»   » 'ಭೂಗತ ಪುಟ'ಗಳನ್ನು ತೆರೆದಿಡಲಿದ್ದಾರೆ ಸುಷ್ಮಾ ವೀರ್.!

'ಭೂಗತ ಪುಟ'ಗಳನ್ನು ತೆರೆದಿಡಲಿದ್ದಾರೆ ಸುಷ್ಮಾ ವೀರ್.!

Posted By:
Subscribe to Filmibeat Kannada

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸುಷ್ಮಾ ವೀರ್ ಸೃಷ್ಟಿಸಿದ ಸಂಚಲನ ನಿಮಗೆ ಗೊತ್ತೇ ಇದೆ. ರಿಯಾಲಿಟಿ ಶೋ ಮುಗಿದ ನಂತರ ಸುಷ್ಮಾ ವೀರ್ ಒಂದು ಸಿನಿಮಾ ನಿರ್ಮಾಣ ಮಾಡುವ ಮನಸ್ಸು ಮಾಡಿದ್ದಾರೆ. ಆ ಚಿತ್ರವೇ 'ಭೂಗತ ಪುಟಗಳಲ್ಲಿ'.

sushma-veer-to-produce-kannada-movie-bhoogata-putagalalli

ಈಗಾಗಲೇ 'ಡೆಡ್ಲಿ ಸೋಮ' ಸೇರಿದಂತೆ ಅನೇಕ ರೌಡಿಸಂ ಸಿನಿಮಾಗಳನ್ನ ನಿರ್ದೇಶಿಸಿರುವ ರವಿ ಶ್ರೀವತ್ಸ 'ಭೂಗತ ಪುಟಗಳಲ್ಲಿ' ಚಿತ್ರದ ನಿರ್ದೇಶನದ ಜೊತೆಗೆ ಚಿತ್ರಕಥೆ-ಸಂಭಾಷಣೆಯ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ.

sushma-veer-to-produce-kannada-movie-bhoogata-putagalalli

ಕಳೆದ ವಾರವಷ್ಟೇ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ 'ಭೂಗತ ಪುಟಗಳಲ್ಲಿ' ಚಿತ್ರದ ಸ್ಕ್ರಿಪ್ಟ್ ಹಾಗೂ ಶೀರ್ಷಿಕೆ ಪೂಜೆ ನೆರವೇರಿದೆ.

sushma-veer-to-produce-kannada-movie-bhoogata-putagalalli

ತಾರಾ, ಸುಷ್ಮಾ ವೀರ್, ಯಮುನಾ ಶ್ರೀನಿಧಿ, ಉಮೇಶ್ ಬಣಕಾರ್, ಮಾಸ್ಟರ್ ಆನಂದ್, ಬಿ.ಜಯಶ್ರೀ ಸೇರಿದಂತೆ ಅನೇಕರು 'ಭೂಗತ ಪುಟಗಳಲ್ಲಿ' ಚಿತ್ರದ ಮುಖ್ಯ ಭೂಮಿಕೆಯಲ್ಲಿ ಇರಲಿದ್ದಾರೆ. ಜೂನ್ ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ.

English summary
After contesting in Bigg Boss Kannada-3, Sushma Veer is all set to produce Kannada Movie titled 'Bhoogata Putagalalli', directed by Ravi Srivatsa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada