For Quick Alerts
  ALLOW NOTIFICATIONS  
  For Daily Alerts

  ಮೊದಲ 100 - 1000 ಕೋಟಿ, ದೇಶದಲ್ಲೇ ಹೆಚ್ಚು ಗಳಿಸಿದ ಚಿತ್ರ; ಯಶ್ ಹೆಸರಲ್ಲಿರುವ ಬೃಹತ್ ದಾಖಲೆಗಳಿವು!

  |

  ಯಶ್.. 2015ರ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಸ್ಟೇಜ್ ಹತ್ತಿ 'ಇದು ಆರಂಭ ಅಷ್ಟೇ, ಕನ್ನಡ ಚಿತ್ರರಂಗದತ್ತ ಇಡೀ ದೇಶವೇ ತಿರುಗಿ ನೋಡುತ್ತೆ' ಎಂದು ಹೆಮ್ಮೆಯಿಂದ ಸ್ಪಷ್ಟ ವಿಶ್ವಾಸದಿಂದ ಹೇಳಿಕೆ ನೀಡಿದ್ದರು. ಅಂದು ಯಶ್ ಹೇಳಿಕೆ ಕಂಡು ವೇದಿಕೆ ಮೇಲೆ ನಿಂತು ಹೇಳಿಕೆಯನ್ನು ಯಾರೂ ಬೇಕಾದ್ರೂ ನೀಡ್ತಾರೆ, ಅದನ್ನು ನಿಜರೂಪಕ್ಕೆ ತರುವ ಕೆಲಸ ಯಾರೂ ಮಾಡಲ್ಲ ಎಂದು ಕಾಲೆಳೆದವರೂ ಉಂಟು.

  ಆದರೆ ಆ ಹೇಳಿಕೆ ನಂತರ ಮತ್ತೆಲ್ಲೂ ಅದರ ಬಗ್ಗೆ ಮಾತನಾಡದ ಯಶ್ ಕೆಲಸದ ಮೂಲಕ ಉತ್ತರವನ್ನು ನೀಡಿದರು. ಕೆಜಿಎಫ್ ಚಿತ್ರವನ್ನು ಕನ್ನಡ ಮಾತ್ರವಲ್ಲ, ಪ್ಯಾನ್ ಇಂಡಿಯಾ ಚಿತ್ರ ಮಾಡೋಣ ಎಂದು ಪಟ್ಟು ಹಿಡಿದು ಗೆದ್ದರು. ಮೊದಲಿಗೆ ಬಿಡುಗಡೆಗೊಂಡ ಕೆಜಿಎಫ್ ಚಾಪ್ಟರ್ 1 ಯಶಸ್ವಿಯಾಗಿ ಕನ್ನಡದ ಮೊದಲ ನೂರು ಕೋಟಿ ಚಿತ್ರವಾಗಿ ಹೊರಹೊಮ್ಮಿತ್ತು. 'ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಅಂತ ಒಂದು ಚಿತ್ರ ಬಂದಿದೆ ನೋಡಿದ್ಯಾ' ಎಂದು ಪರಭಾಷಿಗರು ಮಾತನಾಡಿಕೊಳ್ಳುವ ಮಟ್ಟಕ್ಕೆ ಚಿತ್ರ ಗೆದ್ದಿತ್ತು.

  ಈ ಚಿತ್ರ ಎಷ್ಟರ ಮಟ್ಟಕ್ಕೆ ಹೆಸರು ಮಾಡಿತ್ತೆಂದರೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಬರೋಬ್ಬರಿ 2.14 ಮಿಲಿಯನ್ ಟಿಕೆಟ್‌ಗಳು ಮೊದಲನೇ ಕೇವಲ ಬುಕ್ ಮೈ ಶೋ ಒಂದರಲ್ಲಿಯೇ ಮಾರಾಟವಾಗಿ ನೂತನ ದಾಖಲೆ ಸೃಷ್ಟಿಯಾಗಿತ್ತು. ಹೀಗೆ ಕೆಜಿಎಫ್ ಎಂಬ ಚಿತ್ರ ಸರಣಿಯ ಮೂಲಕ ಇಡೀ ವಿಶ್ವದಾದ್ಯಂತ ಇರುವ ಸಿನಿ ಪ್ರೇಮಿಗಳು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುವ ಹಾಗೆ ಮಾಡಿರುವ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಮತ್ರು ಚಿತ್ರತಂಡ ಕನ್ನಡ ಚಿತ್ರರಂಗದ ಸುವರ್ಣ ಯುಗ ಮರಳಿ ಬರುವಂತೆ ಮಾಡಿದ್ದಾರೆ. ಯಶ್ ಕೆಜಿಎಫ್ ಮೂಲಕ ದಾಖಲೆ ಬರೆಯಲು ಆರಂಭಿಸಿದವರಲ್ಲ, ಅದಕ್ಕೂ ಮೊದಲೇ ಹಲವಾರು ಮೊದಲುಗಳನ್ನು ಹುಟ್ಟುಹಾಕಿದ್ದರು. ಹಾಗಾದರೆ ಯಶ್ ಹೆಸರಿನಲ್ಲಿರುವ ವಿಶಿಷ್ಟ ಮೊದಲು ದಾಖಲೆಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ.

  ಮೊದಲ 100 ಕೋಟಿ, ಮೊದಲ 1000 ಕೋಟಿ

  ಮೊದಲ 100 ಕೋಟಿ, ಮೊದಲ 1000 ಕೋಟಿ

  ಕನ್ನಡ ಚಿತ್ರರಂಗಕ್ಕೆ ನೂರು ಕೋಟಿ ಕ್ಲಬ್ ಅನ್ನು ಪರಿಚಯಿಸಿದ್ದು ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ ಚಾಪ್ಟರ್ 1 ಮೂಲಕ ಯಶ್ ನೂರು ಕೋಟಿ, ಇನ್ನೂರು ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡದ ನಟ ಎಂಬ ದಾಖಲೆಯನ್ನು ಬರೆದರು. ಇನ್ನು ಕೆಜಿಎಫ್ ಚಾಪ್ಟರ್ 2 ಮೂಲಕ ಸಾವಿರ ಕೋಟಿ ಕ್ಲಬ್ ಸೇರಿದ ಕನ್ನಡದ ಮೊದಲ ನಟ ಎಂಬ ದಾಖಲೆಯನ್ನೂ ಸಹ ಯಶ್ ಹೊಂದಿದ್ದಾರೆ.

  ದೇಶದಲ್ಲೇ ಅತಿಹೆಚ್ಚು ಗಳಿಸಿದ ಚಿತ್ರ

  ದೇಶದಲ್ಲೇ ಅತಿಹೆಚ್ಚು ಗಳಿಸಿದ ಚಿತ್ರ

  ಇನ್ನು ಯಶ್ ಹೆಸರಿನಡಿಯಲ್ಲಿ 'ವರ್ಷವೊಂದರಲ್ಲಿ ಅತಿಹೆಚ್ಚು ಗಳಿಸಿದ ಚಿತ್ರ' ( Highest Grosser Of The Year ) ಎಂಬ ದಾಖಲೆಯೂ ಸಹ ಇದೆ. ಅದೂ ಸಹ ಭಾರತದ ಬಾಕ್ಸ್ ಆಫೀಸ್‌ನಲ್ಲಿ ವರ್ಷವೊಂದರಲ್ಲಿ ಅತಿಹೆಚ್ಚು ಗಳಿಸಿದ ಚಿತ್ರ. ಹೌದು, 2022ರಲ್ಲಿ ಕೆಜಿಎಫ್ ಚಾಪ್ಟರ್ 2 ಬರೋಬ್ಬರಿ 1250 ಕೋಟಿ ಗಳಿಸಿತ್ತು. ಈ ಮೂಲಕ ಈಗಿನ ತಲೆಮಾರಿನಲ್ಲಿ ವರ್ಷವೊಂದರಲ್ಲಿ ದೇಶದಲ್ಲೇ ಅತಿಹೆಚ್ಚು ಗಳಿಸಿದ ಚಿತ್ರ ನೀಡಿದ ಕನ್ನಡದ ನಟ ಎಂಬ ದಾಖಲೆಯನ್ನು ಯಶ್ ಹೊಂದಿದ್ದಾರೆ.

  ಮೂರು ಇಂಡಸ್ಟ್ರಿ ಹಿಟ್‌

  ಮೂರು ಇಂಡಸ್ಟ್ರಿ ಹಿಟ್‌

  ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಹಿಂದಿಕ್ಕುವ ಚಿತ್ರವನ್ನು ಇಂಡಸ್ಟ್ರಿ ಹಿಟ್ ಎಂದು ಕರೆಯಲಾಗುತ್ತೆ. ಈ ರೀತಿಯ ದಾಖಲೆಯನ್ನು ಬರೋಬ್ಬರಿ ಮೂರು ಬಾರಿ ಯಶ್ ಚಿತ್ರಗಳು ಮಾಡಿವೆ. ಮೊದಲಿಗೆ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ಮೂಲಕ ತನ್ನ ಸಿನಿ ಕೆರಿಯರ್‌ನ ಮೊದಲ ಇಂಡಸ್ಟ್ರಿ ಹಿಟ್ ಬಾರಿಸಿದ ಯಶ್ ಕೆಜಿಎಫ್ ಚಾಪ್ಟರ್ 1 ಮೂಲಕ ಎರಡನೇ ಇಂಡಸ್ಟ್ರಿ ಹಿಟ್ ಹಾಗೂ ಕೆಜಿಎಫ್ ಚಾಪ್ಟರ್ 2 ಮೂಲಕ ಮೂರನೇ ಇಂಡಸ್ಟ್ರಿ ಹಿಟ್ ಅನ್ನು ಬಾರಿಸಿದರು. ಪ್ರಸ್ತುತ ಕನ್ನಡದ ಯಾವ ನಟನೂ ಸಹ ಇಷ್ಟು ಇಂಡಸ್ಟ್ರಿ ಹಿಟ್‌ಗಳನ್ನು ಹೊಂದಿಲ್ಲ. ಇವು ಬಾಕ್ಸ್ ಆಫೀಸ್ ವಿಚಾರದಲ್ಲಿ ಯಶ್ ನಿರ್ಮಿಸಿದ ಮೊದಲುಗಳಾಗಿವೆ ಹಾಗೂ ಇವುಗಳನ್ನು ಕನ್ನಡದ ಉಳಿದ ನಟರು ಮುರಿಯುವುದೂ ಸಹ ಅತಿ ಕಷ್ಟ ಸಾಧ್ಯ.

  English summary
  These box office records of Rocking Star Yash are really very hard to break. Take a look
  Monday, January 9, 2023, 19:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X