»   » ಬಿಗ್ ಬಾಸ್: ಒಳ್ಳೆ ಹುಡುಗ ಪ್ರಥಮ್ ಮನೆಯಲ್ಲಿ ಕಳ್ಳತನ

ಬಿಗ್ ಬಾಸ್: ಒಳ್ಳೆ ಹುಡುಗ ಪ್ರಥಮ್ ಮನೆಯಲ್ಲಿ ಕಳ್ಳತನ

Posted By:
Subscribe to Filmibeat Kannada

'ಬಿಗ್ ಬಾಸ್ ಸೀಸನ್-4ನ ವಿಜೇತ ಪ್ರಥಮ್ ಅವರ ಮನೆಯಲ್ಲಿ ಭಾನುವಾರ ರಾತ್ರಿ ಕಳ್ಳತನವಾಗಿದೆ. ಬೆಂಗಳೂರಿನ ಲಗ್ಗೆರೆಯಲ್ಲಿರುವ ಪ್ರಥಮ್ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಕಳ್ಳತನ ಮಾಡಲಾಗಿದೆ.

ಮನೆಯ ಬೀಗ ಒಡೆದು ಒಳನುಗ್ಗಿರುವ ಕಳ್ಳರು ಲ್ಯಾಪ್ ಟಾಪ್, ಮೊಬೈಲ್, ಮತ್ತು 30 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.['ಬಿಗ್ ಬಾಸ್' ಹಣದ ವಿಚಾರದಲ್ಲಿ ಸಿಡಿದೆದ್ದ 'ಒಳ್ಳೆ ಹುಡುಗ ಪ್ರಥಮ್']

Theft at BiggBoss Winner Pratham's Home

ಇಲ್ಲಿ ಗಮನಿಸಬೇಕಾದ ವಿಷಯ ಅಂದ್ರೆ, ಪ್ರಥಮ್ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಚಿತ್ರ 'ದೇವ್ರವ್ನೆ ಬುಡು ಗುರು' ಸಿನಿಮಾದ ಹಾರ್ಡ್ ಡಿಸ್ಕ್ ಅನ್ನೂ ಸಹ ಕಳ್ಳತನ ಮಾಡಿದ್ದಾರೆ.['ದೇವ್ರಂಥ ಮನುಷ್ಯ' ಪ್ರಥಮ್ ಗೆ ಇಬ್ಬರು ನಾಯಕಿಯರು]

ಅಕುಲ್ ಬಾಲಾಜಿ ನಾಯಕರಾಗಿರುವ ಈ ಚಿತ್ರವನ್ನು ಪ್ರಥಮ್ ನಿರ್ದೇಶಿಸುತ್ತಿದ್ದರು. ಕಳೆದ ಮೂರುವರೆ ವರ್ಷಗಳಿಂದ ಚಿತ್ರದ ಕೆಲಸ ನಡೆಯುತ್ತಿತ್ತು. ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಥಮ್ ದೂರು ದಾಖಲಿಸಿದ್ದಾರೆ.[ಪ್ರಥಮ್ ಕಾಲೆಳೆದ ಸೃಜನ್ ವಿರುದ್ಧ ಸಿಟ್ಟಿಗೆದ್ದ ಕನ್ನಡ ವೀಕ್ಷಕರು.!]

English summary
Theft at BiggBoss Kannada 4 Winner Pratham's Banglore Home on Sunday Night (April 2nd).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada