Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಂಗಳೂರಿನಲ್ಲಿ ಮಹಾಮಳೆ : ರಸ್ತೆ ತುಂಬ ನೀರು, ಚಿತ್ರಮಂದಿರಗಳು ಖಾಲಿ ಖಾಲಿ!
ಬೆಂಗಳೂರಿನಲ್ಲಿ ಮಳೆ ಯಾವ ಸಮಯಕ್ಕೆ ಬರುತ್ತೆ.. ಯಾವ ಸಮಯಕ್ಕೆ ಬರಲ್ಲ.. ಎನ್ನುವುದನ್ನು ಹೇಳುವುದಕ್ಕೆ ಆಗುತ್ತಿಲ್ಲ. ದಿನದ 24 ಗಂಟೆಗಳಲ್ಲಿ ಕೆಲವೇ ಕೆಲವು ಗಂಟೆ ಬಿಡುವಿನಲ್ಲಿರುವ ಮಳೆರಾಯ ಉಳಿದ ಸಮಯದಲ್ಲಿ ಬಿಡದಂತೆ ಸುರಿಯುತ್ತಿದ್ದಾನೆ.
ಒಂದು ಕಡೆ ಮಳೆಯಿಂದ ಜನ ಜೀವನ ಸಹಜ ಸ್ಥಿತಿಯಲ್ಲಿ ಇಲ್ಲ. ಇನ್ನೊಂದು ಕಡೆ ಮಳೆಯಿಂದಾಗಿ ಚಿತ್ರಮಂದಿರದ ಮಾಲೀಕರಿಗೆ ದೊಡ್ಡ ತಲೆ ನೋವಾಗಿದೆ. ಜನ ಮನೆಯಿಂದ ಆಚೆ ಬರುವುದಕ್ಕೆ ನೂರು ಬಾರಿ ಯೋಚನೆ ಮಾಡುವ ಪರಿಸ್ಥಿತಿ ಇರುವಾಗ, ಚಿತ್ರಮಂದಿರಕ್ಕೆ ಹೋಗಿ ಯಾರು ಸಿನಿಮಾ ನೋಡುತ್ತಾರೆ ಹೇಳಿ..?
ಅಂದಹಾಗೆ, ಬೆಂಗಳೂರಿನ ಕೆಲ ಪ್ರತಿಷ್ಠಿತ ಚಿತ್ರಮಂದಿರದ ಮಾಲೀಕರು ಹಾಗೂ ಚಿತ್ರಮಂದಿರದ ಮ್ಯಾನೇಜರ್ ಗಳು ಮಳೆಯಿಂದ ಆಗುತ್ತಿರುವ ತೊಂದರೆಯ ಬಗ್ಗೆ ನಿಮ್ಮ 'ಫಿಲ್ಮಿ ಬೀಟ್ ಕನ್ನಡ'ದೊಂದಿಗೆ ಮಾತನಾಡಿದ್ದಾರೆ. ಮುಂದೆ ಓದಿ...

ದೊಡ್ಡ ಸಮಸ್ಯೆ
''ಬೆಂಗಳೂರಿನಲ್ಲಿ ಬರುತ್ತಿರುವ ಮಳೆಯಿಂದಾಗಿ ಚಿತ್ರಮಂದಿರದವರಿಗೆ ದೊಡ್ಡ ಸಮಸ್ಯೆ ಆಗಿದೆ.'' ಎಂದು 'ವೀರೇಶ್' ಚಿತ್ರಮಂದಿರದ ಮಾಲೀಕರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್ ಹೇಳಿದ್ದಾರೆ.

ಜನ ಕಡಿಮೆ
''ಮಳೆಯಿಂದ ಜನ ಬರುವುದು ಖಂಡಿತ ಕಡಿಮೆ ಆಗಿದೆ. ಬೆಳಗಿನ ಪ್ರದರ್ಶನ ತೀರಾ ಕಡಿಮೆ ಇದ್ದರೆ, ಮಧ್ಯಾಹ್ನ ಪರವಾಗಿಲ್ಲ. ಆದರೆ ಸಂಜೆ ಮಳೆ ಇರುವುದರಿಂದ ಜನ ಬರುವುದು ಬಹಳ ಕಷ್ಟ.'' - ಕೆ.ವಿ.ಚಂದ್ರಶೇಖರ್, ವೀರೇಶ್ ಚಿತ್ರಮಂದಿರ ಮಾಲೀಕರು ಹಾಗೂ ಕೆ.ಎಫ್.ಸಿ.ಸಿ ಮಾಜಿ ಅಧ್ಯಕ್ಷರು.

ವೀಕೆಂಡ್ ನಲ್ಲೂ ಜನ ಇಲ್ಲ
''ಸಾಮಾನ್ಯವಾಗಿ ವೀಕೆಂಡ್ ನಲ್ಲಿ ಹೆಚ್ಚು ಜನ ಸಿನಿಮಾಗೆ ಬರುತ್ತಿದ್ದರು. ಆದರೆ ಮಳೆಯಿಂದ ಎಲ್ಲ ದಿನ ಒಂದೇ ಆಗಿದೆ. ಅನೇಕ ಜನ ಬೈಕ್ ನಲ್ಲಿ ಬರುವವರು ಚಿತ್ರಮಂದಿರದಿಂದ ಮನೆ ತಲುಪುವುದು ಹೇಗೆ ಎಂದು ಯೋಚಿಸುತ್ತಾರೆ. ಹೀಗಾಗಿ ಅನೇಕರು ಚಿತ್ರಮಂದಿರದಿಂದ ದೂರ ಆಗಿದ್ದಾರೆ''. - ಕೆ.ವಿ.ಚಂದ್ರಶೇಖರ್, ವೀರೇಶ್ ಚಿತ್ರಮಂದಿರ ಮಾಲೀಕರು ಹಾಗೂ ಕೆ.ಎಫ್.ಸಿ.ಸಿ ಮಾಜಿ ಅಧ್ಯಕ್ಷರು.

ಕಲೆಕ್ಷನ್ ಕಡಿಮೆ
''ನಮ್ಮ ಚಿತ್ರಮಂದಿರದಲ್ಲಿ ನಿನ್ನೆ ಬೆಳ್ಳಗೆ 15 ಸಾವಿರ ರೂಪಾಯಿ ಕಲೆಕ್ಷನ್ ಆಗಿತ್ತು. ಆದರೆ ಮಧ್ಯಾಹ್ನ ಮಳೆ ಬಂದು ಬರಿ 1 ಸಾವಿರ ರೂಪಾಯಿ ಕಲೆಕ್ಷನ್ ಆಯಿತು. ಮಳೆ ಸಮಯದಲ್ಲಿ ಚಿತ್ರಮಂದಿರದ ಹತ್ತಿರ ಇದ್ದರವರು ಸುಮ್ಮನೆ ಮಳೆ ನಿಲ್ಲುವ ವರೆಗೆ ಅಂತ ಸಿನಿಮಾಗೆ ಬರುತ್ತಾರೆ. ರಿಸ್ಕ್ ತಗೆದುಕೊಂಡು ಮನೆಯಿಂದ ಜನ ಬರುವುದಿಲ್ಲ.'' - ಕೆ.ವಿ.ಚಂದ್ರಶೇಖರ್, ವೀರೇಶ್ ಚಿತ್ರಮಂದಿರ ಮಾಲೀಕರು ಹಾಗೂ ಕೆ.ಎಫ್.ಸಿ.ಸಿ ಮಾಜಿ ಅಧ್ಯಕ್ಷರು.

ಗಾಂಧಿನಗರದ ಚಿತ್ರಮಂದಿರಗಳ ಕಥೆಯೂ ಇದೆ
ಗಾಂಧಿನಗರದ ಪ್ರಮುಖ ಚಿತ್ರಮಂದಿರಗಳಾದ 'ಸಂತೋಷ್' ಚಿತ್ರಮಂದಿರದ ಮ್ಯಾನೇಜರ್ ಗಣೇಶ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಮಳೆಯಿಂದ ನಮ್ಮ ಚಿತ್ರಮಂದಿರ ಖಾಲಿ ಆಗಿದೆ ಎನ್ನುತ್ತಾರೆ ಗಣೇಶ್.

ರಾತ್ರಿ ಜನ ಕಡಿಮೆ
''ನಮ್ಮಲ್ಲಿ ಸದ್ಯ 'ತಾರಕ್' ಚಿತ್ರ ಇದೆ ಆದರು ಕಲೆಕ್ಷನ್ ಡಲ್ ಆಗಿದೆ. ದಿನ ಸಂಜೆ ಮಳೆ ಬರುವುದರಿಂದ ಸಂಜೆ ಜನ ಬರುವುದಿಲ್ಲ. ಸಂಜೆ 7.30ರ ಪ್ರದರ್ಶನ 10 ಗಂಟೆಗೆ ಮುಗಿಯುತ್ತದೆ ಆ ನಂತರ ಮಳೆಯ ಜೊತೆಗೆ ಟ್ರಾಫಿಕ್ ಜಾಮ್ ನಲ್ಲಿ ಮನೆಗೆ ಹೋಗುವುದು ಜನಕ್ಕೆ ಕಷ್ಟ ಆಗುವುದರಿಂದ ಜನ ತೀರ ಕಡಿಮೆ. ರಾತ್ರಿ ನಮ್ಮಲ್ಲಿ ಬರಿ 5 ಸಾವಿರ ರೂಪಾಯಿ ಕಲೆಕ್ಷನ್ ಅಷ್ಟೆ ಆಗುತ್ತಿದೆ.'' - ಗಣೇಶ್, ಸಂತೋಷ್ ಚಿತ್ರಮಂದಿರದ ಮ್ಯಾನೇಜರ್.

ಭೂಮಿಕಾ ಚಿತ್ರಮಂದಿರದಲ್ಲಿ
''ಮೆಜಸ್ಟಿಕ್ ನಲ್ಲಿ ಸಿಕ್ಕಾಪಟ್ಟೆ ಮಳೆ. ಶೋ ಸಮಯದಲ್ಲಿ ಮಳೆ ಬಂದರೆ ಸಾಮಾನ್ಯವಾಗಿಯೇ ಜನ ಕಡಿಮೆ ಆಗುತ್ತಾರೆ. ಈಗ ಹಿಂದಿನ ರೀತಿ ಇಲ್ಲ. ಜನ ಈಗ ಮಾಮೂಲಿ ದಿನವೇ ಚಿತ್ರಮಂದಿರಕ್ಕೆ ಬರುವುದಕ್ಕೆ ಯೋಚನೆ ಮಾಡುತ್ತಾರೆ ಇನ್ನೂ ಮಳೆ ಅಂದರೆ ತುಂಬ ಕಷ್ಟ. ನಮಗೂ ಕೂಡ ಲಾಸ್ ಆಗುತ್ತಿದೆ. ಮಳೆಯಿಂದ ಶೇಕಡ 10 ರಿಂದ 20% ಜನ ಕಡಿಮೆ ಆಗಿದ್ದಾರೆ.'' - ಕುಮಾರ್, ಭೂಮಿಕಾ ಚಿತ್ರಮಂದಿರದ ಮ್ಯಾನೇಜರ್.