Don't Miss!
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- News
ಸಿಡಿ ಪ್ರಕರಣ; ಮೂರು ಫ್ಯಾಮಿಲಿಗೂ ಡ್ಯಾಮೇಜ್ ಆಗುತ್ತೆ ಇಷ್ಟಕ್ಕೆ ನಿಲ್ಲಿಸಿ: ಬಾಲಚಂದ್ರ ಜಾರಕಿಹೊಳಿ
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೊಸ ಹುಡುಗನ ಜೊತೆ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ
ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಎರಡು ವರ್ಷಕ್ಕಿಂತಲೂ ಹೆಚ್ಚಾಗಿದೆ. ಸುಶಾಂತ್ ಸಿಂಗ್ ಸಾವು ಅಭಿಮಾನಿಗಳಿಗೆ ಆಘಾತ ನೀಡುವ ಜೊತೆಗೆ ಇಡೀಯ ಬಾಲಿವುಡ್ ಅನ್ನು ಬೇರೆ-ಬೇರೆ ರೀತಿಯಲ್ಲಿ ಕಾಡಿತ್ತು.
2020ರ ಜೂನ್ 14 ರಂದು ಸುಶಾಂತ್ ಸಿಂಗ್ ತಮ್ಮ ಮುಂಬೈ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಸಾವಿನ ಕುರಿತಾಗಿ ಹಲವು ಅನುಮಾನಗಳು ಎದ್ದಿದ್ದವು. ಸುಶಾಂತ್ ಅವರನ್ನು ಕೊಲೆ ಮಾಡಲಾಗಿದೆ. ಅವರಿಗೆ ವಿಷ ಉಣಿಸಲಾಗಿದೆ. ಸುಶಾಂತ್‌ಗೆ ಬೇರೆ-ಬೇರೆ ಮದ್ದು ನೀಡಿ ಅವರನ್ನು ಖಿನ್ನತೆಗೆ ನೂಕಲಾಗಿದೆ ಎಂದು ಹಲವು ಆರೋಪಗಳು ಕೇಳಿಬಂದಿದ್ದವು.
ಸುಶಾಂತ್‌ರ ಸಾವಿನ ಪ್ರಕರಣದಲ್ಲಿ ಅವರ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಆರೋಪಿಯನ್ನಾಗಿಸಲಾಗಿತ್ತು. ಆಕೆಯಿಂದಲೇ ಸುಶಾಂತ್ ನಿಧನ ಹೊಂದಿದ್ದಾರೆ ಎಂದು ಸುಶಾಂತ್‌ರ ಕುಟುಂಬದವರು ಆರೋಪಿಸಿದ್ದರು. ಸುಶಾಂತ್‌ರ ನಿಧನ ಬಳಿಕ ಬಿಚ್ಚಿಕೊಂಡ ಡ್ರಗ್ಸ್ ಪ್ರಕರಣದಲ್ಲಿ ಜೈಲುವಾಸವನ್ನೂ ಅನುಭಿಸಿದ್ದರು.

ಸುಶಾಂತ್ ನಿಧನದಿಂದ ಆಘಾತ
ಸುಶಾಂತ್‌ರ ನಿಧನದಿಂದ ಆಘಾತಗೊಂಡಿದ್ದ ರಿಯಾ ಚಕ್ರವರ್ತಿ ಆ ನಂತರ ಆದ ಬೆಳವಣಿಗೆಗಳಿಂದ ಮತ್ತಷ್ಟು ಕುಸಿತಕ್ಕೊಳಗಾಗಿದ್ದರು. ಇದೀಗ ಹಳೆಯ ನೆನಪುಗಳಿಂದ ಹೊರಬಂದಂತಿರುವ ರಿಯಾ ಚಕ್ರವರ್ತಿ ಹೊಸ ಹುಡುಗನ ಪ್ರೇಮಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಕೆಲವು ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಯಾರು ಈ ಬಂಟಿ ಸಜ್‌ದೇಹ್?
ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್‌ನಿಂದ ಬಹುತೇಕ ದೂರವೇ ಆಗಿರುವ ರಿಯಾ ಚಕ್ರವರ್ತಿ ಇದೀಗ ಬಂಟಿ ಸಜ್‌ದೇಹ್ ಎಂಬಾತನೊಟ್ಟಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಬಂಟಿ ಸಜ್‌ದೇಹ್ ಸಾಮಾನ್ಯನೇನಲ್ಲ. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುವ 'ಫ್ಯಾಬ್ಯುಲಸ್ ಲೈಫ್ ಆಫ್ ಬಾಲಿವುಡ್ ವೈವ್ಸ್' ಸರಣಿಯಲ್ಲಿ ಕಾಣಿಸಿಕೊಳ್ಳುವ ಸೀಮಾ ಸಜ್‌ದೇಹ್ ಅವರ ಸಹೋದರ ಹಾಗೂ ಕಾರ್ನರ್‌ಸ್ಟೋನ್ ಸ್ಟೋರ್ಟ್ಸ್ ಆಂಡ್ ಎಂಟರ್ಟೈನರ್ ಹೆಸರಿನ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಸಿಇಓ ಸಹ. ಇದು ಭಾರತದ ಅತಿ ದೊಡ್ಡ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ.

ಮೊದಲೇ ಗೆಳೆತನ ಇತ್ತು
ಅಸಲಿಗೆ ರಿಯಾ ಚಕ್ರವರ್ತಿ, ಇದೇ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಗ್ರಾಹಕಿಯಾಗಿದ್ದರು. ಇದೇ ಸಂಸ್ಥೆಯ ನೆರವಿನೊಂದಿಗೆ ರಿಯಾ ಬಾಲಿವುಡ್ ಪ್ರವೇಶ ಮಾಡಿದ್ದರಂತೆ. ಇದೇ ಕಾರಣಕ್ಕೆ ಬಂಟಿ ಜೊತೆ ರಿಯಾಗೆ ಮುಂಚಿನಿಂದಲೂ ಗೆಳೆತನವಿತ್ತು. ರಿಯಾ, ಸಂಕಷ್ಟದಲ್ಲಿ ಸಿಲುಕಿ ಖಿನ್ನತೆಗೆ ಒಳಗಾಗುವ ಹಂತದಲ್ಲಿದ್ದಾಗ ಬಂಟಿ ನೆರವು ನೀಡಿದರು ಎನ್ನಲಾಗುತ್ತಿದೆ. ಇದೀಗ ರಿಯಾ ಹಾಗೂ ಬಂಟಿ ಜೊತೆಯಾಗಿ ಓಡಾಡುತ್ತಿದ್ದಾರೆ.

ಹುಟ್ಟುಹಬ್ಬದಲ್ಲಿ ಕಾಣಿಸಿಕೊಂಡಿದ್ದ ರಿಯಾ
ಅಕ್ಟೋಬರ್ ತಿಂಗಳಲ್ಲಿ ನಡೆದ ಬಂಟಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ರಿಯಾ ಪಾಲ್ಗೊಂಡಿದ್ದರು. ಅಲ್ಲಿ ಕರಣ್ ಜೋಹರ್ ಹಾಗೂ ಇನ್ನಿತರೆ ಗೆಳತಿಯರೊಟ್ಟಿಗೆ ಡ್ಯಾನ್ಸ್ ಮಾಡಿದ್ದರು. ಆಗ ರಿಯಾರ ವರ್ತನೆ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಬಂಟಿ ಹಾಗೂ ರಿಯಾ ಒಟ್ಟಿಗೆ ಕಾರಿನಲ್ಲಿ ಸುತ್ತಾಡುತ್ತಿರುವ ಚಿತ್ರಗಳು ಹರಿದಾಡುತ್ತಿವೆ. ಸಿನಿಮಾ ವಿಷಯಕ್ಕೆ ಬರುವುದಾದರೆ 'ಸುಶಾಂತ್' ಸಾವಿಗೆ ಮುಂಚೆ ಒಪ್ಪಿಕೊಂಡಿದ್ದ 'ಚೆಹರೆ' ಸಿನಿಮಾದ ಬಳಿಕ ರಿಯಾ ಚಕ್ರವರ್ತಿ ಇನ್ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಅವರು ಸಿನಿಮಾಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.