For Quick Alerts
  ALLOW NOTIFICATIONS  
  For Daily Alerts

  ಸನ್ನಿ ಲಿಯೋನ್ ಅಭಿಮಾನಿಗಳಿಂದ ಜಾತ್ರಾ ಮಹೋತ್ಸವಕ್ಕೆ ಸ್ವಾಗತ!

  By ಫಿಲ್ಮಿಬೀಟ್ ಡೆಸ್ಕ್
  |

  ಮಾಜಿ ನೀಲಿ ತಾರೆ ಆಗಿದ್ದ ಸನ್ನಿ ಲಿಯೋನ್ ಇದೀಗ ಬಾಲಿವುಡ್‌ನಲ್ಲಿ ನಟಿಯಾಗಿ, ವಿಶೇಷ ಹಾಡುಗಳ ನೃತ್ಯಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ನೀಲಿ ಚಿತ್ರಗಳಲ್ಲಿ ಸನ್ನಿ ಲಿಯೋನ್ ಈಗ ನಟಿಸುತ್ತಿಲ್ಲ ಆದರೆ ಆಕೆಯ ನೀಲಿ ಚಿತ್ರಗಳಿಂದಾಗಿಯೇ ಕೋಟ್ಯಂತರ ಮಂದಿ ಅಭಿಮಾನಿಗಳನ್ನು ಸನ್ನಿ ಲಿಯೋನ್ ಪಡೆದುಕೊಂಡಿದ್ದಾರೆ. ಯಾವ ಮಟ್ಟಿಗೆಂದರೆ ಸನ್ನಿ ಲಿಯೋನ್ ಅಭಿಮಾನಿ ಸಂಘಗಳನ್ನು ತೆರೆಯುವಷ್ಟರ ಮಟ್ಟಿಗೆ ಸನ್ನಿ ಲಿಯೋನ್‌ಗೆ ಅಭಿಮಾನಿಗಳಿದ್ದಾರೆ.

  ಕರ್ನಾಟಕದಲ್ಲಿಯೂ ಸನ್ನಿ ಲಿಯೋನ್‌ಗೆ ಅಭಿಮಾನಿಗಳ ಸಂಖ್ಯೆ ಕಡಿಮೆ ಇಲ್ಲ. ಸನ್ನಿ ಲಿಯೋನ್ ಹುಟ್ಟುಹಬ್ಬಕ್ಕೆ ರಕ್ತದಾನ ಶಿಬಿರಗಳು, ಸಾಮೂಹಿಕ ಭೋಜನಗಳು ಸಹ ನಡೆಯುತ್ತವೆ. ಚಿಗುರು ಮೀಸೆ ಹುಡುಗರಂತೂ ಊರ ಜಾತ್ರೆಗೆ ಸಹ ಸನ್ನಿ ಲಿಯೋನ್ ಚಿತ್ರವುಳ್ಳ ಕಟೌಟ್‌ನಲ್ಲಿ ತಮ್ಮ ಚಿತ್ರವನ್ನು ಜೊತೆಯಾಗಿ ಹಾಕಿಸಿಕೊಂಡು ಕಾಲರ್ ಏರಿಸುತ್ತಾರೆ.

  ಸನ್ನಿ ಲಿಯೋನ್ ಅಭಿಮಾನಿ ಸಂಘ ಹುಲ್ಲೂರು

  ಸನ್ನಿ ಲಿಯೋನ್ ಅಭಿಮಾನಿ ಸಂಘ ಹುಲ್ಲೂರು

  ಇದೀಗ ಹುಲ್ಲೂರು ಗ್ರಾಮದ ಕೆಲ ಯುವಕರು ತಮ್ಮನ್ನು ಸನ್ನಿ ಲಿಯೋನ್ ಅಭಿಮಾನಿ ಸಂಘದ ಸದಸ್ಯರು ಎಂದು ಹೇಳಿಕೊಂಡಿದ್ದು, ಊರ ಜಾತ್ರೆಗೆ ಸ್ವಾಗತ ಕೋರುವ ಫ್ಲೆಕ್ಸ್ ಹಾಕಿಸಿ ಅದರಲ್ಲಿ ಸನ್ನಿ ಲಿಯೋನ್‌ಳ ದೊಡ್ಡ ಚಿತ್ರವನ್ನು ಪ್ರಕಟಿಸಿದ್ದಾರೆ. ಜೊತೆಗೆ ತಮ್ಮ ಚಿತ್ರಗಳನ್ನು ಪ್ರಕಟಿಸಿದ್ದಾರೆ. ಶರಭಾರ್ಯ ಸ್ವಾಮಿ ಹಾಗೂ ರಾಜರಾಜೇಶ್ವರಿ ದೇವಿ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಸ್ವಾಗತ ಎಂದು ಸ್ವಾಗತ ಕೋರಿದ್ದಾರೆ ಈ ಯುವಕರು.

  ಸನ್ನಿಯ ಸಂಸ್ಕಾರಮಯ ಚಿತ್ರ ಮುದ್ರಿಸಿರುವ ಹುಡುಗರು!

  ಸನ್ನಿಯ ಸಂಸ್ಕಾರಮಯ ಚಿತ್ರ ಮುದ್ರಿಸಿರುವ ಹುಡುಗರು!

  ಚಿತ್ರದಲ್ಲಿ ಸನ್ನಿ ಲಿಯೋನ್‌ನ ಸಂಸ್ಕಾರಮಯ ಚಿತ್ರವನ್ನೇ ಮುದ್ರಿಸಲಾಗಿದೆ. ಸನ್ನಿ ಲಿಯೋನ್ ಮೈತುಂಬ ಉಡುಗೆ ತೊಟ್ಟು, ಹಿಂದು ಅಕ್ಷರಗುಳ್ಳ ಶಾಲು ಹೊದ್ದು ಕೈ ಮುಗಿಯುತ್ತಿರುವ ಚಿತ್ರವನ್ನು ಪೋಸ್ಟರ್‌ನಲ್ಲಿ ಮುದ್ರಿಸಲಾಗಿದೆ. ಆದರೆ ಅದು ಸನ್ನಿ ಲಿಯೋನ್‌ರ ನಿಜವಾದ ಚಿತ್ರವಲ್ಲ ಬದಲಿಗೆ ಯಾರದ್ದೊ ಚಿತ್ರಕ್ಕೆ ಸನ್ನಿ ಲಿಯೋನ್ ಮುಖವನ್ನು ಅಂಟಿಸಿ ಮುದ್ರಿಸಲಾಗಿದೆ. ಹುಲ್ಲೂರಿನ ಯುವಕರ ಈ ಪೋಸ್ಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹಲವರು ಈ ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಿದ್ದಾರೆ.

  ಮಂಡ್ಯದ ಕೊಮ್ಮೇರಹಳ್ಳಿಯ ಯುವಕರು

  ಮಂಡ್ಯದ ಕೊಮ್ಮೇರಹಳ್ಳಿಯ ಯುವಕರು

  ಈ ಹಿಂದೆ ಮಂಡ್ಯದ ಕೊಮ್ಮೇರಹಳ್ಳಿಯ ಯುವಕರು ಸನ್ನಿ ಲಿಯೋನ್ ಹುಟ್ಟುಹಬ್ಬಕ್ಕೆ ಸನ್ನಿ ಲಿಯೋನ್‌ಳ ದೊಡ್ಡ ಕಟೌಟ್ ಮಾಡಿಸಿ ಊರ ಮಧ್ಯೆ ನಿಲ್ಲಿಸಿದ್ದರು. ಕಟೌಟ್‌ ಮೇಲೆ 'ಅನಾಥ ಮಕ್ಕಳ ತಾಯಿ ಸನ್ನಿ ಲಿಯೋನ್‌ಗೆ ಹುಟ್ಟುಹಬ್ಬದ ಶುಭಾಶಯ' ಎಂದು ಬರೆಸಿದ್ದರು. ಮಂಡ್ಯದ ಕೊಮ್ಮೇರಹಳ್ಳಿಯ ಯುವಕರ ಪ್ರೀತಿಗೆ ಮನಸೋತ ಸನ್ನಿ ಲಿಯೋನ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಕಟೌಟ್‌ನ ಚಿತ್ರವನ್ನು ಹಂಚಿಕೊಂಡು ಯುವಕರಿಗೆ ಧನ್ಯವಾದ ಹೇಳಿದ್ದರು.

  ಸನ್ನಿಯನ್ನು ನೋಡಲು ಕೇರಳದಲ್ಲಿ ಮುಗಿಬಿದ್ದಿದ್ದ ಜನ

  ಸನ್ನಿಯನ್ನು ನೋಡಲು ಕೇರಳದಲ್ಲಿ ಮುಗಿಬಿದ್ದಿದ್ದ ಜನ

  ಸನ್ನಿ ಲಿಯೋನ್‌ಗೆ ಭಾರತದಲ್ಲಿ ಬಹಳ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕೇರಳದಲ್ಲಿ ಒಮ್ಮೆ ಸನ್ನಿ ಲಿಯೋನ್‌ ಅಂಗಡಿಯೊಂದರ ಉದ್ಘಾಟನೆಗೆ ಬಂದಾಗ ಸಾವಿರಾರು ಮಂದಿ ಜನ ಸನ್ನಿ ಲಿಯೋನ್ ಅನ್ನು ನೋಡಲು ಮುಗಿಬಿದಿದ್ದರು. ರಸ್ತೆ ತುಂಬೆಲ್ಲ ಜನ ಸಾಗರವೇ ನೆರೆದಿತ್ತು. ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಗಿ ಬಂತು. ಸನ್ನಿಯನ್ನು ನೋಡಲು ಕೇರಳದ ಜನ ಮುಗಿಬಿದ್ದ ಚಿತ್ರಗಳು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ಹರಿದಾಡಿತ್ತು.

  ನೀಲಿ ಚಿತ್ರ ಉದ್ಯಮದಿಂದ ದೂರ

  ನೀಲಿ ಚಿತ್ರ ಉದ್ಯಮದಿಂದ ದೂರ

  ನೀಲಿ ಚಿತ್ರ ಉದ್ಯಮದಿಂದ ದೂರ ಬಂದಿರುವ ನಟಿ ಸನ್ನಿ ಲಿಯೋನ್ ಇದೀಗ ಬಾಲಿವುಡ್‌ನಲ್ಲಿಯೇ ಸೆಟಲ್ ಆಗಿದ್ದಾರೆ. ಹಲವು ಬಾಲಿವುಡ್ ಸಿನಿಮಾಗಳಲ್ಲಿ, ವೆಬ್ ಸರಣಿಗಳಲ್ಲಿ ನಟಿಸುತ್ತಿರುವ ಸನ್ನಿ ಲಿಯೋನ್, ವಿವಿಧ ಭಾಷೆಯ ಚಿತ್ರರಂಗಗಳ ಸಿನಿಮಾಗಳಲ್ಲಿ ಐಟಂ ಹಾಡುಗಳಲ್ಲಿ ನರ್ತಿಸುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಮುಬೈನಲ್ಲಿ ಹೊಸ ಮನೆ ಖರೀದಿಸಿರುವ ಸನ್ನಿ ಲಿಯೋನ್ ಇನ್ನು ಮುಂದೆ ಭಾರತದಲ್ಲಿಯೇ ನೆಲೆಸಲು ತೀರ್ಮಾನ ಮಾಡಿದ್ದಾರೆ. ಕನ್ನಡದ 'ಕಾಟನ್ ಪೇಟೆ' ಸಿನಿಮಾದ ವಿಶೇಷ ಹಾಡೊಂದರಲ್ಲಿ ಸನ್ನಿ ಲಿಯೋನ್ ನೃತ್ಯ ಮಾಡಿದ್ದಾರೆ. ತೆಲುಗಿನ 'ಪುಷ್ಪ' ಸಿನಿಮಾದಲ್ಲಿಯೂ ವಿಶೇಷ ಹಾಡೊಂದಕ್ಕೆ ನರ್ತಿಸುತ್ತಿದ್ದಾರೆ ಎನ್ನಲಾಗುತ್ತಿದೆ.

  English summary
  Some boys called them as Sunny Leone fans club members printed Sunny Leone's photo on well come flex for village festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X