For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್ ಸೃಷ್ಟಿಸಿದ ಅಸಮಾನತೆ ಮೇಲೆ ಬೆಳಕು ಚೆಲ್ಲುವ 'ದಿ ಫೆನ್ಸ್'

  |

  ಲಾಕ್‌ಡೌನ್ ಎಲ್ಲರಿಗೂ ಒಂದೇ ರೀತಿ ಇರಲಿಲ್ಲ. ಲಾಕ್‌ಡೌನ್‌ ಸಮಯದಲ್ಲಿ ಮನೆಗಳಲ್ಲಿ ಡೊಲ್ಗಾನಾ ಕಾಫಿ ಮಾಡಿ ಕುಡಿಯುವ 'ಸೌಭಾಗ್ಯ' ಎಲ್ಲರದ್ದೂ ಅಲ್ಲ. ವಲಸೆ ಕಾರ್ಮಿಕರು ಅವರ ಕುಟುಂಬಗಳು ಅನುಭವಿಸಿದ ಕಷ್ಟಗಳು ಅವರಿಗಷ್ಟೆ ಗೊತ್ತು. ಆದರೆ ಸದ್ದು ಮಾಡಿದ್ದು ಮಾತ್ರ ಡೊಲ್ಗಾನಾ ಕಾಫಿ, ಪಾನಿಪುರಿ ರೆಸಿಪಿಗಳು.

  ಲಾಕ್‌ಡೌನ್, ಉಳ್ಳವರು, ಬಡವರ ನಡುವೆ ಇರುವ 'ಸಾಮಾಜಿಕ ಅಂತರ'ವನ್ನು ಇನ್ನಷ್ಟು ಸ್ಪಷ್ಟಗೊಳಿಸಿತು. ಅದರಲ್ಲಿಯೂ ಲಾಕ್‌ಡೌನ್ ಸೃಷ್ಟಿಸಿದ ಶೈಕ್ಷಣಿಕ ಅಂತರವಂತೂ ಬಹಳ ದೊಡ್ಡದು. ಸ್ಥಿತಿವಂತರು ಮೊಬೈಲ್, ಲ್ಯಾಪ್‌ಟಾಪ್ ಬಳಸಿ ಬೈಜೂಸ್‌ ಇನ್ನಿತರೆ ಅಪ್ಲಿಕೇಶನ್‌ಗಳ ಮೂಲಕ ಕಲಿತರೆ ಬಡವರ ಮಕ್ಕಳು ಅನ್ನ ಹುಟ್ಟಿಸಿಕೊಳ್ಳಲು ಪಾಡು ಪಡುತ್ತಾ ಶಿಕ್ಷಣದಿಂದ ಬಹುತೇಕ ದೂರವೇ ಉಳಿಯಬೇಕಾಯಿತು. ಇಂಥಹಾ ಸೂಕ್ಷ್ಮ ವಿಷಯವನ್ನಿಟ್ಟುಕೊಂಡು ನಿರ್ಮಿಸಲಾದ 'ದಿ ಫೆನ್ಸ್' ಕಿರುಚಿತ್ರ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು, ತನ್ನ ಸೂಕ್ಷ್ಮ ವಿಷಯ ವಸ್ತುವಿನಿಂದಾಗಿ ಗಮನ ಸೆಳೆಯುತ್ತಿದೆ.

  ಅರೋಚಿ ನಿರ್ದೇಶಿಸಿರುವ 'ದಿ ಫೆನ್ಸ್' ಕಿರುಚಿತ್ರ, ಸ್ಥಿತಿವಂತ ಹಾಗೂ ಸೌಕರ್ಯಹೀನ ಇಬ್ಬರು ವಿದ್ಯಾರ್ಥಿಗಳ ಬದುಕು ಲಾಕ್‌ಡೌನ್‌ನಲ್ಲಿ ಭಿನ್ನ ಹಾದಿ ಹಿಡಿವ ಬಗ್ಗೆ ಮಾತನಾಡುತ್ತದೆ. ಸ್ಥಿತಿವಂತ ಮನೆಯ ವಿದ್ಯಾರ್ಥಿ ಲಾಕ್‌ಡೌನಲ್ಲಿಯೂ ತಂತ್ರಜ್ಞಾನ ಬಳಸಿಕೊಂಡು ತನ್ನ ಗುರಿಯೆಡೆಗಿನ ಪಯಣ ಮುಂದುವರೆಸಿದರೆ, ಸೌಕರ್ಯಹೀನ ವಿದ್ಯಾರ್ಥಿ ಬದುಕು ನಡೆಸಲು ಕೂಲಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ.

  ಭಿನ್ನ ಹಾದಿ ಹಿಡಿವಂತೆ ಪ್ರೇರೇಪಿಸುವ ಲಾಕ್‌ಡೌನ್

  ಭಿನ್ನ ಹಾದಿ ಹಿಡಿವಂತೆ ಪ್ರೇರೇಪಿಸುವ ಲಾಕ್‌ಡೌನ್

  'ದಿ ಫೆನ್ಸ್' ಕಿರುಚಿತ್ರದಲ್ಲಿ ಎರಡು ಭಿನ್ನ ಸ್ಥರ, ವರ್ಗಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳನ್ನು ಪ್ರಧಾನವಾಗಿಟ್ಟುಕೊಂಡು ಲಾಕ್‌ಡೌನ್‌ನಲ್ಲಿ ಉಂಟಾದ ಸಾಮಾಜಿಕ ಬಹಿಷ್ಕಾರದ ವಿಷಯಗಳನ್ನು, ಮಾನವೀಯತೆ ಮರೆತ ಮುಖಗಳನ್ನು ಚಿತ್ರಿಸುವ ಪ್ರಯತ್ನ ಮಾಡಲಾಗಿದೆ. ಊರ ಗಡಿಗೆ ಬೇಲಿ ಹಾಕುವ, ಊರಿಗೆ ವಾಪಸ್ಸಾದ ವಲಸೆ ಕಾರ್ಮಿಕರನ್ನು ಊರು ಪ್ರವೇಶಿಸಲು ಬಿಡದೆ ಬಲವಂತದಿಂದ ಹೊರಗಟ್ಟಿದ ಪ್ರಸಂಗಗಳನ್ನೂ ಸಹ ಇಲ್ಲಿ ಅಟೆಂಡ್ ಮಾಡಲಾಗಿದೆ.

  ಕಡಿಮೆ ಸಂಪನ್ಮೂಲ ಬಳಸಿ ಕತೆ ಹೇಳಿದ್ದಾರೆ

  ಕಡಿಮೆ ಸಂಪನ್ಮೂಲ ಬಳಸಿ ಕತೆ ಹೇಳಿದ್ದಾರೆ

  ಕಡಿಮೆ ಸಂಪನ್ಮೂಲಗಳನ್ನು ಬಳಸಿ ಕತೆ ಹೇಳಿದ್ದಾರೆ ನಿರ್ದೇಶಕ ಅರೋಚಿ. ತಮ್ಮ ಸುತ್ತ-ಮುತ್ತ ಕಂಡ, ಗಮನಿಸಿದ ಘಟನೆಗಳಿಗೆ ದೃಶ್ಯದ ರೂಪವನ್ನು ಅವರು ನೀಡಿದ್ದಾರೆ. ಹಳ್ಳಿಗಳಲ್ಲಿ ಎದುರಿಸಲಾಗುತ್ತಿರುವ ನೆಟ್‌ವರ್ಕ್ ಸಮಸ್ಯೆ, ನೆಟ್‌ವರ್ಕ್‌ಗಾಗಿ ಕಿಲೋಮೀಟರ್‌ಗಟ್ಟಲೆ ಹೊಳೆ, ತೊರೆ ದಾಟಿ ಹೋಗುವ ಮಕ್ಕಳು. ವರ್ಕ್‌ ಫ್ರಂ ಹೋಮ್ ಉದ್ಯೋಗಿಗಳು ಎಲ್ಲರೂ ಕಿರುಚಿತ್ರದಲ್ಲಿ ಪಾತ್ರವಾಗಿ ತಮ್ಮ ಕಷ್ಟಗಳನ್ನು ದೃಶ್ಯಿಕವಾಗಿ ಹೇಳಿಕೊಂಡಿದ್ದಾರೆ.

