For Quick Alerts
  ALLOW NOTIFICATIONS  
  For Daily Alerts

  ತಮಿಳಿನ ಸ್ಟಾರ್ ನಟ ವಿಶಾಲ್ ಸಿನಿಮಾ 'ಲಾಠಿ' ಕನ್ನಡದಲ್ಲೂ ರಿಲೀಸ್!

  |

  ಕನ್ನಡದ ಪ್ಯಾನ್‌ ಇಂಡಿಯಾ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಲಗ್ಗೆ ಇಡುತ್ತಿವೆ. ಒಂದೊಂದೇ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಲು ಮುಂದೆ ಬರುತ್ತಿದ್ದಾರೆ.

  ಈಗ ತಮಿಳಿನ ಸ್ಟಾರ್ ನಟ ವಿಶಾಲ್ ಅಭಿನಯದ ಸಿನಿಮಾ 'ಲಾಠಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ಸಿನಿಮಾವೀಗ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಇದೇ ಡಿಸೆಂಬರ್ 22 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಈ ಸಿನಿಮಾದ ಪ್ರಚಾರಕ್ಕಾಗಿ ವಿಶಾಲ್ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು.

  ವಿಶಾಲ್ ಸಿನಿಮಾಗಳು ಕೇವಲ ಕಮರ್ಷಿಯಲ್ ಆಗಿ ಇರುವುದಿಲ್ಲ, ಬದಲಾಗಿದೆ, ಅವರ ಸಿನಿಮಾಗಳು ಸಮಾಜಮುಖಿಯಾಗಿಯೂ ಇರುತ್ತವೆ. ಈಗ ಬಿಡುಗಡೆ ಸಜ್ಜಾಗುತ್ತಿರುವ 'ಲಾಠಿ' ಸಿನಿಮಾ ಕೂಡ ಇಂತಹದ್ದೇ ಒಂದು ಸಂದೇಶವನ್ನು ಹೊತ್ತು ಬಿಡುಗಡೆ ಸಜ್ಜಾಗಿದೆ. ಈ ಸಿನಿಮಾ ವಿಚಾರವಾಗಿಯೇ ವಿಶಾಲ್ ಬೆಂಗಳೂರಿನಲ್ಲಿ ಹಲವು ಮಾಹಿತಿಗಳನ್ನು ಹೊರಹಾಕಿದ್ದಾರೆ.

  "ಸಾಮಾನ್ಯವಾಗಿ ಪೊಲೀಸ್ ಕುರಿತಾದ ಸಿನಿಮಾಗಳಲ್ಲಿ ಗನ್ ಬಳಸಿರುತ್ತಾರೆ. ಏಕೆಂದರೆ ಪೊಲೀಸ್ ಅಧಿಕಾರಿಗಳ ಬಳಿ ಗನ್ ಇರುತ್ತದೆ. ಆದರೆ, ಕಾನ್ಸ್‌ಟೇಬಲ್ ಹತ್ತಿರ 'ಲಾಠಿ' ಇರುತ್ತದೆ. ಎಷ್ಟೋ ಹಿರಿಯ ಅಧಿಕಾರಿಗಳು ಸಹ ಅನುಭವವಿರುವ ಹಿರಿಯ ಕಾನ್ಸ್‌ಟೇಬಲ್‌ಗಳ ಸಲಹೆ ತೆಗೆದುಕೊಳ್ಳುತ್ತಾರೆ. 'ಲಾಠಿ' ಜನರ ರಕ್ಷಣೆಗೆ ಸದಾ ಸಿದ್ದ. ಅಂತಹ 'ಲಾಠಿ'ಯ ಸುತ್ತ ನಮ್ಮ‌ ಚಿತ್ರದ ಕಥೆ ಸಾಗುತ್ತದೆ" ಎಂದು ವಿಶಾಲ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

  'ಲಾಠಿ' ಸಿನಿಮಾ ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಡಿಸೆಂಬರ್ 22 ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಹಿಂದಿಯಲ್ಲಿ ಸದ್ಯಕ್ಕೆ ಬಿಡುಗಡೆಯಾಗದೇ ಹೋದರೂ, ಡಿಸೆಂಬರ್ 30 ರಂದು ರಿಲೀಸ್ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ. ಈ ಸಿನಿಮಾವನ್ನು ಸುಮಾರು 145 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ‌.

  Tamil Actor Vishal New Movie Lathi Will Be Releasing On Dec 22nd In Kannada

  "ಲಾಠಿ ಸಿನಿಮಾದ ನಿಜವಾದ ಹೀರೊಗಳೆಂದರೆ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ ಹಾಗೂ ಸಾಹಸ ನಿರ್ದೇಶಕ ಪೀಟರ್ ಹೆನ್. 'ಲಾಠಿ' ಯ ಹಾಡುಗಳು, ರೀ ರೆಕಾರ್ಡಿಂಗ್ ಹಾಗೂ ಸಾಹಸ ಸನ್ನಿವೇಶಗಳು ಅಷ್ಟು ಅದ್ಭುತವಾಗಿ ಮೂಡಿಬಂದಿದೆ. ಕೊನೆಯ 45 ನಿಮಿಷಗಳ ಸನ್ನಿವೇಶವಂತೂ ಪ್ರೇಕ್ಷಕರನ್ನು‌‌ ತುದಿಗಾಲಿನಲ್ಲಿ ನಿಲುವಂತೆ ಮಾಡುವುದು ಖಚಿತ." ಎಂದು ವಿಶಾಲ್ ಹೇಳಿದ್ದಾರೆ.

  'ಲಾಠಿ' ಸಿನಿಮಾವನ್ನು ವಿನೋದ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಅಂದ್ಹಾಗೆ 'ಲಾಠಿ' ಟಿಕೆಟ್‌ನ ಬೆಲೆಯ ಒಂದು ರೂಪಾಯಿಯನ್ನು ರೈತರಿಗೆ ನೀಡಲು ವಿಶಾಲ್ ತೀರ್ಮಾನಿಸಿದ್ದಾರೆ. ಬೆಂಗಳೂರು ಕುಮಾರ್ ಕರ್ನಾಟಕದಾದ್ಯಂತ 'ಲಾಠಿ' ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ.

  English summary
  Tamil Actor Vishal New Movie Lathi Will Be Releasing On Dec 22nd In Kannada, Know More.
  Monday, December 19, 2022, 23:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X