For Quick Alerts
  ALLOW NOTIFICATIONS  
  For Daily Alerts

  ಪುನೀತ್ 'ಯುವರತ್ನ' ಸಿನಿಮಾದಲ್ಲಿ 'ರಾಧಾ ರಮಣ' ಖ್ಯಾತಿಯ ನಟಿ ಶ್ವೇತಾ ಪ್ರಸಾದ್

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷೆಯ 'ಯುವರತ್ನ' ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು ಈಗಾಗಲೇ ಪ್ರಮೋಷನ್ ಚಟುವಟಿಕೆಗಳು ನಡೆಯುತ್ತಿದೆ. ಸದ್ಯ ಚಿತ್ರದಿಂದ ಟೀಸರ್ ಮತ್ತು 3 ಹಾಡುಗಳು ರಿಲೀಸ್ ಆಗಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

  'ಯುವರತ್ನ' ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಇದೀಗ ಮತ್ತೋರ್ವ ನಟಿಯ ಸೇರ್ಪಡೆಯಾಗಿದೆ. ಖ್ಯಾತ ಕಿರುನಟಿ ಶ್ವೇತಾ ಪ್ರಸಾದ್ ಯುವರತ್ನ ಟೀಂ ಸೇರಿಕೊಂಡಿದ್ದಾರೆ. ಅಂದಹಾಗೆ ಶ್ವೇತಾ ಚಿತ್ರದಲ್ಲಿ ಯಾವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಎಂದು ಯೋಚಿಸಬೇಡಿ, ಶ್ವೇತಾ ಧ್ವನಿ ಚಿತ್ರದಲ್ಲಿ ಇರಲಿದೆ.

  ಕಾಶ್ಮೀರದಲ್ಲಿ ಯೋಧನಾದ ಪುನೀತ್ ರಾಜ್ ಕುಮಾರ್, ಫೋಟೋ ವೈರಲ್

  ಹೌದು, ಯುವರತ್ನ ಸಿನಿಮಾದ ನಾಯಕಿ ಸಾಯೇಶಾ ಪಾತ್ರಕ್ಕೆ ಶ್ವೇತಾ ಧ್ವನಿ ನೀಡಿದ್ದಾರೆ. ಮೊದಲ ಬಾರಿಗೆ ಶ್ವೇತಾ ಸಿನಿಮಾಗೆ ಧ್ವನಿ ನೀಡಿದ್ದಾರೆ. ಸಿನಿಮಾಗೆ ಧ್ವನಿ ನೀಡುತ್ತೀರಾ ಎಂದು ಸಿನಿಮಾತಂಡದಿಂದ ಕರೆಬಂದಾಗ ಯಾಕೆ ಮಾಡಬಾರದು ಎಂದು ಯೋಚಿಸಿ ಬಳಿಕ ಡಬ್ ಮಾಡಿರುವುದಾಗಿ ಶ್ವೇತಾ ಹೇಳಿದ್ದಾರೆ.

  ಶ್ವೇತಾ ಧ್ವನಿ, ಸಾಯೇಶಾ ಅಭಿನಯ ಹೇಗಿದೆ ಎನ್ನುವುದನ್ನು ಯುವರತ್ನ ಸಿನಿಮಾ ನೋಡಿದ ಮೇಲೆಯೇ ಗೊತ್ತಾಗಲಿದೆ. ಅಂದಹಾಗೆ ಸಯೇಶಾ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ.

  ಶ್ವೇತಾ ಪ್ರಸಾದ್ ರಾಧಾ ರಮಣ ಧಾರಾವಾಹಿ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು. ಧಾರಾವಾಹಿಯಿಂದ ಹೊರಬಂದ ಬಳಿಕ ಶ್ವೇತಾ ಮತ್ತೆ ಯಾವ ಧಾರಾವಾಹಿಯಲ್ಲೂ ಕಾಣಿಸಿಕೊಂಡಿಲ್ಲ. ಇದೀಗ ಡಬ್ಬಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  ರಶ್ಮಿಕಾ ಮುಂಬೈನಲ್ಲಿ ಖರೀದಿಸಿದ ಮನೆಯ ಬೆಲೆ ಎಷ್ಟು ಕೋಟಿ ಗೊತ್ತಾ? | Filmibeat Kannada

  ಅಂದಹಾಗೆ ಯುವರತ್ನ ಸಿನಿಮಾ ಏಪ್ರಿಲ್ 1ರಂದು ತೆರೆಗೆ ಬರುತ್ತಿದೆ. ಕನ್ನಡ ಜೊತೆಗೆ ತೆಲುಗಿನಲ್ಲೂ ತೆರೆಗೆ ಬರುತ್ತಿದೆ. ಇನ್ನು ಚಿತ್ರದಲ್ಲಿ ಸೋನು ಗೌಡ, ರಾಧಿಕಾ ಶರತ್ ಕುಮಾರ್ ಕಾವ್ಯ ಶೆಟ್ಟಿ, ಧನಂಜಯ್, ದಿಗಂತ್, ಮತ್ತು ಪ್ರಕಾಶ್ ರೈ ಸೇರಿದಂತೆ ದೊಡ್ಡ ತಾರಬಳಗವೇ ಇದೆ.

  English summary
  Actress Swetha Pradeep dubs for Sayesha in Yuvarathnaa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X