For Quick Alerts
  ALLOW NOTIFICATIONS  
  For Daily Alerts

  ತೆಲುಗು ಗೋವಿಂದಾಯ ನಮಃ ಸದ್ದಿಲ್ಲದಂತೆ ರೆಡಿ

  By Rajendra
  |
  ಕನ್ನಡ ಪ್ರೇಕ್ಷಕರ ಪ್ಯಾರಿ ಪ್ಯಾರಿ ಸಿನಿಮಾ 'ಗೋವಿಂದಾಯ ನಮಃ'. 2012ನೇ ಸಾಲಿನಲ್ಲಿ ಭರ್ಜರಿ ಹಿಟ್ ದಾಖಲಿಸಿದ ಈ ಚಿತ್ರಕ್ಕೆ ಪವನ್ ವಡೆಯರ್ ಆಕ್ಷನ್ ಕಟ್ ಹೇಳಿದ್ದರು. ಈಗ ತೆಲುಗು ರೀಮೇಕ್ ಸಹ ಸದ್ದಿಲ್ಲದಂತೆ ರೆಡಿಯಾಗಿದೆ. (ಗೋವಿಂದಾಯ ನಮಃ ಚಿತ್ರ ವಿಮರ್ಶೆ)

  ತೆಲುಗು ಚಿತ್ರಕ್ಕೆ ಮೂಲ ಚಿತ್ರವನ್ನು ನಿರ್ದೇಶಿದ್ದ ಪವನ್ ಆಕ್ಷನ್ ಕಟ್ ಹೇಳಿರುವುದು ವಿಶೇಷ. ಚಿತ್ರದ ಪಾತ್ರವರ್ಗದಲ್ಲಿ ತೆಲುಗು ನಟ ಮೋಹನ್ ಬಾಬು ಅವರ ಪುತ್ರ ಮಂಚು ಮನೋಜ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಸಾಕ್ಷಿ ಚೌದರಿ, ಸಿಮ್ರಾನ್ ಮುಂಡಿ, ಅನುಪ್ರಿಯಾ ಚಿತ್ರದ ನಾಯಕಿಯರು.

  ಇದು ತೆಲುಗು ಚಿತ್ರವಾದರೂ ಬಿಜಾಪುರ, ಬೆಂಗಳೂರುನಲ್ಲಿ ಬಹುತೇಕ ಭಾಗವನ್ನು ಚಿತ್ರೀಕರಿಸಿರುವುದು ವಿಶೇಷ. ರಾಮೋಜಿ ಫಿಲಂ ಸಿಟಿಯಲ್ಲೂ ಚಿತ್ರೀಕರಿಸಲಾಗಿದೆ. ಕೆಲವು ಸನ್ನಿವೇಶಗಳನ್ನು ಜೋಗ್ ಫಾಲ್ಸ್ ನಲ್ಲಿ ಚಿತ್ರೀಕರಿಸಲು ಪ್ಲಾನ್ ಮಾಡಲಾಗಿತ್ತು.

  ಆದರೆ ಅಲ್ಲಿ ಸಾಕಷ್ಟು ಹಸಿರು ಇಲ್ಲದ ಕಾರಣ ಶೂಟಿಂಗ್ ಕ್ಯಾನ್ಸಲ್ ಮಾಡಲಾಯಿತು. ಕಡೆಗೆ ಚಿತ್ರದ ಆತ್ಮಹತ್ಯೆ ದೃಶ್ಯಗಳನ್ನು ನಂದಿ ಬೆಟ್ಟದಲ್ಲಿ ಚಿತ್ರೀಕರಿಸಿಕೊಂಡೆವು ಎನ್ನುತ್ತಾರೆ ಪವನ್. ಈ ಚಿತ್ರವನ್ನು ನಿರ್ಮಿಸುತ್ತಿರುವವರು ಮೋಹನ್ ಬಾಬು. ಶೀಘ್ರದಲ್ಲೇ ರಿಲೀಸ್ ಆಗಲಿದೆ. (ಏಜೆನ್ಸೀಸ್)

  English summary
  Telugu version of 'Govindaya Namaha' has finished shooting for the film in a 50 day schedule directed by Pawan Wadeyar. The film is being produced by actor-politician Mohan Babu and will be released soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X