For Quick Alerts
  ALLOW NOTIFICATIONS  
  For Daily Alerts

  ಪಾತ್ರಧಾರಿಯನ್ನು ಬದಲಾಯಿಸಲು ಖಂಡಿತಾ ಇಷ್ಟ ಇಲ್ಲ: ಟಿ ಎನ್ ಸೀತಾರಾಮ್

  |

  ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾದ ಮಗಳು ಜಾನಕಿ ಸೀರಿಯಲ್ ಈಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇತ್ತೀಚಿಗಷ್ಟೆ ಧಾರಾವಾಹಿಯ ಪ್ರಮುಖ ಪಾತ್ರವನ್ನು ಬದಲಾಯಿಸಿದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

  ಹೌದು, ಮಗಳು ಜಾನಕಿ ಸೀರಿಯಲ್ ನ ಚಂದು ಭಾರ್ಗಿಯ ಅವರ ಎರಡನೆ ಮಗಳು ಚಂಚಲ ಪಾತ್ರ ಈಗ ಅನೇಕರಿಗೆ ಬೇಸರ ಮೂಡಿಸಿದಿಯಂತೆ. ಈ ಮೊದಲು ಚಂಚಲ ಪಾತ್ರವನ್ನು ಐಶ್ವರ್ಯ ನಿಭಾಯಿಸುತ್ತಿದ್ದರು. ಅನಿವಾರ್ಯ ಕಾರಣದಿಂದ ಐಶ್ವರ್ಯ ಜಾಗಕ್ಕೆ ಪೂಜಾ ಎನ್ನುವ ಹೊಸ ನಟಿ ಎಂಟ್ರಿ ಕೊಟ್ಟಿದ್ದಾರೆ. ಹೊಸ ಚಂಚಲ ಇನ್ನು ಮೆಚ್ಚುಗೆಯಾಗಿಲ್ಲ ಎಂದು ಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  ಬದಲಾದ ಭಾರ್ಗಿ ಎರಡನೆ ಮಗಳು: ಹೊಸ ಚಂಚಲ ನೋಡಿ ಹೇಳಿದ್ದೇನು ಪ್ರೇಕ್ಷಕರು?

  ನೋಡುಗರ ಬೇಸರಕ್ಕೆ ನಿರ್ದೇಶಕ ಟಿ ಎನ್ ಸೀತಾರಾಮ್ ಪ್ರತಿಕ್ರಿಯೆ ನೀಡಿದ್ದಾರೆ. ಪಾತ್ರ ಬದಲಾವಣೆಯಿಂದ ಧಾರಾವಾಹಿಗೂ ನಷ್ಟವಾಗುತ್ತೆ. ಆದ್ರೆ ಬದಲಾಯಿಸ ಬೇಕಾದ ಅನಿವಾರ್ಯತೆ ಇದ್ದಾಗ ಏನು ಮಾಡುವುದಕ್ಕೆ ಆಗುವುದಿಲ್ಲ. ಇದರಿಂದ ಹೊಸ ಪಾತ್ರದ ಬಗ್ಗೆ ತೆಗಳಬೇಡಿ ಎಂದು ಮನವಿ ಮಾಡಿದ್ದಾರೆ.

  "ಯಾವ ಪಾತ್ರಧಾರಿ ಯನ್ನೂ ಬದಲಾಯಿಸಲು ನಮಗೆ ಖಂಡಿತಾ ಇಷ್ಟ ವಿರವುದಿಲ್ಲ. ನಮಗೇನು ಸಂತೋಷವೇ ಹಾಗೆ ಬದಲಾಯಿಸಲು? ಹಾಗೆ ಬದಲಾಯಿಸುವುದರಿಂದ ಧಾರಾವಾಹಿ ಗೆ ಹಿನ್ನಡೆ, ನಮಗೆ ಕಷ್ಟ, ನಷ್ಟ ಎಲ್ಲವೂ. ಆದರೆ ಅನಿವಾರ್ಯ ಕಾರಣಗಳು ಎದುರಾದಾಗ ನಾವು ಬದಲಾಯಿಸದೆ ಬೇರೆ ದಾರಿ ಇರುವುದಿಲ್ಲ"

  "ಚಂಚಲಾ ಪಾತ್ರದ ಬಗ್ಗೆ ಯೂ ಹಾಗೇ ಆಯಿತು. ಅವರು ಅಮೆರಿಕ ದಲ್ಲಿ ಮಿಕ್ಕ ಕಡೆಗಳಲ್ಲಿ concerts ಕೊಡ ಬೇಕಂತೆ. ನಮಗೆ ಲಭ್ಯ ವಿಲ್ಲವಂತೆ. ಒತ್ತಾಯ ಮಾಡಲಾದೀತೇ? ಹಾಗೆಂದು ಹೊಸ ಪಾತ್ರಧಾರಿಯ ಬಗ್ಗೆ ವಿಷ ಕಾರುವುದು ಸೌಜನ್ಯವೂ ಅಲ್ಲ. ಮಾನವೀಯತೆಯೂ ಅಲ್ಲ. ಕೆಲ ದಿನಗಳ ನಂತರ ಎಲ್ಲವೂ ಸರಿ ಹೋಗುತ್ತದೆ"

  ನೋಡುಗರ ಕಮೆಂಟ್ಸ್ ಗಳಿಗೆ ಸ್ವತಃ ಸಿ ಎಸ್ ಪಿ ಅವರೆ ಪ್ರತಿಕ್ರಿಯೆ ನೀಡಿದ್ದಾರೆ. ಚಂಚಲ ಪಾತ್ರದ ಬದಲಾವಣೆಯ ಬೇಜಾರು ಒಂದೆಡೆ ಆದರೆ. ಸಿ ಎಸ್ ಪಿ ಮಗ ಮಧುಕರ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿರುವುದು ನೋಡುಗರ ಬೇಸರಕ್ಕೆ ಮತ್ತೊಂದು ಕಾರಣವಾಗಿದೆ. ಮಧುಕರನ ಮುಂದಿನ ನಿರ್ಧಾರದ ಬಗ್ಗೆ ಪ್ರೇಕ್ಷಕರಲ್ಲಿ ಈಗ ಭಾರಿ ಕುತೂಹಲ ಮೂಡಿಸಿದೆ.

  English summary
  Serial director T N Seetharam clarified about Chanchala character replace. actress Pooja replaced Aishwarya in Magalu Janaki serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X