»   » ಪುಷ್ಪಕವಿಮಾನದಲ್ಲಿ ಟ್ವಿಟ್ಟರ್ ಊರಿಗೆ ಬಂದ ರಾಮ ಶಾಮ ಭಾಮ!

ಪುಷ್ಪಕವಿಮಾನದಲ್ಲಿ ಟ್ವಿಟ್ಟರ್ ಊರಿಗೆ ಬಂದ ರಾಮ ಶಾಮ ಭಾಮ!

Posted By:
Subscribe to Filmibeat Kannada

ಯಾವಾಗಲಾದರೂ ಒಮ್ಮೆ ಫೇಸ್ ಬುಕ್ಕಿಗೆ ಎಂಟ್ರಿ ಕೊಟ್ಟು ತಮ್ಮ ಅಭಿಮಾನಿಗಳಿಗೆ ಕಾಣಿಸಿಕೊಳ್ಳುತ್ತಿದ್ದ ಬಹುಭಾಷಾ ನಟ ಕಮಲ್ ಹಾಸನ್ ಅವರು ಇದೀಗ ಟ್ವಿಟ್ಟರ್ ನಲ್ಲಿ ತಮ್ಮ ಖಾತೆ ತೆರೆದಿದ್ದಾರೆ.

ನಿನ್ನೆ (ಜನವರಿ 26) 67ನೇ ಗಣರಾಜ್ಯೋತ್ಸವದ ಸಂಭ್ರಮದ ದಿನದಂದೇ ಉಳಗನಾಯಗನ್ ನಟ ಕಮಲ್ ಹಾಸನ್ ಅವರು ತಮ್ಮ ಟ್ವಿಟ್ಟರ್ ಖಾತೆ ತೆರೆದಿದ್ದಾರೆ.['ಕಲಿ'ಯಲ್ಲಿ ಕಿಚ್ಚ-ಶಿವಣ್ಣ ಜೊತೆ ಕಮಲ್ ಹಾಸನ್ ನಟಿಸ್ತಾರಾ?]

Tamil Actor Kamal Haasan joins twitter on republic day

ನಟ ಕಮಲ್ ಹಾಸನ್ ಅವರಿಗೆ ಸ್ಯಾಂಡಲ್ ವುಡ್ ಕ್ಷೇತ್ರ ಕೂಡ ಹೆಸರು ತಂದು ಕೊಟ್ಟಿದೆ. ಅವರು ನಟಿಸಿದ 'ರಾಮ ಶಾಮ ಭಾಮ' ಸಿನಿಮಾ ಪ್ರೇಕ್ಷಕರನ್ನು ನಕ್ಕು ನಗಿಸಿದ್ದು ಮಾತ್ರವಲ್ಲದೇ, ಈಗಲೂ ಕಮಲ್ ಮತ್ತು ರಮೇಶ್ ಜೋಡಿಯನ್ನು ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.

ಜೊತೆಗೆ ಕನ್ನಡ ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರ ಆಪ್ತ ಗೆಳೆಯನಾಗಿದ್ದು, ಕಮಲ್ ಗಾಗಿ ರಮೇಶ್ ಅವರು 'ಉತ್ತಮ ವಿಲನ್' ಎಂಬ ತಮಿಳು ಸಿನಿಮಾ ಮಾಡಿದ್ದರು.

ಅಂದಹಾಗೆ ಉಳಗನಾಯಗನ್ ಕಮಲ್ ಅವರು ತಮ್ಮ ಖಾತೆ ತೆರೆದ ಕೇವಲ 24 ಘಂಟೆಯೊಳಗಾಗಿ ಅದೆಲ್ಲಿಂದಲೋ ಬಂದ ಜೇನು ಹುಳಗಳಂತೆ ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಅಭಿಮಾನಿಗಳು ಕಮಲ್ ಅವರನ್ನು ಪಾಲೋ ಮಾಡಿದ್ದಾರೆ. ಇದೀಗ ಇವತ್ತಿಗೆ ಪಾಲೋವರ್ಸ್ ಸಂಖ್ಯೆ 38,468.[ಕನ್ನಡ ನಿರ್ದೇಶಕರ ತಮಿಳು ಚಿತ್ರ 'ಉತ್ತಮ ವಿಲನ್'ಗೆ, 5 ಪ್ರಶಸ್ತಿ..!]

ಮಾತ್ರವಲ್ಲದೇ ಖಾತೆ ತೆರೆದ ಮೊದಲ ದಿನ ಕಮಲ್ ಅವರು ಗಣರಾಜ್ಯೋತ್ಸವದ ಶುಭಾಶಯವನ್ನು ಕೋರಿ, ತಾವೇ ರಾಷ್ಟ್ರಗೀತೆಯನ್ನು ಹಾಡಿ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನು ತಮ್ಮ ಪ್ರೀತಿಯ ತಂದೆ ಟ್ವಿಟ್ಟರ್ ಗೆ ಲಗ್ಗೆ ಇಟ್ಟ ಕೂಡಲೇ ಕಮಲ್ ಅವರ ಪುತ್ರಿ ನಟಿ ಕಮ್ ಗಾಯಕಿ ಶ್ರುತಿ ಹಾಸನ್ ಅವರು ತಂದೆಗೆ 'ಐ ಲವ್ ಯೂ' ಎಂದು ಟ್ವೀಟ್ ಮಾಡುವ ಮೂಲಕ ಟ್ವಿಟ್ಟರ್ ಲೋಕಕ್ಕೆ ಸ್ವಾಗತ ಕೋರಿದ್ದಾರೆ.

English summary
Tamil Actor Kamal Haasan joins twitter on republic day.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada