For Quick Alerts
  ALLOW NOTIFICATIONS  
  For Daily Alerts

  ಇರೋ ಒಂದಷ್ಟು ಥಿಯೇಟರಿಗಾಗಿ ನಮ್ ನಮ್ಮಲ್ಲೇ ಗುದ್ದಾಟ!

  |

  ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಯಶಸ್ಸಿನ ಬೆನ್ನೇರಲು ಅಂಬೆಗಾಲಿನಲ್ಲಿ ಸಾಗುತ್ತಿರುವ ಕನ್ನಡ ಚಿತ್ರೋದ್ಯಮ ಇತ್ತೀಚಿನ ಕೆಲ ವರ್ಷಗಳಲ್ಲಿ ಸುದ್ದಿ ಮಾಡುತ್ತಿರುವುದು ಸಿನಿ ಪ್ರೇಕ್ಷಕರಿಗೆ ಸಂತೋಷ ತರುವ ವಿಚಾರ.

  ಹೊಸ ವರ್ಷದ ಮೊದಲ ವಾರದಲ್ಲಿ ದೊಡ್ಡ ಬಜೆಟಿನ ಎರಡು ಚಿತ್ರಗಳು ಬಿಡುಗಡೆಯಾಗುತ್ತಿದೆ. ಗಣೇಶ್ ಅಭಿನಯದ 'ಖುಷಿ ಖುಷಿಯಾಗಿ' ಚಿತ್ರ ಗುರುವಾರ (ಜ 1) ಬಿಡುಗಡೆಯಾಗಿದ್ದರೆ, ಉಪೇಂದ್ರ ಅಭಿನಯದ 'ಶಿವಂ' ಚಿತ್ರ ಜನವರಿ 2ರಂದು ತೆರೆಕಾಣುತ್ತಿದೆ.

  ರಾಜ್ಯದಲ್ಲಿ ಇರೋ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳಿಗೆಂದೇ ಮೀಸಲಾಗಿರುವ ಚಿತ್ರಮಂದಿರಗಳು ಒಂದಷ್ಟಿವೆ. ಅದರಲ್ಲಿ ಈ ಎರಡು ಚಿತ್ರಮಂದಿರಗಳು ತಮ್ಮ ತಮ್ಮ ಚಿತ್ರಕ್ಕಾಗಿ ಗುದ್ದಾಡುವ ಅನಿವಾರ್ಯತೆ ಎದುರಾಗಿದೆ. (ಯಶ್ : ರಾಮಾಚಾರಿ ವಿಮರ್ಶೆ)

  ಇನ್ನು ಹೋದ ವಾರ ಬಿಡುಗಡೆಯಾದ ಯಶ್ ಅಭಿನಯದ 'ಮಿಸ್ಟರ್ ಎಂಡ್ ಮಿಸೆಸ್ ರಾಮಾಚಾರಿ' ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿರುವ ವಿಚಾರ ಗೊತ್ತೇ ಇದೆ.

  ಹೀಗಾಗಿ ಒಂದು ವಾರದ ಅವಧಿಯಲ್ಲಿ ಬಿಡುಗಡೆಯಾದ ಮೂರು ಬಿಗ್ ಬಜೆಟ್ ಚಿತ್ರಗಳು ಚಿತ್ರಮಂದಿರಕ್ಕಾಗಿ ಪರದಾಡದೇ ಇನ್ನೇನು ಆಗುತ್ತೆ.

  ಖುಷಿ ಖುಷಿಯಾಗಿ ಚಿತ್ರಕ್ಕೆ ಬೆಂಗಳೂರಿನ ಅನುಪಮ ಮೈನ್ ಥಿಯೇಟರ್ ಆದರೆ ಶಿವಂ ಚಿತ್ರಕ್ಕೆ ಕಪಾಲಿ ಮೈನ್ ಥಿಯೇಟರ್. ಗಣೇಶ್ ಅಭಿನಯದ ಈ ಚಿತ್ರ ಬೆಂಗಳೂರಿನ ನಲವತ್ತು ಚಿತ್ರಮಂದಿರ ಸೇರಿ ರಾಜ್ಯದ ಸುಮಾರು 140 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

  ಇನ್ನು ಶಿವಂ ಚಿತ್ರಕ್ಕೆ ಬೆಂಗಳೂರಿನ 50 ಚಿತ್ರಮಂದಿರ ಸಿಕ್ಕಿವೆ. ಒಟ್ಟಾರೆ ಶಿವಂ ಚಿತ್ರ ರಾಜ್ಯದ 170 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಈ ಎರಡು ಚಿತ್ರಗಳಿಂದ ಯಶ್ ಅಭಿನಯದ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರ ಸಂಖ್ಯೆ ಕಮ್ಮಿಯಾಗದೇ ಬೇರೆ ವಿಧಿಯಿಲ್ಲ.

  ಮೂರು ದೊಡ್ಡ ಚಿತ್ರಗಳು ಒಂದು ವಾರದ ಗ್ಯಾಪ್ ನಲ್ಲಿ ತೆರೆಗೆ ಬಂದರೂ ತೆಲುಗು, ತಮಿಳು ಚಿತ್ರವನ್ನೇ ಪ್ರದರ್ಶಿಸುವ ಚಿತ್ರಮಂದಿರಗಳು ಕನ್ನಡ ಚಿತ್ರವನ್ನು ಪ್ರದರ್ಶಿಸುವ ಮನಸ್ಸು ಮಾಡುತ್ತಿಲ್ಲ.

  ಒಟ್ಟಾರೆ ವರ್ಷದ ಮೊದಲ ವಾರದಲ್ಲೇ ಕನ್ನಡ ಚಿತ್ರಗಳಿಗೆ ಕನ್ನಡ ಚಿತ್ರಗಳೇ ಪೈಪೋಟಿಯಂತಾಗಿದೆ. ಚಿತ್ರೋದ್ಯಮದ ಹಿತದೃಷ್ಟಿಯಲ್ಲಿ ಇದು ಉತ್ತಮ ಬೆಳವಣಿಗೆಯಲ್ಲ.

  English summary
  Three Big Budget Kannada movies released/ releasing in a gap of just one week, and these movies facing theater problem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X