ಬಳುಕಲೆಂದು ಮತ್ತೆ ಕನ್ನಡಕ್ಕೆ ಬಂದ ಸನ್ನಿ ಲಿಯೋನ್

ಕೊರೊನಾ ಆರಂಭದ ಸಮಯದಲ್ಲಿ ಭಾರತ ಬಿಟ್ಟು ಲಾಸ್ ಏಂಜಲಿಸ್‌ಗೆ ಕುಟುಂಬ ಸಮೇತ ತೆರಳಿದ್ದ ನಟಿ ಸನ್ನಿ ಲಿಯೋನಿ ಕೊರೊನಾ ಕಡಿಮೆಯಾದ ಬಳಿಕ ವಾಪಸ್ ಬಂದು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದಾರೆ.

ಕಳೆದ ವರ್ಷ ಮೇ ತಿಂಗಳಲ್ಲಿ ಭಾರತದಿಂದ ಲಾಸ್ ಏಂಜಲಿಸ್‌ಗೆ ತೆರಳಿದ್ದ ಸನ್ನಿ ಲಿಯೋನ್ ಅಕ್ಟೋಬರ್ ತಿಂಗಳಲ್ಲಿ ಕುಟುಂಬ ಸಮೇತ ಭಾರತಕ್ಕೆ ವಾಪಸ್ಸಾಗಿದ್ದರು. ವಾಪಸ್ಸಾದ ಕೂಡಲೇ ಮತ್ತೆ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ ಸನ್ನಿ ಲಿಯೋನ್.

ಇದೀಗ ನಟಿ ಸನ್ನಿ ಲಿಯೋನ್ ಕನ್ನಡ ಸಿನಿಮಾಕ್ಕೆ ಮರಳಿದ್ದಾರೆ. ಈ ಮೊದಲು 'ಲವ್ ಯೂ ಆಲಿಯಾ', 'ಡಿ.ಕೆ' ಸಿನಿಮಾಗಳಲ್ಲಿ ವಿಶೇಷ ಹಾಡಿಗೆ ಸೊಂಟ ಕುಣಿಸಿದ್ದ ಸನ್ನಿ ಲಿಯೋನ್ ಈಗ ಕನ್ನಡದ ಮತ್ತೊಂದು ಸಿನಿಮಾದಲ್ಲಿ ಮಾದಕ ನೃತ್ಯ ಮಾಡುತ್ತಿದ್ದಾರೆ.

 Sunny Leone shakes legs for Kannada Movie Champion

ಅದಿತಿ ಪ್ರಭುದೇವ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 'ಚಾಂಪಿಯನ್' ಹೆಸರಿನ ಸಿನಿಮಾದಲ್ಲಿ ಸನ್ನಿ ಲಿಯೋನ್ ವಿಶೇಷ ಹಾಡಿನಲ್ಲಿ ಕುಣಿದಿದ್ದಾರೆ. 'ಚಾಂಪಿಯನ್' ಸಿನಿಮಾದ ಹಾಡಿನ ಸೆಟ್‌ನಲ್ಲಿ ಸನ್ನಿ ಲಿಯೋನ್ ಸ್ಟೆಪ್ ಹಾಕಿರುವ ಕೆಲವು ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಸನ್ನಿ ಲಿಯೋನ್ ವಿಶೇಷ ಹಾಡಿನಲ್ಲಿ ನರ್ತಿಸಲಿದ್ದಾರೆ ಎನ್ನಲಾಗಿತ್ತು, ಆದರೆ ಆ ಹಾಡಿಗೆ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಕರೆತರಲಾಯಿತು.

Recommended Video

Darshan ಹಾಗೂ Sudeep ರನ್ನ ಒಂದು ಮಾಡಲು ಪಣತೊಟ್ಟ ಅಭಿಮಾನಿಗಳು | Filmibeat Kannada

ಸನ್ನಿ ಲಿಯೋನ್ ಅಭಿನಯದ 'ಬುಲೆಟ್ಸ್' ಹೆಸರಿನ ವೆಬ್ ಸರಣಿ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಅದು ಮಾತ್ರವಲ್ಲದೆ ಬಾಲಿವುಡ್‌ನ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಸನ್ನಿ. ಕೆಲವು ದಿನಗಳ ಹಿಂದೆ ಕೇರಳದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಸನ್ನಿ ಅವರನ್ನು ಕೇರಳ ಪೊಲೀಸರು ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸುದ್ದಿಯಾಗಿತ್ತು.

More from Filmibeat

English summary
Sunny Leone shakes leg for a special song of Kannada movie 'Champion'. This is third special song for Sunny Leone in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X