ರಮ್ಯಾ ಕೃಷ್ಣ ಜೊತೆ ಅಭಿನಯಿಸುತ್ತಿದ್ದ ನಟಿ ಪ್ರಿಯಾಂಕಾ ಆತ್ಮಹತ್ಯೆ

By Bharath Kumar

Recommended Video

ಬಾರದ ಲೋಕಕ್ಕೆ ತೆರಳಿದ ನಟಿ ಪ್ರಿಯಾಂಕ...!!! |Filmibeat Kannada

ತಮಿಳಿನ ಟಿವಿ ತಾರೆ ಪ್ರಿಯಾಂಕಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ನಿವಾಸದಲ್ಲಿ ಇಂದು ಬೆಳಿಗ್ಗೆ ಫ್ಯಾನ್ ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ಹಿರಿಯ ನಟಿ ರಮ್ಯಾ ಕೃಷ್ಣ ಅವರ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ತಮಿಳಿನ 'ವಂಶಂ' ಎಂಬ ಧಾರಾವಾಹಿಯಲ್ಲಿ ಪ್ರಿಯಾಂಕಾ, ಜ್ಯೋತಿಕಾ ಎಂಬ ಪಾತ್ರವನ್ನ ನಿರ್ವಹಿಸುತ್ತಿದ್ದರು.

ಪ್ರಿಯಾಂಕಾ ಅವರಿಗೆ ಮೂರು ವರ್ಷದ ಹಿಂದೆ ಮದುವೆ ಆಗಿತ್ತು. ಆದ್ರೆ, ಮಕ್ಕಳು ಇರಲಿಲ್ಲ. ಮದುವೆಯ ನಂತರವೂ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಮಕ್ಕಳಿಲ್ಲದ ಕೊರಗು ಅವರನ್ನ ಮಾನಸಿಕವಾಗಿ ಕಾಡಿತ್ತು ಎನ್ನಲಾಗಿದೆ.

Tamil TV actress Priyanka suicide

ಇನ್ನು ಪ್ರಿಯಾಂಕಾ ಸಾವಿಗೆ ಅಸಲಿ ಕಾರಣ ಬಹಿರಂಗವಾಗಿಲ್ಲವಾದರೂ, ಕೌಟುಂಬಿಕ ಕಲಹವೇ ಈ ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ. ಆದ್ರೆ, ಪ್ರಿಯಾಂಕಾ ಆತ್ಮಹತ್ಯೆ ಮಾಡಿಕೊಂಡಾಗ ಮನೆಯವರು ಇದ್ರಾ ಅಥವಾ ಇಲ್ವಾ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.

ಸದ್ಯ, ಪ್ರಿಯಾಂಕಾ ಅವರ ಪಾರ್ಥೀವ ಶರೀರವನ್ನ ಶವಪರೀಕ್ಷೆಗೆ ಕಳುಹಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

More from Filmibeat

English summary
Popular Tamil TV actress Priyanka allegedly committed suicide at her Valasaravakkam residence. The actress was very much popular in the households for her role of Jyothika in Ramya Krishnan’s Tamil TV show, Vamsam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X