For Quick Alerts
  ALLOW NOTIFICATIONS  
  For Daily Alerts

  ನಮ್ಮ 'ತೋತಾಪುರಿ' ಓಟಿಟಿ ಹಕ್ಕು ಹೈ ರೇಟ್‌ಗೆ ಸೇಲ್ ಆಗಿದೆ ಎಂದ ಜಗ್ಗೇಶ್; ಇದು ಕಾಂತಾರಕ್ಕಿಂತ ದೊಡ್ಡ ಮೊತ್ತ!

  |

  ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರ ಹಾಗೂ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಜಗ್ಗೇಶ್ ನಾಯಕನಾಗಿ ನಟಿಸಿರುವ ತೋತಾಪುರಿ ಚಿತ್ರಗಳು ಸೆಪ್ಟೆಂಬರ್ 30ರಂದು ಒಟ್ಟಿಗೆ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟವು. ಈ ಪೈಕಿ ಕಾಂತಾರ ನಿರೀಕ್ಷೆಗೂ ಮೀರಿದ ಯಶಸ್ಸು ಪಡೆದುಕೊಂಡು ಅಬ್ಬರಿಸುತ್ತಿದ್ದರೆ, ತೋತಾಪುರಿ ಸಾಮಾನ್ಯ ಪ್ರದರ್ಶನ ಕಾಣುತ್ತಿದೆ.

  ನಟಿ ದಿವ್ಯಾ ಮೇಲೆ ಹಲ್ಲೆ: ಸ್ಪಷ್ಟನೆ ನೀಡಿದ ಪತಿ ಅಮ್ಜದ್ ಖಾನ್ನಟಿ ದಿವ್ಯಾ ಮೇಲೆ ಹಲ್ಲೆ: ಸ್ಪಷ್ಟನೆ ನೀಡಿದ ಪತಿ ಅಮ್ಜದ್ ಖಾನ್

  ಇನ್ನು ಕಾಂತಾರದ ಅಬ್ಬರದ ನಡುವೆ ಕಾಂತಾರ ಜತೆಗೆ ಬಿಡುಗಡೆಯಾದ ಚಿತ್ರಗಳು ಹಾಗೂ ಕಾಂತಾರ ಬಿಡುಗಡೆಯ ಹಿಂದಿನ ವಾರ ಮತ್ತು ನಂತರದ ದಿನಗಳಲ್ಲಿ ಬಿಡುಗಡೆಯಾದ ಚಿತ್ರಗಳ ಸದ್ದು ಪ್ರೇಕ್ಷಕರ ಕಿವಿಗೆ ಹೆಚ್ಚಾಗಿ ಬೀಳಲಿಲ್ಲ ಹಾಗೂ ಪ್ರೇಕ್ಷಕರು ಸಹ ಕಾಂತಾರ ಬಿಟ್ಟು ಇತರೆ ಚಿತ್ರಗಳ ಕಡೆ ಹೆಚ್ಚಾಗಿ ಮುಖ ಮಾಡಲಿಲ್ಲ ಎಂದರೆ ತಪ್ಪಾಗಲಾರದು. ಇದು ಯಾರ ಅಭಿಪ್ರಾಯವು ಅಲ್ಲ ಬದಲಾಗಿ ಜನತೆ ನೀಡಿರುವ ಪ್ರತಿಕ್ರಿಯೆಯಾಗಿದೆ.

  ಅಕ್ಟೋಬರ್ 7ರ ಶುಕ್ರವಾರದಂದು ಬೆಂಗಳೂರಿನ ಯಾವ ಮುಖ್ಯ ಚಿತ್ರಮಂದಿರದಲ್ಲಿ ಯಾವ ಚಿತ್ರ?ಅಕ್ಟೋಬರ್ 7ರ ಶುಕ್ರವಾರದಂದು ಬೆಂಗಳೂರಿನ ಯಾವ ಮುಖ್ಯ ಚಿತ್ರಮಂದಿರದಲ್ಲಿ ಯಾವ ಚಿತ್ರ?

  ಇನ್ನು ಕಾಂತಾರ ಚಿತ್ರದ ಜತೆಗೆ ತೆರೆಕಂಡ ಜಗ್ಗೇಶ್ ಅಭಿನಯದ ತೋತಾಪುರಿ ಚಿತ್ರದ ಕಥೆ ಏನು, ಚಿತ್ರ ಜನರಿಗೆ ಇಷ್ಟವಾಯಿತಾ, ಚಿತ್ರ ಒಳ್ಳೆಯ ಗಳಿಕೆ ಮಾಡಿತಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಈ ಬಗ್ಗೆ ಚಿತ್ರತಂಡದಿಂದಲೂ ಕೂಡ ಹೆಚ್ಚೇನೂ ಮಾಹಿತಿಗಳು ಹೊರಬೀಳುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ತೋತಾಪುರಿ ಚಿತ್ರತಂಡ ಪತ್ರಿಕಾಗೋಷ್ಠಿಯೊಂದನ್ನು ಕರೆಯುವುದರ ಮೂಲಕ ತಮ್ಮ ಚಿತ್ರ ಯಶಸ್ಸು ಸಾಧಿಸಿದೆ ಎಂಬುದನ್ನು ತಿಳಿಸಿತು. ಈ ಪತ್ರಿಕಾಗೋಷ್ಠಿಯಲ್ಲಿ ಕೋಪದಿಂದಲೇ ಮಾತನಾಡಿದ ಜಗ್ಗೇಶ್ ಚಿತ್ರದ ಕಲೆಕ್ಷನ್, ಚಿತ್ರದ ಓಟಿಟಿ ಹಕ್ಕು ಹಾಗೂ ಇನ್ನಿತರೆ ವಿಷಯಗಳ ಕುರಿತ ಮಾಹಿತಿಗಳನ್ನು ಹಂಚಿಕೊಂಡರು.

  ತೋತಾಪುರಿ ದಸರಾ ಆನೆಯಂತೆ ಸಾಗುತ್ತಿದೆ!

  ತೋತಾಪುರಿ ದಸರಾ ಆನೆಯಂತೆ ಸಾಗುತ್ತಿದೆ!

  ತೋತಾಪುರಿ ಸಿನಿಮಾದ ಯಶಸ್ಸಿನ ಕುರಿತು ಮಾತನಾಡಿದ ನಟ ಜಗ್ಗೇಶ್ ನನ್ನ ತೋತಾಪುರಿ ಸಿನಿಮಾ ದಸರಾ ಅಂಬಾರಿ ಆನೆಯಂತೆ ಗಾಂಭೀರ್ಯದಿಂದ ಎಲ್ಲೂ ಅಲುಗಾಡದೆ ನೇರವಾಗಿ ಸಾಗುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಹಲವಾರು ಅಧಿಕಾರಿಗಳು ಹಾಗೂ ವಿಕಲಚೇತನರು ಸಹ ತೋತಾಪುರಿ ಚಿತ್ರವನ್ನ ನೋಡಿ ಮೆಚ್ಚಿಕೊಂಡಿದ್ದಾರೆ ಹಾಗೂ ಕರೆ ಮಾಡಿ ಎಂಥ ಅದ್ಭುತ ಚಿತ್ರ ಮಾಡಿದ್ದೀರಾ ಎಂದು ಹೊಗಳುತ್ತಿದ್ದಾರೆ ಎಂದು ಜಗ್ಗೇಶ್ ಹೇಳಿಕೊಂಡರು.

  ಒಟಿಟಿ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ, ಕಾಂತಾರಕ್ಕಿಂತ ಹೆಚ್ಚು!

  ಒಟಿಟಿ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ, ಕಾಂತಾರಕ್ಕಿಂತ ಹೆಚ್ಚು!

  ಮಾತು ಮುಂದುವರಿಸಿದ ನಟ ಜಗ್ಗೇಶ್ ತಮ್ಮ ತೋತಾಪುರಿ ಚಿತ್ರದ ಓಟಿಟಿ ಹಕ್ಕನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದ್ದೇವೆ ಎಂದರು. 10 ಕೋಟಿ ರೂಪಾಯಿಗಳಿಗೆ ತೋತಾಪುರಿ ಚಿತ್ರದ ಓಟಿಟಿ ಹಕ್ಕು ಮಾರಾಟವಾಗಿದೆ ಎಂಬುದನ್ನು ನಟ ಜಗ್ಗೇಶ್ ಬಿಚ್ಚಿಟ್ಟರು. ಈ ಮೂಲಕ ತೋತಾಪುರಿ ಚಿತ್ರದ ಒಟಿಟಿ ಹಕ್ಕು ಕಾಂತಾರ ಚಿತ್ರದ ಓಟಿಟಿ ಹಕ್ಕನ್ನು ಮೀರಿಸಿ ಮುನ್ನುಗ್ಗಿದೆ. ಅಂದಹಾಗೆ ಕಾಂತಾರ ಚಿತ್ರದ ಓಟಿಟಿ ಹಕ್ಕು 7 ಕೋಟಿ ರೂಪಾಯಿಗಳಿಗೆ ಮಾರಾಟವಾಗಿತ್ತು.

  ತೋತಾಪುರಿ ಓಟಿಟಿಗೆ ಬಂದ್ಮೇಲೆ ಜನ ಮೆಚ್ಚಿಕೊಳ್ಳುತ್ತಾರೆ

  ತೋತಾಪುರಿ ಓಟಿಟಿಗೆ ಬಂದ್ಮೇಲೆ ಜನ ಮೆಚ್ಚಿಕೊಳ್ಳುತ್ತಾರೆ

  ಇನ್ನು ತೋತಾಪುರಿ ಚಿತ್ರದ ಓಟಿಟಿ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎಂದ ನಟ ಜಗ್ಗೇಶ್ ಚಿತ್ರ ಓಟಿಟಿಗೆ ಬಂದ ನಂತರ ಜನ ಮೆಚ್ಚಿಕೊಳ್ಳುತ್ತಾರೆ ಎಂದಿದ್ದಾರೆ. ತೋತಾಪುರಿ ಚಾಪ್ಟರ್ 1 ಚಿತ್ರವನ್ನು ಓಟಿಟಿಯಲ್ಲಿ ವೀಕ್ಷಿಸಲಿರುವ ಸಿನಿಪ್ರೇಕ್ಷಕರು ಎರಡನೇ ಭಾಗಕ್ಕೋಸ್ಕರ ಕಾಯುವುದು ಖಚಿತ ಎಂದು ಸಹ ನಟ ಜಗ್ಗೇಶ್ ವಿಶ್ವಾಸ ವ್ಯಕ್ತಪಡಿಸಿದರು.

  English summary
  Thothapuri Chapter 1 OTT rights sold for 10 crores rupees says Jaggesh
  Saturday, October 8, 2022, 9:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X