For Quick Alerts
  ALLOW NOTIFICATIONS  
  For Daily Alerts

  ರಾಬರ್ಟ್ ಬಿಡುಗಡೆ ಬಗ್ಗೆ ಸ್ಪಷ್ಟನೆ ನೀಡಿದ ತರುಣ್: ವಿಳಂಬ ಮಾಡ್ತಿರೋದಕ್ಕೆ ಕಾರಣವೇನು?

  |

  ಲಾಕ್‌ಡೌನ್ ಬಳಿಕ ಚಿತ್ರೋಧ್ಯಮ ಸುಧಾರಿಸುತ್ತಿದೆ. ಸಿನಿಮಾಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳು, ಶೂಟಿಂಗ್, ಪ್ರೆಸ್ ಮೀಟ್, ಪ್ರಚಾರ ಎಲ್ಲವೂ ಆರಂಭವಾಗಿದೆ. ಪ್ರತಿವಾರವೂ ಹೊಸಬರ ಚಿತ್ರಗಳು ಚಿತ್ರಮಂದಿರಕ್ಕೆ ಬರ್ತಿದೆ. ಆದ್ರೆ, ಸ್ಟಾರ್ ನಟರ ಚಿತ್ರಗಳು ಥಿಯೇಟರ್‌ಗೆ ಬರ್ತಿಲ್ಲ ಎಂಬ ಬೇಸರ ಅಭಿಮಾನಿಗಳಿಗಿದೆ.

  Roberrt Release ಲೇಟ್ ಆಗ್ತಾ ಇರೋದಕ್ಕೆ ಕಾರಣ ಹೇಳಿದ Tarun Sudhir | Filmibeat Kannada

  ರಾಬರ್ಟ್, ಕೋಟಿಗೊಬ್ಬ 3, ಯುವರತ್ನ, ಪೊಗರು, ಸಲಗ, ಭಜರಂಗಿ 2 ಹೀಗೆ ದೊಡ್ಡ ನಟರ ನಿರೀಕ್ಷೆಯ ಚಿತ್ರಗಳನ್ನು ನೋಡಲು ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಇದುವರೆಗೂ ಈ ಚಿತ್ರಗಳು ನಿರ್ಮಾಪಕರು ರಿಲೀಸ್ ಮಾಡಲು ಮನಸ್ಸು ಮಾಡಿಲ್ಲ. ಇದೀಗ, ರಾಬರ್ಟ್ ರಿಲೀಸ್ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ....

  'ಸಿನಿಮಾ ರಿಲೀಸ್ ಮಾಡಿ' ಎಂದು ದೊಡ್ಡ ನಿರ್ಮಾಪಕರಿಗೆ ರವಿಚಂದ್ರನ್ ಆಗ್ರಹ'ಸಿನಿಮಾ ರಿಲೀಸ್ ಮಾಡಿ' ಎಂದು ದೊಡ್ಡ ನಿರ್ಮಾಪಕರಿಗೆ ರವಿಚಂದ್ರನ್ ಆಗ್ರಹ

  ರಿಲೀಸ್ ದಿನಾಂಕ ಇನ್ನು ಅಂತಿಮ ಆಗಿಲ್ಲ

  ರಿಲೀಸ್ ದಿನಾಂಕ ಇನ್ನು ಅಂತಿಮ ಆಗಿಲ್ಲ

  ಜನವರಿಯಲ್ಲಿ ದೊಡ್ಡ ಪಾಜೆಕ್ಟ್‌ಗಳು ತೆರೆಗೆ ಬರಬಹುದು ಎಂಬ ನಿರೀಕ್ಷೆಗೆ ರಾಬರ್ಟ್ ನಿರ್ದೇಶಕ ಸ್ಪಷ್ಟನೆ ನೀಡಿದ್ದಾರೆ. 'ಸದ್ಯಕ್ಕೆ ಸಿನಿಮಾ ಬಿಡುಗಡೆಯ ಅಂತಿಮ ದಿನಾಂಕ ನಿಗದಿ ಮಾಡಿಲ್ಲ. ರಿಲೀಸ್ ಬಗ್ಗೆ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಿರ್ಧಾರ ಮಾಡ್ತಾರೆ'' ಎಂದು ಮಾಹಿತಿ ನೀಡಿದ್ದಾರೆ.

