For Quick Alerts
  ALLOW NOTIFICATIONS  
  For Daily Alerts

  ಮದುವೆ ಬಗ್ಗೆ ವದಂತಿ ಹಬ್ಬಿಸಿದವರಿಗೆ ತಮನ್ನಾ ಕ್ಲಾಸ್

  By Bharath Kumar
  |

  ಕಳೆದ ಎರಡ್ಮೂರು ದಿನದಿಂದ ಬಹುಭಾಷಾ ನಟಿ ತಮನ್ನಾ ಅವರ ಮದುವೆ ಸುದ್ದಿ ಮಾಯಾನಗರಿಯಲ್ಲಿ ಹೆಚ್ಚು ಗಿರಿಗಿಟ್ಲೆ ಹೊಡೆಯುತ್ತಿದೆ. ಅಮೇರಿಕಾ ಮೂಲಕ ಡಾಕ್ಟರ್ ಜೊತೆ ಪ್ರೀತಿಯಲ್ಲಿರುವ ತಮನ್ನಾ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸಂಗತಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

  ಆದ್ರೆ, ಈ ಬಗ್ಗೆ ತಮನ್ನಾ ಆಗಲಿ ಅಥವಾ ಅವರ ಕುಟುಂಬದವರಾಗಲಿ ಯಾರೋಬ್ಬರು ಸ್ಪಷ್ಟನೆ ನೀಡಿರಲಿಲ್ಲ. ಈಗ ಸ್ವತಃ ತಮನ್ನಾ ಅವರೇ ಈ ಮದುವೆ ಸುದ್ದಿ ಬಗ್ಗೆ ಮೌನಮುರಿದಿದ್ದು, ಇಂತಹ ಸುದ್ದಿಗಳನ್ನ ಹಬ್ಬಿಸುವರ ವಿರುದ್ಧ ಗರಂ ಆಗಿದ್ದಾರೆ.

  ಎನ್.ಆರ್.ಐ ಜೊತೆಯಲ್ಲಿ ತಮನ್ನಾ ಮದುವೆ.! ಎನ್.ಆರ್.ಐ ಜೊತೆಯಲ್ಲಿ ತಮನ್ನಾ ಮದುವೆ.!

  ತನ್ನ ಮದುವೆ ಸುದ್ದಿ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ತಮನ್ನಾ ''ನಾನು ಸದ್ಯಕ್ಕೆ ಮದುವೆ ಆಗುತ್ತಿಲ್ಲ, ನಾನು ಸಿಂಗಲ್ ಆಗಿಯೇ ತುಂಬಾ ಚೆನ್ನಾಗಿದ್ದೀನಿ'' ಎಂದು ಹೇಳುವ ಮೂಲಕ ಗಾಸಿಪ್ ಸೃಷ್ಟಿಕರ್ತರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

  ''ಒಂದು ದಿನ ಸಿನಿಮಾ ನಟ, ಇನ್ನೊಂದು ದಿನ ಕ್ರಿಕೆಟರ್ ಈಗ ಡಾಕ್ಟರ್...ಈ ವದಂತಿಗಳನ್ನ ನಂಬಬೇಡಿ. ನಾನೀಗ ಸಿಂಗಲ್ ಆಗಿಯೇ ಇರಲು ಇಷ್ಟಪಡುತ್ತೇನೆ ಹಾಗೂ ನನ್ನ ಕುಟುಂಬದವರು ಕೂಡ ಯಾವ ಹುಡುಗನನ್ನ ಹುಡುಕುತ್ತಿಲ್ಲ. ಮದುವೆ ಎನ್ನುವುದು ನನ್ನ ವೈಯಕ್ತಿಕ ನಿರ್ಧಾರ. ನಾನು ಯಾರನ್ನ ಮದುವೆ ಆಗಬೇಕು ಎನ್ನುವುದನ್ನ ನನಗೆ ಬಿಟ್ಟಿದ್ದು. ನನಗೆ ಮದುವೆ ಮಾಡಿಕೊಳ್ಳಬೇಕೆಂಬ ಎಂದಾಗ ನಾನೇ ತಿಳಿಸುತ್ತೇನೆ'' ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

  ಸದ್ಯ, ಹಿಂದಿಯ 'ಕ್ವೀನ್' ಚಿತ್ರದ ತೆಲುಗು ರೀಮೇಕ್ 'ದಟ್ ಈಸ್ ಮಹಾಲಕ್ಷ್ಮಿ' ಚಿತ್ರವನ್ನ ಮುಗಿಸಿದ್ದು, ಮತ್ತಷ್ಟು ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಅಭಿನಯಿಸುತ್ತಿದ್ದಾರೆ.

  English summary
  According to few sources, Tamanna will enter into wedlock with a NRI doctor who is currently in USA. but. now Tamanna react on her marriage rumours.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X