For Quick Alerts
  ALLOW NOTIFICATIONS  
  For Daily Alerts

  ಟೆನ್ನಿಸ್ ಕೃಷ್ಣ ಪುತ್ರ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ

  |

  ಇತ್ತೀಚಿಗಷ್ಟೆ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವಕಾಶ ಕೊರತೆ ಮಾತನಾಡಿದ ಬೇಸರ ಹಂಚಿಕೊಂಡಿದ್ದರು. ಅದೇನೇ ಇದ್ದರೂ, ಮತ್ತೊಂದು ಕಡೆ ಅವರ ಮಗನನ್ನು ಲಾಂಚ್ ಮಾಡುವ ತಯಾರಿ ಮಾಡಿದ್ದಾರೆ. ಟೆನ್ನಿಸ್ ಕೃಷ್ಣ ಪುತ್ರ ಅಪ್ಪನ ಹಾದಿಯಲ್ಲಿ ಚಿತ್ರರಂಗಕ್ಕೆ ಬರುತ್ತಿದ್ದಾರೆ.

  ಟೆನ್ನಿಸ್ ಕೃಷ್ಣ ಮಗ ನಾಗಾರ್ಜುನ್ ಅಪ್ಪನ ಸಿನಿಮಾಗಳನ್ನು ನೋಡಿ ಬೆಳೆದ ಹುಡುಗ. ಸಿನಿಮಾಗಳ ಬಗ್ಗೆ ಆಸಕ್ತಿ ಹೊಂದಿದ್ದ ನಾಗಾರ್ಜುನ್ ಇದೀಗ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಮಗನಿಗೆ ತಾವೇ ಸಿನಿಮಾವನ್ನು ಟೆನ್ನಿಸ್ ಕೃಷ್ಣ ನಿರ್ದೇಶನ ಮಾಡಲಿದ್ದಾರಂತೆ.

  ಹಿರಿಯ ಕಲಾವಿದರಿಗೆ ಅವಕಾಶವೇ ಕೊಡುತ್ತಿಲ್ಲ: ಟೆನ್ನಿಸ್ ಕೃಷ್ಣ ಬೇಸರ ಹಿರಿಯ ಕಲಾವಿದರಿಗೆ ಅವಕಾಶವೇ ಕೊಡುತ್ತಿಲ್ಲ: ಟೆನ್ನಿಸ್ ಕೃಷ್ಣ ಬೇಸರ

  ಕಲಾವಿದರ ಮಗ ಎಂಬ ಕಾರಣಕ್ಕೆ ಸುಮ್ಮನೆ ಚಿತ್ರರಂಗಕ್ಕೆ ಬರಲು ಸಾಧ್ಯ ಆಗುವುದಿಲ್ಲ. ಹೀಗಾಗಿ, ನಟನೆಗೆ ಬೇಕಾದ ತಯಾರಿ, ಡ್ಯಾನ್ಸ್ ಎಲ್ಲವನ್ನು ನಾಗಾರ್ಜುನ್ ಕಲಿತಿದ್ದಾರಂತೆ. ಅಪ್ಪ ಹಾಸ್ಯ ನಟರಾಗಿ ಹೆಸರು ಮಾಡಿದ್ದು, ತಾವು ಹೀರೋ ಆಗಿ ಜನಪ್ರಿಯತೆ ಪಡೆಯಬೇಕು ಎನ್ನುವುದು ನಾಗಾರ್ಜುನ್ ಆಸೆ.

  ಮಗನ ಸಿನಿಮಾದ ಕಥೆ ಸಿದ್ಧ ಮಾಡಿಕೊಂಡಿದ್ದು, ಸದ್ಯ, ನಿರ್ಮಾಪಕರ ಹುಡುಕಾಟದಲ್ಲಿ ಟೆನ್ನಿಸ್ ಕೃಷ್ಣ ಇದ್ದಾರೆ. ಒಳ್ಳೆಯ ನಿರ್ಮಾಪಕರು ಸಿಕ್ಕರೆ, ಆದಷ್ಟು ಬೇಗ ಸಿನಿಮಾ ಶುರು ಆಗಲಿದೆ.

  ಟೆನ್ನಿಸ್ ಕೃಷ್ಣ ವೃತ್ತಿ ಬದುಕನ್ನ ಬದಲಿಸಿದ 'ವೀಕೆಂಡ್ ವಿತ್ ರಮೇಶ್'.!ಟೆನ್ನಿಸ್ ಕೃಷ್ಣ ವೃತ್ತಿ ಬದುಕನ್ನ ಬದಲಿಸಿದ 'ವೀಕೆಂಡ್ ವಿತ್ ರಮೇಶ್'.!

  ಚಿತ್ರರಂಗಕ್ಕೆ ತಂದೆಯ ರೀತಿ ಮಕ್ಕಳು ಕೂಡ ಸಿನಿಮಾ ಮಾಡುವ ಆಸೆಯಿಂದ ಬರುತ್ತಾರೆ. ಆದರೆ, ಈ ರೀತಿ ಬಂದವರಲ್ಲಿ ಯಶಸ್ಸು ಕೆಲವರಿಗೆ ಮಾತ್ರ ಸಿಕ್ಕಿದೆ. ಟೆನ್ನಿಸ್ ಕೃಷ್ಣ ಪುತ್ರ ಅದೃಷ್ಟ ಹೇಗಿದೆಯೋ ಕಾದು ನೋಡಬೇಕು.

  English summary
  Tennis Krishna will launching his son Nagarjun to the indusrty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X