ, ಹಿಂದಿ ಚಿತ್ರಕ್ಕೆ ಕನ್ನಡ ಸಿನಿಮಾವೊಂದು, ಹಿಂದಿ ನೆಲದಲ್ಲೇ ಪೈಪೋಟಿ ನೀಡುತ್ತಿದೆ. ಇದು ಸಹಜವಾಗಿ ನಮ್ಮ ಸ್ಯಾಂಡಲ್ ವುಡ್ ಗೆ ಹೆಮ್ಮೆಯ ವಿಷ್ಯ.

  'ಪೈಲ್ವಾನ್' ಗರಡಿಯಲ್ಲಿ ಸಿದ್ಧವಾಗಿದೆ 'ಕೆಜಿಎಫ್' ಮೀರಿಸುವ ತಂತ್ರ.!

  ನೂರು ಕೋಟಿ ಕ್ಲಬ್ ಗೆ ಕೆಜಿಎಫ್.?

  ನೂರು ಕೋಟಿ ಕ್ಲಬ್ ಗೆ ಕೆಜಿಎಫ್.?

  ಸದ್ಯ ಕೆಜಿಎಫ್ ಹವಾ ನೋಡ್ತಿದ್ರೆ, ಇದು ಕನ್ನಡದಲ್ಲಿ ನೂರು ಕೋಟಿ ಕ್ಲಬ್ ಸೇರೋ ಮೊದಲ ಸಿನಿಮಾ ಎನ್ನಲಾಗುತ್ತಿದೆ. ಗಾಂಧಿನಗರದ ಲೆಕ್ಕಾಚಾರದ ಪ್ರಕಾರ, ಅತಿ ಹೆಚ್ಚು ಥಿಯೇಟರ್ ಗಳಲ್ಲಿ ಕೆಜಿಎಫ್ ಲಗ್ಗೆಯಿಡುತ್ತೆ. ಐದು ಭಾಷೆ, ಅತಿ ಹೆಚ್ಚು ಸ್ಕ್ರೀನ್, ಇದನ್ನೆಲ್ಲ ನೋಡಿದ್ರೆ, ಕಲೆಕ್ಷನ್ ನಲ್ಲೂ ದಾಖಲೆ ಬರೆಯುವ ಸಾಧ್ಯತೆ ಇದೆಯಂತೆ.

  ರವಿತೇಜಗೂ ಆಗ್ಲಿಲ್ಲ, ದೇವರಕೊಂಡಗೂ ಆಗ್ಲಿಲ್ಲ: ಅಲ್ಲೂ ಯಶ್ ನಂ.1.!

  English summary
  Bollywood actor Sunil shetty has taken his twitter to praise rocking star yash starrer kgf.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X