ತಂದೆ ಸುಧೀರ್ ಹೆಸರಿಗೆ ಹೆಮ್ಮೆ ತಂದ ಪುತ್ರ ತರುಣ್ ಸುಧೀರ್

By Harshitha

Recommended Video

ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ ತರುಣ್ ಸುಧೀರ್ ..!!

65ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಪ್ರದಾನ ಸಮಾರಂಭ ಮೊನ್ನೆಯಷ್ಟೇ ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ಜರುಗಿತು. ಕನ್ನಡದ 'ಚೌಕ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ತರುಣ್ ಸುಧೀರ್ 'ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿ ಸ್ವೀಕರಿಸಿದ್ದಾರೆ.

ಇಂಟ್ರೆಸ್ಟಿಂಗ್ ಅಂದ್ರೆ, 'ಚೌಕ' ತರುಣ್ ಸುಧೀರ್ ನಿರ್ದೇಶನ ಮಾಡಿದ ಚೊಚ್ಚಲ ಚಿತ್ರ. ಮೊದಲ ಚಿತ್ರಕ್ಕೆ 'ಫಿಲ್ಮ್ ಫೇರ್ ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿ ಪಡೆದ ತರುಣ್ ಸುಧೀರ್ ಸಿಕ್ಕಾಪಟ್ಟೆ ಸಂತಸಗೊಂಡಿದ್ದಾರೆ.

Tharun Sudhir dedicates his award to his Father Sudhir

ಹಾಗ್ನೋಡಿದ್ರೆ, ದಿವಂಗತ ನಟ ಸುಧೀರ್ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಪೋಷಿಸಿದ್ದಾರೆ. ಆದ್ರೆ, ಅವರಿಗೆ ಯಾವುದೇ ಪ್ರಶಸ್ತಿ ಸಿಕ್ಕಿರಲಿಲ್ಲ. ಪ್ರಶಸ್ತಿ ಲಭಿಸಿಲ್ಲ ಎಂಬ ತಂದೆಯ ಕೊರಗನ್ನು ನಿರ್ದೇಶಕ ತರುಣ್ ಸುಧೀರ್ ನೀಗಿಸಿದ್ದಾರೆ.

ತಮ್ಮ ಫಿಲ್ಮ್ ಫೇರ್ ಪ್ರಶಸ್ತಿಯನ್ನ 'ವಿಶ್ವ ತಂದೆಯರ ದಿನ'ದಂದು ತಮ್ಮ ತಂದೆಗೆ ಅರ್ಪಿಸಿದ್ದಾರೆ ತರುಣ್ ಸುಧೀರ್.

''ನನ್ನ ತಂದೆ 350 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದ್ರೆ, ಒಂದೇ ಒಂದು ಪ್ರಶಸ್ತಿ ಕೂಡ ಲಭಿಸಲಿಲ್ಲ ಎಂಬ ಕೊರಗು ಅವರನ್ನ ಕಾಡಿತ್ತು. 'ಅಪ್ಪಂದಿರ ದಿನಾಚರಣೆ'ಯಂದು ಈ ಪ್ರಶಸ್ತಿ ನನ್ನ ಕೈಯಲ್ಲಿದೆ. ''ಅಪ್ಪ ಈ ಪ್ರಶಸ್ತಿ ನಿನಗೆ'' ಎಂದು ಹೆಮ್ಮೆಯಿಂದ ಹೇಳುವೆ'' ಎಂದು ತರುಣ್ ಸುಧೀರ್ ತಮ್ಮ ತಂದೆಯನ್ನ ನೆನೆದು ಟ್ವೀಟ್ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟ ಸುಧೀರ್ ನಮ್ಮನ್ನೆಲ್ಲ ಅಗಲಿ 18 ವರ್ಷಗಳು ಉರುಳಿದೆ. ಅಂದಿನಿಂದ ಇಂದಿನವರೆಗೂ ಅಪ್ಪನ ಹಾದಿಯಲ್ಲೇ ಮಕ್ಕಳು ಸಾಗುತ್ತಿದ್ದಾರೆ.

More from Filmibeat

English summary
Kannada Director Tharun Sudhir dedicates his Filmfare Best Actor award to his Father Late.Sudhir.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X