For Quick Alerts
  ALLOW NOTIFICATIONS  
  For Daily Alerts

  20 ವರ್ಷದ ನಂತರ ಮತ್ತೆ ಕನ್ನಡಕ್ಕೆ ಬಂದ ನಟಿ ದೇವಯಾನಿ

  |

  ತಮಿಳಿನ ಖ್ಯಾತ ನಟಿ ದೇವಯಾನಿ ಹಲವು ವರ್ಷದ ಬಳಿಕ ಕನ್ನಡ ಚಿತ್ರರಂಗಕ್ಕೆ ವಾಪಸ್ ಆಗುತ್ತಿದ್ದಾರೆ. 90ರ ದಶಕದಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದ ದೇವಯಾನಿ ತಮಿಳು, ತೆಲುಗು, ಮರಾಠಿ ಹಾಗೂ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದರು. ಸ್ಟಾರ್ ನಟರಂತೆ ಒಂದು ವರ್ಷದಲ್ಲಿ ಹತ್ತಕ್ಕು ಹೆಚ್ಚು ಚಿತ್ರಗಳನ್ನು ಮಾಡಿರುವ ಉದಾಹರಣೆಯೂ ಇದೆ.

  ದಕ್ಷಿಣ ಭಾರತದಲ್ಲಿ ತನ್ನದೇ ಛಾಪು ಮೂಡಿಸಿದ್ದ ದೇವಯಾನಿ ಇದುವರೆಗೂ ಕನ್ನಡದಲ್ಲಿ ನಟಿಸಿರುವುದು ಒಂದೇ ಚಿತ್ರದಲ್ಲಿ. ದಿವಂಗತ ನಟ ಡಾ ವಿಷ್ಣುವರ್ಧನ್ ಅವರ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಮತ್ತೆ ಕನ್ನಡದ ಚಿತ್ರಗಳಲ್ಲಿ ಅಭಿನಯಿಸಿಲ್ಲ. ಇದೀಗ, 20 ವರ್ಷದ ನಂತರ ಮತ್ತೆ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿದ್ದಾರೆ. ಯಾವ ಚಿತ್ರಕ್ಕಾಗಿ ಎಂಟ್ರಿ?

  'ಮದಗಜ' ಚಿತ್ರದಲ್ಲಿ ದೇವಯಾನಿ

  'ಮದಗಜ' ಚಿತ್ರದಲ್ಲಿ ದೇವಯಾನಿ

  ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸುತ್ತಿರುವ 'ಮದಗಜ' ಚಿತ್ರಕ್ಕಾಗಿ ಬಹುಭಾಷಾ ನಟಿ ದೇವಯಾನಿ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

  ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣ ಮುಗಿಸಿದ 'ಮದಗಜ'ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣ ಮುಗಿಸಿದ 'ಮದಗಜ'

  'ಪ್ರೇಮೋತ್ಸವ' ಚಿತ್ರದಲ್ಲಿ ದೇವಯಾನಿ

  'ಪ್ರೇಮೋತ್ಸವ' ಚಿತ್ರದಲ್ಲಿ ದೇವಯಾನಿ

  1999ರಲ್ಲಿ ತೆರೆಕಂಡಿದ್ದ 'ಪ್ರೇಮೋತ್ಸವ' ಚಿತ್ರದಲ್ಲಿ ದೇವಯಾನಿ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿದ್ದರು. ದಿನೇಶ್ ಬಾಬು ನಿರ್ದೇಶನದ ಈ ಚಿತ್ರವನ್ನು ಅನಿತಾ ಕುಮಾರಸ್ವಾಮಿ ನಿರ್ಮಿಸಿದ್ದರು. ಡಾ ವಿಷ್ಣುವರ್ಧನ್, ರೋಜಾ, ದೇವಯಾನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

  2001ರಲ್ಲಿ ವಿವಾಹವಾದರು

  2001ರಲ್ಲಿ ವಿವಾಹವಾದರು

  ದೇವಯಾನಿ ಅವರ ತಂದೆ ಮಂಗಳೂರಿನವರು ಹಾಗೂ ತಾಯಿ ಕೇರಳದವರು. ಇಬ್ಬರು ಸಹೋದರರಿದ್ದಾರೆ. ನಟ ರಾಜಕುಮಾರನ್ ಅವರನ್ನು 2001ರಲ್ಲಿ ವಿವಾಹವಾದರು. ದೇವಯಾನಿ ಮತ್ತು ರಾಜಕುಮಾರನ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮದುವೆ ಆದ್ಮೇಲೆ ಸಹಜವಾಗಿ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದರು. 2005ರ ನಂತರ ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾ ಮಾತ್ರ ಒಪ್ಪಿಕೊಂಡರು.

  'ಮದಗಜ' ಸಿನಿಮಾದಲ್ಲಿ ಹಳ್ಳಿ ಹುಡುಗಿಯಾದ ಆಶಿಕಾ ರಂಗನಾಥ್'ಮದಗಜ' ಸಿನಿಮಾದಲ್ಲಿ ಹಳ್ಳಿ ಹುಡುಗಿಯಾದ ಆಶಿಕಾ ರಂಗನಾಥ್

  Vajramuni ಮಗ ಚಿತ್ರರಂಗಕ್ಕೆ ಯಾಕೆ ಬಂದಿಲ್ಲ ಗೊತ್ತಾ..? | Filmibeat Kannada
  ಮದಗಜ ಚಿತ್ರೀಕರಣಕ್ಕೆ ಬ್ರೇಕ್!

  ಮದಗಜ ಚಿತ್ರೀಕರಣಕ್ಕೆ ಬ್ರೇಕ್!

  ಸೆಪ್ಟೆಂಬರ್ ಮಧ್ಯದಲ್ಲಿ 'ಮದಗಜ' ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಿತ್ತು. ಮೈಸೂರಿನಲ್ಲಿ ನಡೆಯುತ್ತಿದ್ದ ಶೂಟಿಂಗ್ ಇತ್ತೀಚಿಗಷ್ಟೆ ಮುಗಿದಿದೆ. ಈಗ ಮೂರನೇ ಹಂತದ ಶೆಡ್ಯೂಲ್‌ಗೆ ಚಿತ್ರತಂಡ ಸಿದ್ಧವಾಗುತ್ತಿದೆ. ಇನ್ನುಳಿದಂತೆ ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರ ನಿರ್ಮಿಸುತ್ತಿದ್ದು, ಆಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ.

  English summary
  Tamil actress Devayani comeback to kannada industry with Madagaja after 20 years. she was last seen in Dr vishnuvardhan's 'Premotsava' movie in 1999.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X