  ಸ್ಯಾಂಡಲ್ ವುಡ್ ನ ಹೊಸ 'ಗುರು ಶಿಷ್ಯರು' ಇವರೇ ನೋಡಿಸ್ಯಾಂಡಲ್ ವುಡ್ ನ ಹೊಸ 'ಗುರು ಶಿಷ್ಯರು' ಇವರೇ ನೋಡಿ

  ಬರೋಕೆ ನಾವು ರೆಡಿ ಇದ್ದೇವೆ

  ಬರೋಕೆ ನಾವು ರೆಡಿ ಇದ್ದೇವೆ

  ''ಕಳೆದ ಏಪ್ರಿಲ್‌ ತಿಂಗಳಲ್ಲಿ ರಾಬರ್ಟ್ ಬಿಡುಗಡೆಯಾಗಬೇಕಿತ್ತು. ನಾವು ಈಗಲೂ ಬರೋಕೆ ರೆಡಿ ಇದ್ದೇವೆ. ಆದ್ರೆ, ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿರುವ ನಿರ್ಮಾಪಕರ ಬಗ್ಗೆ ಯೋಚನೆ ಮಾಡಬೇಕು. ಶೇಕಡಾ 50 ರಷ್ಟು ಜನರಿಗೆ ಅವಕಾಶ ಕೊಟ್ಟಿದ್ದಾರೆ. ಹಾಕಿದ ಬಂಡವಾಳ ವಾಪಸ್ ಬರಬೇಕು ಅಲ್ವೇ. ಆ ಕುರಿತು ಯೋಚನೆ ಮಾಡ್ಬೇಕು'' ಎಂದು ತರುಣ್ ಸುಧೀರ್ ಹೇಳಿದ್ದಾರೆ.

  ಬ್ಲೂ ಪ್ರಿಂಟ್ ಸಿದ್ಧವಿದೆ

  ಬ್ಲೂ ಪ್ರಿಂಟ್ ಸಿದ್ಧವಿದೆ

  ರಾಬರ್ಟ್ ಸಿನಿಮಾ ರಿಲೀಸ್ ನಾವು ಎಲ್ಲ ಸಿದ್ಧತೆ ನಡೆಸಿದ್ದೇವೆ. ಆ ಸಂಬಂಧ ಬ್ಲೂ ಪ್ರಿಂಟ್ ಸಹ ರೆಡಿ ಇದೆ. ಬಿಡುಗಡ ದಿನಾಂಕದ ಬಗ್ಗೆ ನಮಗೆ ಮೊದಲು ಸ್ಪಷ್ಟನೆ ಸಿಕ್ಕರೆ ಅದಕ್ಕೆ ಸಂಬಂಧಪಟ್ಟಂತೆ ಪ್ರಚಾರ, ಹಾಡುಗಳು, ಟ್ರೈಲರ್ ಎಲ್ಲವೂ ಬಿಡುಗಡೆ ಮಾಡ್ತೇವೆ. ದರ್ಶನ್, ಉಮಾಪತಿ ಬೈಕ್ ರೈಡ್ ಹೋಗಿ ಬಂದಿದ್ದಾರೆ. ಡಿಸೈಡ್ ಮಾಡ್ತೇವೆ'' ಎಂದು ತರುಣ್ ಮಾಹಿತಿ ನೀಡಿದ್ದಾರೆ.

  ಹೊಸ ಸಿನಿಮಾ ಘೋಷಿಸಿದ ತರುಣ್-ಶರಣ್

  ಹೊಸ ಸಿನಿಮಾ ಘೋಷಿಸಿದ ತರುಣ್-ಶರಣ್

  ನಟ ಶರಣ್ ಅವರ ಲಡ್ಡು ಸಿನಿಮಾಸ್ ಹಾಗೂ ತರುಣ್ ಸುಧೀರ್ ನಿರ್ಮಾಣದಲ್ಲಿ ಹೊಸ ಸಿನಿಮಾ ಘೋಷಣೆಯಾಗಿದೆ. ಈ ಚಿತ್ರಕ್ಕೆ 'ಗುರು ಶಿಷ್ಯರು' ಎಂದು ಹೆಸರಿಟ್ಟಿದ್ದು, ಫಸ್ಟ್ ಲುಕ್ ಸಹ ಬಿಡುಗಡೆಯಾಗಿದೆ.

  English summary
  Director Tharun Sudhir gives clarity about darshan starrer Roberrt release. A film produced by umapathi srinivas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X