»   » ಕಣ್ಸನ್ನೆ ಮಾಡಿದ್ದೇ ತಪ್ಪಾಯಿತು: ಮತ್ತೆ ಸಂಕಷ್ಟದಲ್ಲಿ ಪ್ರಿಯಾ ವಾರಿಯರ್

ಕಣ್ಸನ್ನೆ ಮಾಡಿದ್ದೇ ತಪ್ಪಾಯಿತು: ಮತ್ತೆ ಸಂಕಷ್ಟದಲ್ಲಿ ಪ್ರಿಯಾ ವಾರಿಯರ್

Posted By:
Subscribe to Filmibeat Kannada
ಮತ್ತೆ ಸಂಕಷ್ಟದಲ್ಲಿ ಪ್ರಿಯಾ ವಾರಿಯರ್ | Filmibeat Kannada

ಕಣ್ಸನ್ನೆಯ ಮೂಲಕ ಇಡೀ ದೇಶದೆಲ್ಲೆಡೆ ಸಂಚಲನ ಮೂಡಿಸಿದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಿಯಾ ವಿರುದ್ಧ ಮತ್ತೆ ಸುಪ್ರೀಂಕೋರ್ಟಿನಲ್ಲಿ ದೂರು ದಾಖಲಾಗಿದೆ.

ಇಸ್ಲಾಂ ಧರ್ಮದಲ್ಲಿ ಕಣ್ಣು ಹೊಡೆಯುವುದು ಹಾಗೂ ಹುಬ್ಬು ಹಾರಿಸುವುದು ನಿಷಿದ್ಧ, ಪ್ರಿಯಾ ಕಣ್ಸನ್ನೆ ಹಾಡಿನಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ. ಹಾಡಿನ ಸಾಹಿತ್ಯ ಹಾಗೂ ಚಿತ್ರದ ದೃಶ್ಯಗಳು ಆಕ್ಷೇಪಾರ್ಹವಾಗಿವೆ ಎಂದು ದೂರಲ್ಲಿ ಹೇಳಲಾಗಿದೆ.

ಪ್ರಿಯಾ ವಾರಿಯರ್ ವಿರುದ್ಧದ ತನಿಖೆಗೆ ತಡೆ ನೀಡಿದ ಸುಪ್ರೀಂಕೋರ್ಟ್

ಮತ್ತೊಂದೆಡೆ 'ಒರು ಅಡಾರ್ ಲವ್' ಚಿತ್ರ, ಪ್ರಿಯಾ ಪ್ರಕಾಶ್ ವಿರುದ್ಧ ಬರುತ್ತಿರುವ ದೂರುಗಳ ಬಗ್ಗೆ ಚಿತ್ರದ ನಿರ್ದೇಶಕ ಓಮರ್ ಲುಲು ಆಕ್ಷೇಪಿಸಿದ್ದಾರೆ. ಉತ್ತರ ಕೇರಳದ ಮಲಬಾರ್ ನಲ್ಲಿ ಪ್ರತಿ ಮದುವೆ ಸಮಾರಂಭದ ವೇಳೆ ಈ ಸಾಂಪ್ರದಾಯಿಕ ಹಾಡನ್ನು ಹಾಡಲಾಗುತ್ತದೆ. ಮಲಬಾರ್ ನ ಮುಸ್ಲಿಮರು 1978ರಿಂದಲೇ ಈ ಹಾಡನ್ನು ಹಾಡುತ್ತಿದ್ದಾರೆ. ಈವರೆಗೆ ಈ ಹಾಡು ಆಕ್ಷೇಪಾರ್ಹವಾಗಿರಲಿಲ್ಲ. ಸಿನಿಮಾದಲ್ಲಿ ಮಾತ್ರ ಏಕೆ ಆಕ್ಷೇಪಾರ್ಹ ಎಂದು ಚಿತ್ರದ ನಿರ್ದೇಶಕ ಪ್ರಶ್ನಿಸಿದ್ದಾರೆ.

The controversy around Priya Prakash Varrier

ಪ್ರಿಯಾ ಪ್ರಕಾಶ್ ಅವರ ವಿರುದ್ಧ ಮಾತ್ರ ದೂರು ನೀಡಿಲ್ಲ. ಈ ಚಿತ್ರದಲ್ಲಿ ಆ ಹಾಡಿನಲ್ಲಿ ಯಾರೇ ಅಭಿನಯಿಸಿದ್ದರೂ ನಮ್ಮ ಆಕ್ಷೇಪ ಇರುತ್ತಿತ್ತು. 'ಮಾಣಿಕ್ಯ ಮಲಯಾಯ ಪೂವಿ..' ಹಾಡಿನ ಸಾಹಿತ್ಯಕ್ಕೂ ಪ್ರವಾದಿ ಮೊಹಮ್ಮದರ ಜೀವನಕ್ಕೂ ಸಾಮ್ಯತೆ ಇದೆ, ಜತೆಗೆ ಮುಸ್ಲಿಂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಶಬ್ದಗಳಿವೆ ದೂರಿನಲ್ಲಿ ಹೇಳಲಾಗಿದೆ.

'ಒರು ಅಡಾರ್ ಲವ್' ಚಿತ್ರದಿಂದ ಮಾಣಿಕ್ಯ ಮಲರಾಯ ಪೂವಿ ಹಾಡನ್ನು ತೆಗೆದು ಹಾಕುವಂತೆ ಈ ಹಿಂದೆ ಕೂಡಾ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಪ್ರಿಯಾ ವಿರುದ್ಧ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ತಡೆ ನೀಡಿತ್ತು.

English summary
The controversy around Priya Prakash Varrier's debut movie Oru Adaar Love refuses to die down. A fresh plea has reportedly been filed in the Supreme Court seeking removal of Manikya Malaraaya Poovi song from the yet-to-be-released Malayalam film, claiming that winking is "forbidden in Islam."

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X