»   » ನಿಖಿಲ್ 'ಜಾಗ್ವಾರ್'ನಲ್ಲಿ ತೆಲುಗಿನ ಜಗಪತಿ ಬಾಬು ಮಿಂಚಿಂಗು

ನಿಖಿಲ್ 'ಜಾಗ್ವಾರ್'ನಲ್ಲಿ ತೆಲುಗಿನ ಜಗಪತಿ ಬಾಬು ಮಿಂಚಿಂಗು

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಅವರ ಸ್ಯಾಂಡಲ್ ವುಡ್ ಎಂಟ್ರಿ ಬಹಳ ಅದ್ಧೂರಿಯಾಗಿ ನೆರವೇರಿದೆ. ಇದೀಗ ನಿಖಿಲ್ ಅವರ 'ಜಾಗ್ವಾರ್' ಚಿತ್ರೀಕರಣಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಚಿತ್ರದಲ್ಲಿ ಯಾರು ಯಾರು ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಕ್ರಮೇಣ ಒಂದೊಂದಾಗಿ ಹೊರಬೀಳುತ್ತಿದೆ.

ಸದ್ಯಕ್ಕೆ ಸಿಕ್ಕಿರುವ ಮೊದಲ ಲಿಸ್ಟ್ ನಲ್ಲಿ ತೆಲುಗಿನ ಖ್ಯಾತ ನಟ ಜಗಪತಿ ಬಾಬು, ಸಾಧುಕೋಕಿಲ, ಅವಿನಾಶ್ ಸೇರಿದಂತೆ ಹಲವರು ಸ್ಥಾನ ಪಡೆದುಕೊಂಡಿದ್ದಾರೆ.[ಚಿತ್ರಗಳು ; ನಿಖಿಲ್ ಗ್ರ್ಯಾಂಡ್ ಎಂಟ್ರಿಗೆ ಸಾಕ್ಷಿಯಾದ ಗಣ್ಯರು]

Telugu Actor Jagapathi Babu to Act in Nikhil Kumar's 'Jaguar'

ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್' ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲೂ ಏಕಕಾಲದಲ್ಲಿ ತೆರೆ ಕಾಣುತ್ತಿರುವ ವಿಷಯ ನಿಮಗೆ ತಿಳಿದೇ ಇದೆ. ಆದ್ದರಿಂದ ಅದೇ ಕಾರಣಕ್ಕಾಗಿ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಪರಿಚಯ ಇರುವ ಕಲಾವಿದರನ್ನು ಅಭಿನಯಕ್ಕೆ ಆಹ್ವಾನಿಸಲಾಗಿದೆ.[ನಿಖಿಲ್ ಕುಮಾರ್ ಜೊತೆ ಡ್ಯುಯೆಟ್ ಹಾಡುವ ಬೆಡಗಿ ಯಾರು?]

ಇನ್ನು ಕೆಲವು ಕಲಾವಿದರು ಎರಡೂ ಭಾಷೆಗಳಲ್ಲಿ ನಟಿಸಿದರೆ, ಕೆಲವು ದೃಶ್ಯಗಳಲ್ಲಿ ಆಯಾ ಭಾಷೆಯ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಕನ್ನಡದಲ್ಲಿ ಕಾಮಿಡಿ ನಟ ಸಾಧುಕೋಕಿಲ ಮಾಡಿದ ಪಾತ್ರವನ್ನು ತೆಲುಗಿನಲ್ಲಿ ಬ್ರಹ್ಮಾನಂದಂ ಅವರು ನಿರ್ವಹಿಸಲಿದ್ದಾರೆ. ತೆಲುಗಿನಲ್ಲಿ ದೊಡ್ಡ ಕಲಾವಿದರು ಮಾಡುವ ಪಾತ್ರವನ್ನು ಕನ್ನಡದಲ್ಲಿ ಅವಿನಾಶ್ ಮಾಡಲಿದ್ದಾರೆ.

Telugu Actor Jagapathi Babu to Act in Nikhil Kumar's 'Jaguar'

ಆದರೆ ವಿಶೇಷವಾಗಿ ಜಗಪತಿ ಬಾಬು ಅವರು ಮಾತ್ರ ಎರಡು ಭಾಷೆಗಳಲ್ಲಿ ಅದೇ ಪಾತ್ರವನ್ನು ನಿರ್ವಹಿಸುತ್ತಿರುವುದು ವಿಶೇಷ. ಅಂದಹಾಗೆ ಜಗಪತಿ ಬಾಬು ಅವರಿಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈಗಾಗಲೇ ಕಿಚ್ಚ ಸುದೀಪ್ ಅವರ 'ಬಚ್ಚನ್' ಚಿತ್ರದಲ್ಲಿ ನಟಿಸಿ ಕನ್ನಡ ಸಿನಿರಸಿಕರ ಮನಗೆದ್ದಿದ್ದರು.[ನಿಖಿಲ್ ಕುಮಾರ್ 'ಜಾಗ್ವಾರ್' ಸ್ಪೆಷಾಲಿಟೀಸ್ ಏನು ಗೊತ್ತಾ?]

ಇದೀಗ ಮತ್ತೆ 'ಜಾಗ್ವಾರ್' ಸಿನಿಮಾದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಇದುವರೆಗೂ ಸುಮಾರು 120 ಸಿನಿಮಾಗಳಲ್ಲಿ ನಟಿಸಿರುವ ನಟ ಜಗಪತಿ ಬಾಬು ಅವರು 'ಜಾಗ್ವಾರ್' ಸಿನಿಮಾದಲ್ಲಿ ಮಾತ್ರ ವಿಭಿನ್ನವಾಗಿ, ಇಲ್ಲಿಯವರೆಗೂ ಮಾಡದಿರುವ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

English summary
Telugu actor Jagapathi Babu has been roped in to play a prominent role in Nikhil Kumar's 'Jaguar' which was launched last week. Jagapathi Babu will play the same role in Kannada as well as Telugu versions.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada