»   » ನಾಗತಿಹಳ್ಳಿ ಚಂದ್ರಶೇಖರ್ ಟೆಂಟ್ ಶಾಲೆ ಆರಂಭ

ನಾಗತಿಹಳ್ಳಿ ಚಂದ್ರಶೇಖರ್ ಟೆಂಟ್ ಶಾಲೆ ಆರಂಭ

Posted By:
Subscribe to Filmibeat Kannada

ವಿದ್ಯಾರ್ಥಿಗಳಿಗೆ ಇನ್ನೇನು ಬೇಸಿಗೆ ರಜೆಗಳು ಶುರುವಾಗುತ್ತಿವೆ. ಸುಖಾಸುಮ್ಮನೆ ಕಾಲಹರಣ ಮಾಡುವುದಕ್ಕಿಂತ ಆ ಸಮಯದಲ್ಲಿ ಏನಾದರೂ ಕಲಿಯಬೇಕು ಎನ್ನುವವರಿಗೆ ಇಲ್ಲಿದೆ ನೋಡಿ ದಾರಿ. ಅದುವೇ ನಾಗತಿಹಳ್ಳಿ ಚಂದ್ರಶೇಖರ್ ಅವರ ಸಾರಥ್ಯದ 'ಟೆಂಟ್ ಸಿನಿಮಾ'.

ಹೊಸ ಕಲಾವಿದರಿಗೆ ನಾಗತಿಹಳ್ಳಿ ಸಿನಿಮಾ ಶಾಲೆಗೆ ಬೇಸಿಗೆ ಶಿಬಿರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಿನಿಮಾ ಮತ್ತು ಟಿವಿಯಲ್ಲಿ ಅಭಿನಯಿಸಲು ಕನಸು ಕಾಣುತ್ತಿರುವವರಿಗೆ ಇದೊಂದು ಸದಾವಕಾಶ. ಇಲ್ಲಿ ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ಆಸಕ್ತರಿಗೂ ವಿವಿಧ ರೀತಿಯ ಕೋರ್ಸ್ ಗಳಿವೆ.

ವಾರಾಂತ್ಯ ಅಭಿನಯ ಕೋರ್ಸ್: ಇದರ ಅವಧಿ 3 ತಿಂಗಳು. ಏಪ್ರಿಲ್ 11, 2015 ರಿಂದ ಜುಲೈ 11, 2015ರ ತನಕ. ಪ್ರತಿ ಶನಿವಾರ ಸಂಜೆ 5 ರಿಂದ ರಾತ್ರಿ 9ರವರೆಗೆ. ಪ್ರತಿ ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ತರಗತಿಗಳು ನಡೆಯಲಿವೆ. 16 ವರ್ಷ ಮೇಲ್ಪಟ್ಟವರಿಗೆ ಪ್ರವೇಶ.

Tent Cinema invites application for acting course

ಪೂರ್ಣಾವಧಿ ಅಭಿನಯ ಕೋರ್ಸ್: ಮೇ 4 ರಿಂದ ಜೂನ್ 3, 2015ರ ತನಕ. ಅವಧಿ 1 ತಿಂಗಳು ಪ್ರತಿದಿನ ಬೆಳಗ್ಗೆ 8ರಿಂದ ಸಂಜೆ 5ರತನಕ. ಇಲ್ಲಿ ತರಬೇತಿ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಸ್ಥೆಯು ನಿರ್ಮಿಸಲಿರುವ ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ಆದ್ಯತೆಗೆ ಅನುಗುಣವಾಗಿ ಅವಕಾಶ ನೀಡಲಾಗುತ್ತದೆ.

ಮಕ್ಕಳ ಬೇಸಿಗೆ ಶಿಬಿರ: ಏಪ್ರಿಲ್ 6ರಿಂದ 25, 2015ರತನಕ. ಅವಧಿ 3 ವಾರಗಳು, ಸೋಮವಾರದಿಂದ ಶನಿವಾರದವರೆಗೆ. ಸಮಯ ಬೆಳಗ್ಗೆ 10 ರಿಂದ ಸಂಜೆ 4 ಗಂಟೆತನಕ. ವಯೋಮಿತಿ 8 ರಿಂದ 15 ವರ್ಷಗಳ ಒಳಗಿನ ಮಕ್ಕಳಿಗಾಗಿ.

ಸ್ಥಳ: ನಂ.187, ಟೆಂಟ್ ಸಿನಿಮಾ, ನಾಗತಿಹಳ್ಳಿ ಸಿನಿಮಾ ಶಾಲೆ, 'ಲಿರಿಕ್ಸ್', 3ನೇ ಮಹಡಿ, 17ನೇ ಮುಖ್ಯ ರಸ್ತೆ ಬನಶಂಕರಿ 2ನೇ ಹಂತ. ಮಾಹಿತಿಗೆ: 080 -65695500/ 26716393, 99005 55255. ವೆಬ್ ಸೈಟ್: www.tentcinema.com. (ಫಿಲ್ಮಿಬೀಟ್ ಕನ್ನಡ)

English summary
Tent Cinema, a Nagathihalli film school conducting acting workshop for Adults 16 & above and children. Intensive acting course, weekend acting course, summer acting workshop for children. More details contact: 99005 55255.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada