Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
''ರಾಬರ್ಟ್ ಪೋಸ್ಟರ್ ನಕಲಿ ಅಲ್ಲ'' - ತರುಣ್ ಸುಧೀರ್ ಸ್ಪಷ್ಟನೆ
ನಿನ್ನೆ ಈದ್ ಹಬ್ಬದ ವಿಶೇಷವಾಗಿ 'ರಾಬರ್ಟ್' ಸಿನಿಮಾದ ಥೀಮ್ ಪೋಸ್ಟರ್ ಬಿಡುಗಡೆಯಾಗಿತ್ತು. ದರ್ಶನ್ ಅಭಿಮಾನಿಗಳು ಪೋಸ್ಟರ್ ಕಂಡು ಸಿಕ್ಕಾಪಟ್ಟೆ ಖುಷಿಯಾಗಿದ್ದರು.
'ರಾಬರ್ಟ್' ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರ ಇನ್ನೂ ಪ್ರಾರಂಭದ ಹಂತದಲ್ಲೇ ದೊಡ್ಡ ಕ್ರೇಜ್ ಸೃಷ್ಟಿ ಮಾಡಿದೆ. ಆದರೆ, ಇದೀಗ ಬಂದ ಹೊಸ ಪೋಸ್ಟರ್ ಬೇರೆಯದ್ದೇ ಕಾರಣಕ್ಕೆ ಸುದ್ದಿ ಮಾಡುತ್ತಿದೆ.
ಅಭಿಮಾನಿಗಳ ಮುಂದೆ 'ರಾಬರ್ಟ್' ಥೀಮ್ ಪೋಸ್ಟರ್
ಬೈಕ್ ಮೇಲೆ ದರ್ಶನ್ ಕುಳಿತಿರುವ ಚಿತ್ರದ ಪೋಸ್ಟರ್ ನಕಲಿ ಎನ್ನುವ ಸುದ್ದಿ ಇದೀಗ ಹರಿದಾಡುತ್ತಿದೆ. ಈ ಪೋಸ್ಟರ್ ಬೇರೊಂದು ಫೋಟೋಗೆ ಹೋಲಿಕೆ ಆಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಪೋಸ್ಟ್ ಗಳು ಕಂಡು ಬರುತ್ತಿದೆ. ಈ ಸಂಗತಿ ಕೆಲ ಅಭಿಮಾನಿಗಳಿಗೆ ಬೇಸರ ತರುವಂತೆಯೂ ಮಾಡಿರಬಹುದು.
ಹಾಗಾದರೆ, 'ರಾಬರ್ಟ್' ಪೋಸ್ಟರ್ ಕಾಪಿ ಮಾಡಲಾಗಿದ್ಯಾ?. ಖಂಡಿತ ಇಲ್ಲ ಎನ್ನುತ್ತಾರೆ ನಿರ್ದೇಶಕ ತರುಣ್ ಸುಧೀರ್. ಅಂದಹಾಗೆ, ಪೋಸ್ಟರ್ ಗೊಂದಲದ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ಕ್ಕೆ ಅವರು ಸ್ವಷ್ಟನೆ ನೀಡಿದ್ದಾರೆ. ಮುಂದೆ ಓದಿ.....

ಏನಿದು ಪೋಸ್ಟರ್ ಗೊಂದಲ ?
'ರಾಬರ್ಟ್' ಚಿತ್ರದ ಹೊಸ ಪೋಸ್ಟರ್ ನಿನ್ನೆ (ಬುದವಾರ) ಬಿಡುಗಡೆಯಾಗಿದೆ. ಪೋಸ್ಟರ್ ನಲ್ಲಿ ದರ್ಶನ್ ಬೈಕ್ ಮೇಲೆ ಕುಳಿತಿದ್ದಾರೆ. ಹಿಂದಿನಿಂದ ಆ ಚಿತ್ರ ತೆಗೆಯಲಾಗಿದೆ. ಅದೇ ರೀತಿಯ ಫೋಟೋವನ್ನು ಹಾಲಿವುಡ್ ನಟ ಡ್ವೇಯ್ನ್ ಜಾನ್ಸನ್ ಕೆಲ ದಿನಗಳ ಹಿಂದೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಎರಡು ಫೋಟೋಗಳು ಈಗ ಹೋಲಿಕೆ ಆಗುತ್ತಿದೆ.
ನಟ ಡ್ವೇಯ್ನ್ ಜಾನ್ಸನ್ ಫೋಟೋ
ನಟ ಡ್ವೇಯ್ನ್ ಜಾನ್ಸನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೇ 15 ರಂದು ಒಂದು ಫೋಟೋ ಹಾಕಿದ್ದರು. ಆ ಫೋಟೋದ ರೀತಿಯ ಬೈಕ್, ಅದೇ ರೀತಿ ಹಿಂದೆಯಿಂದ ತೆಗೆದ ಫೋಟೋ, ಕುಳಿತಿರುವ ಸ್ಟೈಲ್ ಹೀಗೆ ಕೆಲವು ಅಂಶಗಳು 'ರಾಬರ್ಟ್' ಪೋಸ್ಟರ್ ನಲ್ಲಿಯೂ ಇದೆ. ಈ ಕೆಲವು ಹೋಲಿಕೆಗಳನ್ನು ಕಂಡು ಪೋಸ್ಟರ್ ಕಾಪಿ ಮಾಡಲಾಗಿದೆ ಎನ್ನುವ ಸುದ್ದಿ ಶುರುವಾಗಿದೆ.
'ರಾಬರ್ಟ್' ಸೆಟ್ ನಲ್ಲಿ ಮೊಬೈಲ್ ಬ್ಯಾನ್ : ಫೋಟೋ, ವಿಡಿಯೋಗೆ ಕಡಿವಾಣ

ನಿರ್ದೇಶಕ ತರುಣ್ ಸುಧೀರ್ ಸ್ವಷ್ಪನೆ
'ರಾಬರ್ಟ್' ಚಿತ್ರದ ನಿರ್ದೇಶಕ ತರುಣ್ ಸುಧೀರ್ ಪೋಸ್ಟರ್ ಗೊಂದಲದ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿದ್ದಾರೆ. ''ನಟ ಡ್ವೇಯ್ನ್ ಜಾನ್ಸನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆ ಫೋಟೋ ಹಾಕಿದ್ದು, ಮೇ 15 ರಂದು. ಆದರೆ, ನಾವು ಮೇ 6 ರಂದೇ ನಮ್ಮ ಪೋಸ್ಟರ್ ಶೂಟ್ ಮುಗಿಸಿದ್ದೆವು. ಹೀಗಾಗಿ ಇದು ಕಾಪಿ ಮಾಡಿದ್ದು ಅಲ್ಲ'' ಎಂದಿದ್ದಾರೆ.

ಇದು ಕಾಕತಾಳಿಯ ಅಷ್ಟೇ
''ನಾವು ಮೊದಲೇ ಪೋಸ್ಟರ್ ಶೂಟ್ ಮಾಡಿದ್ದೆವು. ಆದರೆ, ಪೋಸ್ಟರ್ ಬಿಡುಗಡೆಗೆ ಮುಂಚೆ ಅದೇ ರೀತಿಯ ಫೋಟೋವನ್ನು ನಟ ಡ್ವೇಯ್ನ್ ಜಾನ್ಸನ್ ಅಪ್ ಲೋಡ್ ಮಾಡಿದ್ದಾರೆ. ಇದು ಕಾಕತಾಳಿಯ ಅಷ್ಟೇ'' ಎನ್ನುವ ಮೂಲಕ ಪೋಸ್ಟರ್ ಬಗ್ಗೆ ಇದ್ದ ಗೊಂದಲವನ್ನು ನಿವಾರಿಸಿದ್ದಾರೆ.

ಪೋಸ್ಟರ್ ಡಿಸೈನ್ ಮಾಡಿದ್ದು ಯಾರು?
'ರಾಬರ್ಟ್' ಸಿನಿಮಾದ ಪೋಸ್ಟರ್ ಅನ್ನು ಆದರ್ಶ್ ಮೋಹನ್ ದಾಸ್ ಎನ್ನುವವರು ಡಿಸೈನ್ ಮಾಡಿದ್ದಾರೆ. ಚಿತ್ರತಂಡದ ಜೊತೆಗೆ ಸಾಕಷ್ಟು ಪ್ಲಾನ್ ಮಾಡಿ ಈ ಪೋಸ್ಟರ್ ಮಾಡಲಾಗಿದೆ. ಚಿತ್ರದ ಬಗ್ಗೆ ಕೆಲವು ಸುಳಿವುಗಳನ್ನು ಪೋಸ್ಟರ್ ನೀಡುತ್ತಿದೆ. ಈ ಹಿಂದೆ ಬಂದ ಪೋಸ್ಟರ್ ಅನ್ನು ದರ್ಶನ್ ಅಭಿಮಾನಿ ಪರಿ ಬರೆದಿದ್ದರು.