»   » ಸಿಲಿಕಾನ್ ಸಿಟಿಯಲ್ಲಿ ಕಬಾಲಿ ಕ್ರೇಜ್: 'ನೆರುಪ್ಪುಡಾ'...

ಸಿಲಿಕಾನ್ ಸಿಟಿಯಲ್ಲಿ ಕಬಾಲಿ ಕ್ರೇಜ್: 'ನೆರುಪ್ಪುಡಾ'...

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಕಬಾಲಿ' ಬಿಡುಗಡೆಗೆ ಇನ್ನೇನು ಎರಡೇ ದಿನಗಳು ಬಾಕಿ ಉಳಿದಿದೆ (ಜುಲೈ 22). ಎಲ್ಲಾ ಕಡೆ 'ಕಬಾಲಿ' ಮೇನಿಯಾ ಶುರುವಾಗಿದ್ದು, ಚೆನ್ನೈ, ತಮಿಳುನಾಡು, ವಿದೇಶಗಳಲ್ಲೂ 'ಕಬಾಲಿ' ಎಂಬ ಕಾವು ಬರ್ತಾ-ಬರ್ತಾ ಏರುತ್ತಲೇ ಇದೆ.

  ಇದೀಗ 'ಕಬಾಲಿ' 'ಮೇನಿಯಾ' ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಆರಂಭವಾಗಿದೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ 'ನಟರಾಜ' ಚಿತ್ರಮಂದಿರ 'ಕಬಾಲಿ' ಕಟೌಟ್ ಗಳಿಂದ ಮುಳುಗಿದ್ದು, ತಲೈವರ್ ಅಭಿಮಾನಿಗಳು ಈಗಿನಿಂದಲೇ ಥಿಯೇಟರ್ ಸಿಂಗಾರ ಮಾಡುವುದರಲ್ಲಿ ಬಿಜಿಯಾಗಿದ್ದಾರೆ.[ಕಬಾಲಿ ಆನ್ಲೈನ್ ನಲ್ಲಿ ಲೀಕಾದರೂ ನೋ ಪ್ರಾಬ್ಲಂ: ರಜನಿ ಫ್ಯಾನ್ಸ್]

  ಈ ನಡುವೆ 'ಕಬಾಲಿ' ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿರುವ ಚಿತ್ರತಂಡ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಕೆರಳಿಸಿದೆ. 'ಕಬಾಲಿ' ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ....

  'ಕಬಾಲಿ' ನೆರುಪ್ಪುಡಾ, ಮೇಕಿಂಗ್ ವಿಡಿಯೋವನ್ನು ಜುಲೈ 19ರಂದು ಚಿತ್ರತಂಡ ಬಿಡುಗಡೆ ಮಾಡಿದ್ದು, ಬಿಡುಗಡೆ ಆದ ಒಂದೇ ದಿನದಲ್ಲಿ ಸುಮಾರು 201,391 ಮಂದಿಯ ವೀಕ್ಷಣೆಗೆ ಒಳಪಟ್ಟು ದಾಖಲೆ ಹುಟ್ಟುಹಾಕಿದೆ. ಬೆಂಗಳೂರಿನಲ್ಲಿ ಸೂಪರ್ ಸ್ಟಾರ್ 'ಕಬಾಲಿ' ಹವಾ ಹೇಗಿದೆ ಅನ್ನೋ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸಿ.....

  ಬೆಂಗಳೂರಿನಲ್ಲಿ ಮಧ್ಯರಾತ್ರಿ ಶೋ

  ಅಂದಹಾಗೆ ಬೆಂಗಳೂರಿನಲ್ಲಿ ಜುಲೈ 21, ಮಧ್ಯರಾತ್ರಿಯಿಂದಲೇ 'ಕಬಾಲಿ' ಶೋ ಆರಂಭ ಆಗ್ತಾ ಇದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಸೆಂಟರ್ ಓಪನ್ ಆಗಿದ್ದು, ಮುಂಗಡ ಟಿಕೆಟ್ ಕಾದಿರಿಸುವ ಭರಾಟೆಯಲ್ಲಿ ಬುಕ್ ಮೈ ಶೋ ಸೈಟ್ ಜ್ಯಾಮ್ ಆಗಿದೆ. ಬಹುತೇಕ ಪಿವಿಆರ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ 'ಕಬಾಲಿ' ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ.[ಕಬಾಲಿ ದಾಖಲೆ: ರಿಲೀಸ್ ಗೂ ಮುನ್ನ 200 ಕೋಟಿ ಕಲೆಕ್ಷನ್.?]

  ಟಿಕೆಟ್ ದರ ಮುಗಿಲು ಮುಟ್ಟಿದೆ

  ನಿರ್ದೇಶಕ ಪಾ.ರಂಜಿತ್ ಆಕ್ಷನ್-ಕಟ್ ಹೇಳಿರುವ 'ಕಬಾಲಿ' ಚಿತ್ರದ ಟಿಕೆಟ್ ದರ ತಮಿಳುನಾಡಿಗಿಂತ ಬೆಂಗಳೂರಿನಲ್ಲಿ ಆಕಾಶ ಮುಟ್ಟಿದೆ. ಒಂದು ಶೋನ ಟಿಕೆಟ್ ದರ ಕೇಳಿದರೆ ನೀವು ತಲೆ ಸುತ್ತಿ ಬೀಳೋದು ಗ್ಯಾರೆಂಟಿ.[ಅಮೆರಿಕದಲ್ಲಿ ಕಬಾಲಿ ಟಿಕೆಟ್ 2 ಗಂಟೆಯಲ್ಲಿ ಸೋಲ್ಡ್ ಔಟ್]

  ಅಬ್ಬಬ್ಬಾ.! ಟಿಕೆಟ್ ದರ ಇಷ್ಟೊಂದಾ?

  ಸಾಮಾನ್ಯವಾಗಿ 100 ರಿಂದ 150 ರೂ ಇರುತ್ತಿದ್ದ ಟಿಕೆಟ್ ದರ 'ಕಬಾಲಿ' ಚಿತ್ರಕ್ಕೆ 250 ರಿಂದ 500 ರೂವರೆಗೆ ಏರಿಸಲಾಗಿದೆ. ಇನ್ನು ಮಲ್ಟಿಪ್ಲೆಕ್ಸ್ ಗಳಲ್ಲಿ ಕೇಳೋದೇ ಬೇಡ, ಸುಮಾರು 700 ರಿಂದ 800ರೂವರೆಗೆ ಏರಿಸಲಾಗಿದೆ.['ಕಬಾಲಿ' ಕ್ರೇಜ್: ಸೂಪರ್ ಸುಪ್ರೀಂ ಐಡಿಯಾ ಮಾಡಿದ ಲಹರಿ ವೇಲು]

  ಚೆನ್ನೈಗೂ-ಬೆಂಗಳೂರಿಗೂ ವ್ಯತ್ಯಾಸ ನೋಡಿ.!

  ಬೆಂಗಳೂರಿನಲ್ಲಿ ಸಿಂಗಲ್ ಸ್ಕ್ರೀನ್ ಗೆ ಕನಿಷ್ಠ ದರ 500 ರೂ ಕೊಟ್ಟರೆ, ಚೆನ್ನೈನಲ್ಲಿ ಕಡಿಮೆ ದರ 10 ರಿಂದ 50. ಇನ್ನು ಚೆನ್ನೈ ಮಲ್ಟಿಪ್ಲೆಕ್ಸ್ ನಲ್ಲಿ ಗರಿಷ್ಠ ಎಂದರೆ 120 ರಿಂದ 180 ರೂಪಾಯಿ. ಹಾಗಾದ್ರೆ ನೀವೇ ಊಹಿಸಿ. ಇಲ್ಲಿಗೂ ಅಲ್ಲಿಗೂ ಎಷ್ಟೊಂದು ವ್ಯತ್ಯಾಸ ಇದೆ ಅಂತ.

  ಕರ್ನಾಟಕದಲ್ಲಿ ಎಷ್ಟು ಥಿಯೇಟರ್?

  ಕರ್ನಾಟಕದಲ್ಲಿ 'ಕಬಾಲಿ' ವಿತರಣಾ ಹಕ್ಕನ್ನು ರಾಕ್ ಲೈನ್ ವೆಂಕಟೇಶ್ ಪಡೆದಿದ್ದು, ಸುಮಾರು 250 ಚಿತ್ರಮಂದಿರಗಳಲ್ಲಿ ಸೂಪರ್ ಸ್ಟಾರ್ 'ಕಬಾಲಿ' ತೆರೆ ಕಾಣುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ ಕೂಡ 'ಕಬಾಲಿ' ಹವಾ ಜೋರಾಗಿ ಇರೋದ್ರಿಂದ ಹಾಕಿದ ಹಣ ವಾಪಸ್ ಬರಬಹುದು ಅಂತ ವಿತರಕರು ಲೆಕ್ಕಾಚಾರ ಹಾಕುತ್ತಿದ್ದಾರೆ.

  ಬೆಂಗಳೂರಿನಲ್ಲೂ ಕಂಪನಿಗೆ ರಜೆ

  ಬೆಂಗಳೂರಿನ 'ಒಪಿಯುಎಸ್' ಕಂಪನಿಯೊಂದು ಜುಲೈ 22 ರಂದು ನೌಕರರಿಗೆ ರಜೆ ಘೋಷಣೆ ಮಾಡಿದೆ ಅಂದ್ರೆ ನೀವೇ ಊಹಿಸಿ, ರಜನಿಕಾಂತ್ ಅವರ 'ಕಬಾಲಿ' ಫೀವರ್ ಎಷ್ಟಿದೆ ಅಂತ. ಒಟ್ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಬಾಲಿ' ಎಂಬ ಮಾಯೆ ಬೆಂಗಳೂರಿಗೂ ಕೂಡ ಭರ್ಜರಿಯಾಗಿ ತಟ್ಟಿದೆ.

  English summary
  Advance bookings for Rajinikanth's 'Kabali' opened in Bengaluru on Monday (July 18th). All shows for the first few days were sold out in a few hours. The ticket prices, even in single-screen cinemas, have more than doubled. Single screens, which usually charged Rs100, are charging Rs 250 for Kabali. Some up-market single-screens are even charging Rs 500 per ticket.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more