»   » 'ದಿ ವಿಲನ್' ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ ಅಭಿನಯ ಚಕ್ರವರ್ತಿ ಸುದೀಪ್

'ದಿ ವಿಲನ್' ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ ಅಭಿನಯ ಚಕ್ರವರ್ತಿ ಸುದೀಪ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ 'ದಿ ವಿಲನ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನಿನ್ನೆ (ಏಪ್ರಿಲ್ 1) ಬಿಡುಗಡೆ ಆಗಿದೆ. 'ದಿ ವಿಲನ್' ಪೋಸ್ಟರ್ ನೋಡಿ 'ರಾಮ ಯಾರು.?', 'ರಾವಣ ಯಾರು.?' ಅಂತ ಸಿನಿ ಪ್ರಿಯರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.['ದಿ ವಿಲನ್' ಫಸ್ಟ್ ಲುಕ್ ರಿಲೀಸ್: ರಾಮ ಯಾರು? ರಾವಣ ಯಾರು?]

ಮೊದಲ ನೋಟದಲ್ಲಿಯೇ ಕುತೂಹಲ ಕೆರಳಿಸಿರುವ 'ದಿ ವಿಲನ್' ಚಿತ್ರದ ಚಿತ್ರೀಕರಣ ನಾಳೆಯಿಂದ (ಏಪ್ರಿಲ್ 3) ಆರಂಭವಾಗಲಿದೆ. ಹೊಸ ಹೇರ್ ಸ್ಟೈಲ್ ನೊಂದಿಗೆ 'ದಿ ವಿಲನ್' ಚಿತ್ರತಂಡವನ್ನ ಅಭಿನಯ ಚಕ್ರವರ್ತಿ ಸುದೀಪ್ ಸೇರಿಕೊಳ್ಳಲಿದ್ದಾರೆ.

'ದಿ ವಿಲನ್' ಚಿತ್ರೀಕರಣಕ್ಕೆ ಕ್ಷಣಗಣನೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ತೆರೆ ಹಂಚಿಕೊಳ್ಳುತ್ತಿರುವ ಬಿಗ್ ಬಜೆಟ್ ಸಿನಿಮಾ 'ದಿ ವಿಲನ್' ಚಿತ್ರದ ಶೂಟಿಂಗ್ ನಾಳೆಯಿಂದ (ಏಪ್ರಿಲ್ 3, ಸೋಮವಾರ) ಬೆಂಗಳೂರಿನಲ್ಲಿ ಆರಂಭವಾಗಲಿದೆ.

ಮೊದಲ ಶೆಡ್ಯೂಲ್ ಗೆ ಸುದೀಪ್ ಅಣಿ

'ದಿ ವಿಲನ್' ಚಿತ್ರದ ಚಿತ್ರೀಕರಣ ನಾಳೆಯಿಂದ ಬೆಂಗಳೂರಿನಲ್ಲಿ ಹದಿಮೂರು ದಿನಗಳ ಕಾಲ ನಡೆಯಲಿದೆ. ಮೊದಲ ಹಂತದ ಈ ಶೂಟಿಂಗ್ ನಲ್ಲಿ ಕಿಚ್ಚ ಸುದೀಪ್ ಹಾಗೂ ಟಾಲಿವುಡ್ ನಟ ಶ್ರೀಕಾಂತ್ ಮಾತ್ರ ಭಾಗವಹಿಸಲಿದ್ದಾರೆ.

ಪ್ರಮುಖ ಪಾತ್ರದಲ್ಲಿ ತೆಲುಗು ನಟ ಶ್ರೀಕಾಂತ್

'ದಿ ವಿಲನ್' ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್ ರವರಿಗೂ ಪ್ರಮುಖ ಪಾತ್ರವಿದೆ. (ಪಾತ್ರದ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ) [ಶಿವಣ್ಣ-ಸುದೀಪ್ ಜೊತೆ 'ದಿ ವಿಲನ್' ಚಿತ್ರದಲ್ಲಿ ಟಾಲಿವುಡ್ ಸ್ಟಾರ್.! ಯಾರವರು.?]

ಶಿವರಾಜ್ ಕುಮಾರ್ ಸಖತ್ ಬಿಜಿ

'ದಿ ವಿಲನ್' ಚಿತ್ರದ ಮೊದಲ ಶೆಡ್ಯೂಲ್ ನಲ್ಲಿ ಶಿವರಾಜ್ ಕುಮಾರ್ ಭಾಗಿಯಾಗುತ್ತಿಲ್ಲ. ಕಾರಣ 'ಟಗರು' ಶೂಟಿಂಗ್ ನಲ್ಲಿ ಶಿವಣ್ಣ ಬಿಜಿಯಾಗಿದ್ದಾರೆ. 'ಟಗರು' ಮುಗಿದ ಬಳಿಕ ಶಿವಣ್ಣನ ಕಾಲ್ ಶೀಟ್ 'ದಿ ವಿಲನ್' ಚಿತ್ರಕ್ಕೆ ಸಿಗಲಿದೆ.

ಲಂಡನ್ ನಲ್ಲಿ ಸುದೀಪ್ ಜೊತೆಯಾಗ್ತಾರೆ ಶಿವಣ್ಣ

ಬೆಂಗಳೂರಿನಲ್ಲಿ ಮೊದಲ ಶೆಡ್ಯೂಲ್ ಮುಗಿದ ಬಳಿಕ 'ದಿ ವಿಲನ್' ಚಿತ್ರತಂಡ ಲಂಡನ್ ಗೆ ಹಾರಲಿದೆ. ಲಂಡನ್ ನಲ್ಲಿ ಸುದೀಪ್ ಹಾಗೂ ಶಿವಣ್ಣ ಜೊತೆಯಾಗಿ ಅಭಿನಯಿಸಲಿದ್ದಾರೆ.

'ದಿ ವಿಲನ್' ಶೂಟಿಂಗ್ ಎಲ್ಲೆಲ್ಲಿ.?

'ದಿ ವಿಲನ್' ಶೂಟಿಂಗ್ ಲಂಡನ್, ಬ್ಯಾಂಕಾಕ್, ಕೇರಳ, ಚೀನಾ ಸೇರಿದಂತೆ ಕಣ್ಮನ ಸೆಳೆಯುವ ಸುಂದರ ತಾಣಗಳಲ್ಲಿ ನಡೆಯಲಿವೆ ಎಂಬುದು ಮೂಲಗಳ ಮಾಹಿತಿ.

ಮೂರು ಶೇಡ್ ಗಳಲ್ಲಿ ಮಿಂಚಲಿದ್ದಾರೆ ಸುದೀಪ್

ಅಂದ್ಹಾಗೆ, 'ದಿ ವಿಲನ್' ಚಿತ್ರದಲ್ಲಿ ಸುದೀಪ್ ಮೂರು ಶೇಡ್ ಗಳಲ್ಲಿ ಮಿಂಚಲಿದ್ದಾರೆ. ಸುದೀಪ್ ಹಾಗೂ ಶಿವಣ್ಣ ರವರನ್ನ ಹಿಂದೆಂದೂ ನೋಡಿರದ ರೀತಿಯಲ್ಲಿ ನಿಮ್ಮ ಮುಂದೆ ತರಲಿದ್ದಾರಂತೆ ನಿರ್ದೇಶಕ ಪ್ರೇಮ್.

English summary
Kannada Actor Shiva Rajkumar and Kiccha Sudeep starrer 'The Villain' shooting to start from April 3rd in Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada