For Quick Alerts
  ALLOW NOTIFICATIONS  
  For Daily Alerts

  ''ಅದ್ಭುತ ರಾಜ್ಯವಿದು, ನಿಮ್ಮನ್ನು ಪಡೆದಿದ್ದು ಅಪ್ಪು ಅದೃಷ್ಟ, ಅಪ್ಪುವನ್ನು ಪಡೆದ ನೀವು ಅದೃಷ್ಟವಂತರು''

  |

  ''ನನ್ನ ಹಾಗೂ ಅಪ್ಪುವಿನದ್ದು ದಶಕಗಳ ಗೆಳೆತನ, ನಾನು ಅಮ್ಮನ ಹೊಟ್ಟೆಯಲ್ಲಿದ್ದಾಗ ಅಪ್ಪು ಅವರ ಅಮ್ಮನ ಅಮ್ಮನ ಹೊಟ್ಟೆಯಲ್ಲಿದ್ದ. ಆಗನಿಂದಲೂ ನಾವು ಗೆಳೆಯರು. ನಾವಿಬ್ಬರೂ ಮೊದಲಿಗೆ ಮೈಸೂರಿನ ಸುಜಾತಾ ಹೋಟೆಲ್‌ನಲ್ಲಿ ಭೇಟಿಯಾಗಿದ್ದೆವಂತೆ'' 'ಪುನೀತ ಪರ್ವ' ಕಾರ್ಯಕ್ರಮದಲ್ಲಿ ತಮಿಳು ನಟ ಸೂರ್ಯ ತಮ್ಮ ನೆನಪಿನ ಸುಳಿಯನ್ನು ಬಿಚ್ಚಿದರು.

  ''ನನ್ನ ಸಹೋದರ ಅಪ್ಪು ಎಲ್ಲೂ ಹೋಗಿಲ್ಲ ಆತ ನಮ್ಮನ್ನೆಲ್ಲ ನೋಡುತ್ತಿದ್ದಾನೆ. ಅಪ್ಪು, ಸೆಲೆಬ್ರಿಟಿ ಆಗಿದ್ದರೂ ಅದರಿಂದ ಹೊರಗಿದ್ದವರು. ಅತ್ಯಂತ ಸರಳವಾಗಿ, ಸ್ನೇಹಮಯವಾಗಿ, ಪ್ರೀತಿಯನ್ನಷ್ಟೆ ನೀಡುತ್ತಾ, ತೃಪ್ತಿಕದಾಯಕ ಭಾವದಲ್ಲಿರುತ್ತಿದ್ದರು. ಅವರೊಂದಿಗೆ ಸಾಕಷ್ಟು ಅದ್ಭುತವಾದ ನೆನಪುಗಳು ನನಗೆ ಇವೆ. ಸಮಾಜಕ್ಕೆ ಮರಳಿ ಕೊಡುವ ಅವರ ಗುಣವೇ ಅವರನ್ನು ಇಂದು ಇಷ್ಟು ದೊಡ್ಡ ವ್ಯಕ್ತಿಯನ್ನಾಗಿಸಿದೆ. ಅದೇ ಕಾರಣದಿಂದ ಅವರಿಗೆ ಇಷ್ಟು ದೊಡ್ಡ ಪ್ರೀತಿಸುವವರ ಬಳಗ ಧಕ್ಕಿದೆ. ಅಪ್ಪುವಿನ ಇದೇ ಸಮಾಜಮುಖಿ ಗುಣದಿಂದಾಗಿ ಇಷ್ಟೋಂದು ಜನ ನಾವು ಅವರಿಗಾಗಿ ಸೇರಿದ್ದೇವೆ'' ಎಂದರು.

  ಒಬ್ಬ ವ್ಯಕ್ತಿಯನ್ನು ಒಂದು ರಾಜ್ಯದ ಜನ ಹೀಗೆ ಪ್ರೀತಿಸುವುದನ್ನು ನಾನು ನನ್ನ ಜೀವಮಾನದಲ್ಲಿ ನೋಡಿಲ್ಲ. ಮತ್ತೆಂದೂ ನೋಡುತ್ತೇನೋ ಇಲ್ಲವೋ ಗೊತ್ತಿಲ್ಲ. ಇದೊಂದು ಅದ್ಭುತವಾದ ರಾಜ್ಯ. ಅದ್ಭುತವಾದ ಜನ. ನಿಮ್ಮನ್ನು ಪಡೆದ ಅಪ್ಪು ಅದೃಷ್ಟವಂತ, ಅವನನ್ನು ಪಡೆದ ನೀವು ಅದೃಷ್ಟವಂತರು. ಇನ್ನೊಂದು ಉದ್ಯಮದಲ್ಲಿ ಸಹ ಯಾರ ಮೇಲಾದರೂ ಈ ಮಟ್ಟಿನ ಪ್ರೇಮ ಯಾರಾದರೂ ಹರಿಸಲು ಸಾಧ್ಯವೇ ಎಂಬುದು ಅನುಮಾನ. ಈಗಲೂ ಅಪ್ಪು ಸಮಾಧಿಗೆ ಪ್ರತಿ ವಾರ 50 ಸಾವಿರ ಜನ ಭೇಟಿ ನೀಡುತ್ತಾರೆ ಎಂಬುದು ಕೇಳಿ ಪರಮಾಶ್ಚರ್ಯವಾಯಿತು'' ಎಂದು ನಾಡಿನ ಜನಗಳ ಪ್ರೀತಿ, ಅಭಿಮಾನವನ್ನು ಹೊಗಳಿದರು.

  ''ಅಪ್ಪು ಸಮಾಧಿಗೆ ಭೇಟಿ ನೀಡಿದಾಗ ನನಗೆ ಕೆಲವು ವಿಷಯ ಅರ್ಥವಾಯಿತು. ಜೀವನವನ್ನು ಹೇಗೆ ನಿರ್ವಹಿಸಬೇಕು ಎಂಬುದು ಗೊತ್ತಾಯಿತು. ಒಂದು ವರ್ಷ ಎಷ್ಟು ಬೇಗ ಉರುಳಿಬಿಟ್ಟಿತು. ಈ ಕಷ್ಟದ ಸಮಯದಲ್ಲಿ ಅಶ್ವಿನಿ ಧೈರ್ಯವಾಗಿ ಹೆಜ್ಜೆ ಇಟ್ಟಿದ್ದಾರೆ. ಅಪ್ಪು, ತಮ್ಮ ಕುಟುಂಬದ ಬಗ್ಗೆ ಖಂಡಿತ ಹೆಮ್ಮೆ ಪಡುತ್ತಿರುತ್ತಾರೆ. ಅವರು ಹೀಗೆಯೇ ಧೈರ್ಯವಾಗಿ ಮುಂದೆ ಸಾಗಬೇಕು ಎಂದ ಸೂರ್ಯ, ''ಅಪ್ಪು ಅಗಲಿದ ಬಳಿಕ ಅವರ ಸಮಾಧಿಗೆ ಭೇಟಿ ಕೊಟ್ಟ ದಿನ ನೆನಪು ಮಾಡಿಕೊಂಡು, ಅಂದು ಅಪ್ಪುವಿನ ಸಮಾಧಿಯನ್ನು ಮುಟ್ಟಿದ್ದಷ್ಟೆ ನೆನಪು, ಅದಾದ ಬಳಿಕ ಗಂಟೆಗಳ ಕಾಲ ಅತ್ತಿದ್ದೇನೆ. ಅಪ್ಪು ಎಂದಿಗೂ ಮರೆಯಲಾಗದ ವ್ಯಕ್ತಿ'' ಎಂದರು.

  ''ಗಂಧದ ಗುಡಿ' ಸಿನಿಮಾದ ಮೂಲಕ ಅಪ್ಪು ಮತ್ತೊಮ್ಮೆ ಯುವಕರಿಗೆ ಒಂದು ಮಾದರಿ ಹಾಕಿಕೊಟ್ಟಿದ್ದಾರೆ. ನಮ್ಮ ಪ್ರಕೃತಿಯನ್ನು ಹೇಗೆ ಪ್ರೀತಿಸಬೇಕು, ಹೇಗೆ ಕಾಪಾಡಬೇಕು ಎಂದು ಹೇಳಿದ್ದಾರೆ. ಸಿನಿಮಾದ ನಂಬರ್ 1 ರೇಸ್‌ ಅನ್ನು ದಾಟಿದ ವ್ಯಕ್ತಿ, ನಂಬರ್ ಗೇಮ್‌ ಅನ್ನು ಲೆಕ್ಕ ಮಾಡದ ವ್ಯಕ್ತಿಯಿಂದ ಮಾತ್ರ ಇಂಥಹದ್ದೊಂದು ಪ್ರಾಜೆಕ್ಟ್ ಮಾಡಲು ಸಾಧ್ಯ. ಹೃದಯದಿಂದ ಸ್ವಚ್ಛವಾಗಿದ್ದ ವ್ಯಕ್ತಿಗಿರುವ ವ್ಯಕ್ತಿಗಷ್ಟೆ ಈ ರೀತಿಯ ಸಾಹಸ ಮಾಡಲು ಸಾಧ್ಯ. ಅಪ್ಪು, ಸ್ಟಾರ್‌ಡಮ್ ನಿಂದ, ನಂಬರ್‌ 1 ಗಿಂತಲೂ ಬಹಳ ಎತ್ತರದಲ್ಲಿದ್ದರು. ಅವರು ಯಾವಾಗಲೂ ನಮ್ಮ ಪ್ರೀತಿಯ ರಾಜಕುಮಾರ'' ಎಂದು ಹೊಗಳಿದರು ಸೂರ್ಯ.

  English summary
  Tamil actor Suriya talks about Puneeth Rajkumar. He said Puneeth Rajkumar is beyond stardom and number 1 place.
  Friday, October 21, 2022, 23:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X