»   » 'ದಿ ವಿಲನ್' ತಂಡಕ್ಕೆ ಬಾಯ್ ಬಾಯ್ ಹೇಳಿದ ನಟ ಶ್ರೀ ಕಾಂತ್

'ದಿ ವಿಲನ್' ತಂಡಕ್ಕೆ ಬಾಯ್ ಬಾಯ್ ಹೇಳಿದ ನಟ ಶ್ರೀ ಕಾಂತ್

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗದಲ್ಲಿ ಈ ವರ್ಷ ಬಿಡುಗಡೆ ಆಗಲಿರುವ ಹಾಗೂ ಬಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ 'ದಿ ವಿಲನ್' ಮೊದಲನೇ ಸ್ಥಾನದಲ್ಲಿದೆ. ಶಿವರಾಜ್ ಕುಮಾರ್ ಕಿಚ್ಚ ಸುದೀಪ್ ಅಭಿಮಾನಿಗಳು ಚಿತ್ರ ಬಿಡುಗಡೆ ಯಾವಾಗ ಎಂದು ತುದಿಗಾಲಲ್ಲಿ ಕಾಯುತ್ತಾ ಕುಳಿತಿದ್ದಾರೆ. ಚಿತ್ರದಲ್ಲಿ ಕಿಚ್ಚ ಹಾಗೂ ಹ್ಯಾಟ್ರಿಕ್ ಹೀರೋ ಜೊತೆಯಲ್ಲಿ ಸಾಕಷ್ಟು ಕಲಾವಿದರು ಅಭಿನಯಿಸುತ್ತಿದ್ದು ತಮಿಳು ನಟ ಶ್ರೀಕಾಂತ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯದ ಸುದ್ದಿಯ ಪ್ರಕಾರ ನಟ ಶ್ರೀಕಾಂತ್ ದಿ ವಿಲನ್ ಚಿತ್ರತಂಡಕ್ಕೆ ಬಾಯ್ ಹೇಳಿದ್ದಾರೆ. ಹಾಗಂತ ಸಿನಿಮಾ ತಂಡದಿಂದ ಹೊರ ಹೋಗಿಲ್ಲ. ತಮ್ಮ ಪಾಲಿನ ಚಿತ್ರೀಕರಣ ಕಂಪ್ಲೀಟ್ ಮಾಡಿ ತಮ್ಮ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ದಿ ವಿಲನ್ ಸಿನಿಮಾ ಚಿತ್ರೀಕರಣದ ಆರಂಭದಲ್ಲೇ ಶ್ರೀಕಾಂತ್ ಅವರು ಶೂಟಿಂಗ್ ನಲ್ಲಿ ಭಾಗಿ ಆಗಿದ್ದರು. ಸಿನಿಮಾತಂಡದಿಂದ ಅವರನ್ನ ಅದ್ಧೂರಿ ಆಗಿ ಬರ ಮಾಡಿಕೊಳ್ಳಲಾಗಿತ್ತು.

Tamil actor Srikanth has completed the shoot of 'The Villain' movie

ಕಿಚ್ಚನ ಆಕ್ಷನ್ ಕಟ್ ನಲ್ಲಿ ನವರಸ ನಾಯಕನ ಅಭಿನಯ ?

ಸದ್ಯ ಶ್ರೀಕಾಂತ್ ಅವರ ಪಾಲಿನ ಚಿತ್ರೀಕರಣ ಮುಗಿದಿರುವುದಾಗಿ ನಟ ಪ್ರೇಮ್ ತಿಳಿಸಿದ್ದಾರೆ. "ಇಂದು ನಿಮ್ಮ ಜೊತೆ ಕೊನೆಯ ದಿನದ ಚಿತ್ರೀಕರಣ, ಧನ್ಯವಾದಗಳು ಸರ್, ನಿಮ್ಮ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಚಿತ್ರತಂಡದ ಪ್ರತಿಯೊಬ್ಬರಿಗೂ ನೀವು ಸ್ಫೂರ್ತಿ. ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ".

Tamil actor Srikanth has completed the shoot of 'The Villain' movie

ದಿ ವಿಲನ್ ಚಿತ್ರದ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದ್ದು ಸಿನಿಮಾ ನಿರ್ದೇಶಕರು ಹಾಡಿನ ಚಿತ್ರೀಕರಣ ಮಾಡುವಲ್ಲಿ ಬ್ಯುಸಿ ಆಗಿದ್ದಾರೆ. ಅದ್ಧೂರಿ ಸೆಟ್ ನಲ್ಲಿ ಕಿಚ್ಚ ಸುದೀಪ್ ಅಭಿನಯದ ಹಾಡನ್ನ ಚಿತ್ರೀಕರಿಸಲಾಗುತ್ತಿದೆ. ಇದೇ ತಿಂಗಳಲ್ಲಿ ದಿ ವಿಲನ್ ಸಿನಿಮಾದ ಟೀಸರ್ ಬಿಡುಗಡೆ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.

ಟಗರು ಸಿನಿಮಾ ವಿಮರ್ಶೆ ಮಾಡಿದ ರಾಕಿಂಗ್ ಸ್ಟಾರ್

English summary
Tamil actor Srikanth has completed the shoot of 'The Villain' movie, Srikanth played the important role in 'The Villain' Sudeep and Shivarajkumar acting in the movie, Jogi Prem directed the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada