For Quick Alerts
  ALLOW NOTIFICATIONS  
  For Daily Alerts

  ಪುನೀತ್ ಮನೆಗೆ ಭೇಟಿ ನೀಡಿದ ತಮಿಳು ಹಾಸ್ಯ ನಟ ಯೋಗಿಬಾಬು

  |

  ತಮಿಳಿನ ಬಹುಬೇಡಿಕೆ ಹಾಸ್ಯ ನಟ ಯೋಗಿ ಬಾಬು ಅವರು ಕನ್ನಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

  Kanaka , Duniya Vijay ತೆರೆ ಹಿಂದಿನ ಶ್ರಮ | Filmibeat Kannada

  ಇತ್ತೀಚಿಗಷ್ಟೆ ಬೆಂಗಳೂರಿಗೆ ಬಂದಿದ್ದ ನಟ ಯೋಗಿ ಬಾಬು ಅವರು ಸದಾಶಿವನಗರದಲ್ಲಿರುವ ಪುನೀತ್ ರಾಜ್ ಕುಮಾರ್ ಮನೆಗೆ ಭೇಟಿ ನೀಡಿ ಅಪ್ಪು ಜೊತೆ ಮಾತನಾಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಒಂದೇ ಸ್ಟೆಪ್ ಹಾಕಿದ ಅಪ್ಪು-ಅಲ್ಲು ಅರ್ಜುನ್, ಯಾರಿಗೆ ಸಿಕ್ತು ಬಹುಪರಾಕ್?

  ಕೆಲಸದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಯೋಗಿಬಾಬು ಎರಡ್ಮೂರು ದಿನದಿಂದ ಸಿಲಿಕಾನ್ ಸಿಟಿಯಲ್ಲಿ ತಂಗಿದ್ದರು ಎನ್ನಲಾಗಿದೆ. ಹೀಗಾಗಿ, ಅಣ್ಣಾವ್ರ ಮನೆಗೆ ಭೇಟಿ ಮಾಡಿದ್ದಾರೆ. ಸಹಜವಾಗಿ ತಮಿಳು ಹಾಗೂ ತೆಲುಗಿನ ನಟರು ಬೆಂಗಳೂರಿಗೆ ಬಂದರೆ ದೊಡ್ಮನೆಗೆ ಹೋಗುವುದು ಸಂಪ್ರಾದಯ.

  ಪ್ರಸ್ತುತ ತಮಿಳು ಇಂಡಸ್ಟ್ರಿಯಲ್ಲಿ ಯೋಗಿ ಬಾಬು ಬೇಡಿಕೆಯ ನಟ. ರಜನಿಕಾಂತ್, ವಿಜಯ್, ವಿಶಾಲ್, ಸೂರ್ಯ, ಅಜಿತ್, ಆರ್ಯ ಸೇರಿದಂತೆ ಬಹುತೇಕ ಎಲ್ಲ ಸ್ಟಾರ್‌ಗಳ ಚಿತ್ರದಲ್ಲಿ ಖಾಯಂ ನಟ ಆಗಿದ್ದಾರೆ.

  ನಯನತಾರ ಕಾಂಬಿನೇಷನ್‌ನಲ್ಲಿ ನಟಿಸಿದ 'ಕೋಲಮಾವು ಕೋಕಿಲ' ಸಿನಿಮಾ ಬಳಿಕ ಯೋಗಿ ಬಾಬು ಖದರ್ ಬದಲಾಯಿತು. ಈ ಚಿತ್ರದ ಅಭಿನಯಕ್ಕಾಗಿ ಅತ್ಯುತ್ಯುಮ ಹಾಸ್ಯ ನಟ ಸೈಮಾ ಪ್ರಶಸ್ತಿ ಸಹ ಪಡೆದುಕೊಂಡರು.

  2019ರಲ್ಲಿ ಸುಮಾರು 32ಕ್ಕೂ ಅಧಿಕ ಚಿತ್ರಗಳಲ್ಲಿ ಯೋಗಿಬಾಬು ನಟಿಸಿದ್ದಾರೆ. 2020ನೇ ವರ್ಷದಲ್ಲೂ ಬಹಳ ಬ್ಯುಸಿಯಿರುವ ನಟ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Tamil No 1 Comedy Actor Yogi Babu was Visited to kannada actor Power star Puneeth Rajkumar home.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X