  ಕಂಡು, ಕೇಳಿ, ಓದಿದ ವಿಷಯಗಳೇ ಸ್ಪೂರ್ತಿ: ಅರೋಚಿ

  ಕಂಡು, ಕೇಳಿ, ಓದಿದ ವಿಷಯಗಳೇ ಸ್ಪೂರ್ತಿ: ಅರೋಚಿ

  'ಫಿಲ್ಮೀಬೀಟ್‌' ಜೊತೆ ಮಾತನಾಡಿದ ಕಿರುಚಿತ್ರದ ನಿರ್ದೇಶಕ ಅರೋಚಿ, 'ಬೆಂಗಳೂರಿನಿಂದ ವಾಪಸ್ಸಾದಾಗ ಕಂಡ, ಕೇಳಿದ, ಪತ್ರಿಕೆಗಳಲ್ಲಿ ಓದಿದ ಘಟನೆಗಳೆ 'ದಿ ಫೆನ್ಸ್' ಕಿರುಚಿತ್ರ ಮಾಡಲು ಪ್ರೇರಣೆ. ವಲಸೆ ಕಾರ್ಮಿಕರು ಬರದಂತೆ ಹಳ್ಳಿಗಳಿಗೆ ಬೇಲಿ ಹಾಕುವ, ಊರ ಪ್ರವೇಶ ನಿರಾಕರಿಸಿಸುವ ಘಟನೆಗಳು ತೀರ ಅಮಾನವೀಯ ಎನಿಸಿತು. ಜೊತೆಗೆ ಮಲೆನಾಡು ಹಳ್ಳಿಗಳ ನೆಟ್‌ವರ್ಕ್ ಸಮಸ್ಯೆ, ಅದರಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು. ಇವೆಲ್ಲವೂ ಎಲ್ಲೋ ಕೂತವರಿಗೆ ಸರಳ ಸಮಸ್ಯೆ ಎನಿಸಿದರೂ ಆಳದಲ್ಲಿ ಇವುಗಳ ಪರಿಣಾಮ ಬಹಳ ಗಂಭೀರ ಹಾಗಾಗಿ ಈ ವಿಷಯದ ಮೇಲೆ ಕಿರುಚಿತ್ರ ನಿರ್ದೇಶಿಸಿದೆ'' ಎಂದಿದ್ದಾರೆ.

  Karnataka Unlock: Yediyurappa ಹೇಳಿಕೆ ಕೇಳಿ ನಿಟ್ಟುಸಿರು ಬಿಟ್ಟ ಚಿತ್ರರಂಗ | Filmibeat Kannada
  ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆದಿದ್ದಾರೆ

  ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆದಿದ್ದಾರೆ

  ಎರಡು ತಿಂಗಳ ಕಾಲ ಶ್ರಮವಹಿಸಿ ಈ ಕಿರುಚಿತ್ರ ನಿರ್ದೇಶಿಸಿದ್ದಾರೆ ಅರೋಚಿ. ಸ್ಥಳೀಯ ಮಕ್ಕಳು, ಊರ ಜನರೇ ಇಲ್ಲಿ ನಟರು. ಡಿಎಸ್‌ಎಲ್‌ಆರ್ ಕ್ಯಾಮೆರಾ ಬಳಸಿ ಚಿತ್ರೀಕರಿಸಲಾಗಿರುವ ಕಿರುಚಿತ್ರದ ಸಂಕಲನ ಮಾಡಿರುವುದು ಕಾರ್ತಿಕ್ ಕುರ್ಕುರೆ, ನಿರ್ಮಾಣ ಸುಧಾ ವೈ.ಎಂ., ಚಿತ್ರಕತೆ, ಸಂಭಾಷಣೆ, ನಿರ್ದೇಶನ ಮತ್ತು ಕ್ಯಾಮೆರಾ ಜವಾಬ್ದಾರಿಗಳನ್ನು ಅರೋಚಿಯೇ ನಿರ್ವಹಿಸಿದ್ದಾರೆ. ಗುಡ್ಡ, ಕಾಡು-ಮೇಡು ಅಲೆದು ಚಿತ್ರೀಕರಣ ಮಾಡಿರುವ ಚಿತ್ರತಂಡದ ಶ್ರಮ ಕಿರುಚಿತ್ರದಲ್ಲಿ ಕಾಣುತ್ತದೆ. ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆದಿದೆ ಈ ತಂಡ.

  English summary
  Arochi directed short movie 'The Fence' talks about lockdown and social stigma. Movie available on YouTube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X