»   » ಈ ವಾರ 'ತರ್ಲೆ ವಿಲೇಜ್'ನ ಪೋಲಿ ಹುಡುಗರು ಬರ್ತಿದ್ದಾರಪ್ಪೋ.!

ಈ ವಾರ 'ತರ್ಲೆ ವಿಲೇಜ್'ನ ಪೋಲಿ ಹುಡುಗರು ಬರ್ತಿದ್ದಾರಪ್ಪೋ.!

Posted By:
Subscribe to Filmibeat Kannada

'ತಿಥಿ' ಖ್ಯಾತಿಯ ಕಲಾವಿದರು ಅಭಿನಯಿಸಿರುವ 'ತರ್ಲೆ ವಿಲೇಜ್' ಈ ವಾರ ತೆರೆಗೆ ಬರ್ತಿದೆ. ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ಚಿತ್ರಕಥೆ ಹಣೆಯಲಾಗಿದ್ದು, ಚಿತ್ರದಲ್ಲಿ ಹಳ್ಳಿ ಜನರ ಪ್ರೀತಿ-ಪ್ರೇಮ, ಗದ್ದಲ-ಗಲಾಟೆ, ಹಾಸ್ಯ, ನ್ಯಾಯ, ಪಂಚಾಯಿತಿ ಎಲ್ಲವನ್ನೂ ಹಾಸ್ಯಭರಿತವಾಗಿ ಅಳವಡಿಸಲಾಗಿದೆ.

ಈಗಾಗಲೇ ಗಡ್ಡಪ್ಪನ ಮ್ಯಾನರಿಸಂ ಹಾಗೂ ಸೆಂಚುರಿಗೌಡರ ಪೋಲಿ ಮಾತುಗಳನ್ನೊಳಗೊಂಡ ಟ್ರೈಲರ್ ಕುತೂಹಲ ಹೆಚ್ಚಿಸಿದ್ದು, 'ತಿಥಿ' ಚಿತ್ರದಂತೆ ಮೋಡಿ ಮಾಡುವ ಭರವಸೆಯಲ್ಲಿದೆ.['ತಿಥಿ' ನಾಯಕರ ಕಾಲ್ ಶೀಟ್ ಕಷ್ಟ: 'ಏನ್ ನಿನ್ ಪ್ರಾಬ್ಲಮ್ಮು' ]


'Tarle Village' Releasing on December 16th

'ತರ್ಲೆ ವಿಲೇಜ್' ಚಿತ್ರದಲ್ಲಿ 'ತಿಥಿ' ಖ್ಯಾತಿಯ ಗಡ್ಡಪ್ಪ, ಸೆಂಚುರಿ ಗೌಡ, ತಮ್ಮಣ್ಣ, ಅಭಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಇವರ ಜೊತೆಗೆ ಹರ್ಷಿತಾ, ಭಾಗ್ಯಶ್ರೀ, ಸೋಮು, ಸೇರಿದಂತೆ ಸುಮಾರು 70 ಕಲಾವಿದರು ಬಣ್ಣ ಹಚ್ಚಿದ್ದಾರೆ. 'ತಿಥಿ' ಚಿತ್ರದ ಗಡ್ಡಪ್ಪ ಅವರು ಈ ಚಿತ್ರದಲ್ಲಿ ಊರಿನ ಯಜಮಾನನ ಪಾತ್ರದಲ್ಲಿ ಅಭಿನಯಿಸಿದ್ದು, ತಮ್ಮಣ್ಣ ಅವರು ದನಗಳ ವ್ಯಾಪಾರ ಮಾಡುವ ದಲ್ಲಾಳಿಯ ಪಾತ್ರ ನಿರ್ವಹಿಸಿದ್ದಾರೆ.


'Tarle Village' Releasing on December 16th

'ತರ್ಲೆ ವಿಲೇಜ್' ಚಿತ್ರವನ್ನ ನಿರ್ದೇಶನ ಮಾಡಿರುವುದು ಕೆ ಎಂ ರಘು. 'ಜೀವಿತಾ ಲಾಂಛನ'ದಲ್ಲಿ ಶಿವು ಎಸ್ ಬಿ ನಿರ್ಮಾಣ ಮಾಡಿದ್ದಾರೆ. ವೀರ್ ಸಮರ್ಥ ಅವರ ಸಂಗೀತ ಈ ಚಿತ್ರಕ್ಕಿದೆ. ಸಿದ್ದೇಗೌಡ ಚಿತ್ರಕ್ಕೆ ಕಥೆ ಬರೆದಿದ್ದು, ನಿರ್ದೇಶಕ ರಘು ಚಿತ್ರಕಥೆ ಮಾಡಿದ್ದಾರೆ.

English summary
Kannada Movie 'Tarle Village' has Releasing on December 16th. Actor Thammegowda S, Actor Channegowda, Actor Abhishek H N in the lead role. The movie is directed by KM Raghu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada