»   » ತಮಿಳು ನಟ ಬಾಲ ಮುರಳಿ ಮೋಹನ್ ಆತ್ಮಹತ್ಯೆ

ತಮಿಳು ನಟ ಬಾಲ ಮುರಳಿ ಮೋಹನ್ ಆತ್ಮಹತ್ಯೆ

By: ಶಂಕರ್, ಚೆನ್ನೈ
Subscribe to Filmibeat Kannada

ತಮಿಳು ನಟ ಬಾಲ ಮುರಳಿ ಮೋಹನ್ ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಷಾದನೀಯ ಘಟನೆ ಚೆನ್ನೈನಲ್ಲಿ ನಡೆದಿದೆ. ಬುಧವಾರ (ಜೂ.25) ರಾತ್ರಿ ಪುರಸವಾಕಂ ಪ್ರದೇಶದಲ್ಲಿರುವ ತಮ್ಮ ಸ್ವಗೃಹದಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅವರಿಗೆ 54 ವರ್ಷ ವಯಸ್ಸಾಗಿದ್ದು, ಪತ್ನಿ ಸೀತಾರಾಣಿ ಹಾಗೂ ಪುತ್ರ ಉಮಾ ಶಂಕರ್ ಇದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆತ್ಮಹತ್ಯೆಗೆ ಕಾರಣ ಏನಿರಬಹುದು ಎಂಬುದು ಈ ಕ್ಷಣಕ್ಕೆ ತಿಳಿದುಬಂದಿಲ್ಲ.

Tamil actor Bala Murali Mohan committed suicide

ಖ್ಯಾತ ನಿರ್ದೇಶಕ ಶಂಕರ್ ಅವರ 'ಬಾಯ್ಸ್' ಚಿತ್ರ ಸೇರಿದಂತೆ 'ಅಲ್ಲಿತಂಡ ವಾನಂ' ಎಂಬ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಒಂದಷ್ಟು ಜಾಹೀರಾತುಗಳಲ್ಲೂ ಅವರು ಅಭಿನಯಿಸಿದ್ದರು.

ಹೊರಗೆ ಹೋಗಿದ್ದ ಅವರ ಪತ್ನಿ ಸೀತಾರಾಣಿ ಅವರು ಎಷ್ಟು ಬಾರಿ ಬಾಗಿಲು ತಟ್ಟಿದರೂ ತೆಗೆಯಲಿಲ್ಲ. ಬಳಿಕ ಅವರು ಹೊರಗಿನಿಂದ ಕಿಟಕಿ ತೆರೆದು ನೋಡಿದ್ದಾಗ ಬಾಲ ಮುರಳಿ ಮೋಹನ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

English summary
Tamil actor Bala Murali Mohan committed suicide by hanging himself from the roof of his house at Purasawalkam in Chennai on Wednesday night.
Please Wait while comments are loading...